Crime News

ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ:

ಪಾದಚಾರಿ ಮಹಿಳೆಗೆ ಕಾರು ಡಿಕ್ಕಿಯಾಗಿ ಕಾಲು ಮುರಿದ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ನಿಡ್ತಕೊಪ್ಪಲು ಗ್ರಾಮದಲ್ಲಿ ನಡೆದಿದೆ.  ದಿನಾಂಕ 24-1-2019 ರಂದು ಹಾಸನ ಜಿಲ್ಲೆಯ ಗೋನಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಕೆಂಚಮ್ಮ ನವರು ನಿಡ್ತಕೊಪ್ಪಲು ಗ್ರಾಮಕ್ಕೆ ಅವರ ಸಂಬಂಧಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಹೋಗಿದ್ದು, ನಿಡ್ರಕೊಪ್ಪಲು ಗ್ರಾಮದಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರೊಂದು ಡಿಕ್ಕಿಯಾಗಿ ಅವರ ಕಾಲು ಮುರಿದು ಹೋಗಿದ್ದು, ಈ ಸಂಬಂಧ ಶನಿವಾಸಂತೆ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬಸ್‍ ಡಿಕ್ಕಿ:

ದಿನಾಂಕ 25-1-2019 ರಂದು ಗರ್ವಾಲೆ ಗ್ರಾಮದ ಅಯ್ಯಮ್ಮ ಎಂಬವರು ಅವರ ಸಂಬಂಧಿಕರಾದ ಭೀಮಯ್ಯ ಹಾಗು ಕುಟುಂಬಸ್ತರೊಂದಿಗೆ ಸೋಮವಾರಪೇಟೆ ಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಮಡಿಕೇರಿ ಕಡೆಯಿಂದ ಬಂದ ಬಸ್ಸು ಡಿಕ್ಕಿಯಾಗಿದ್ದು, ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಯ್ಯಮ್ಮ, ಭೀಮಯ್ಯ ಹಾಗು ಇತರ ಮೂವರಿಗ ಪೆಟ್ಟಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ಹಲ್ಲೆ:

ದಿನಾಂಕ 25-01-2019 ರಂದು ಬಾಳೆಲೆ ಗ್ರಾಮದ ಜೆ. ಸುರೇಂದ್ರ ಮತ್ತು ಕರಿಯ ಎಂಬುವರು ಕಾಣೆಯಾಗಿದ್ದ ಹಸುವನ್ನು ಹುಡುಕಿಕೊಂಡು ಚೆಟ್ಟಿಮಾಡ ಶಿವು ಎಂಬವರ ತೋಟದ ಬಳಿ ಇರುವ ರಸ್ತೆ ಕಡೆ ಹೋಗುತ್ತಿದ್ದಾಗ ಸಮಯ 14-00 ಗಂಟೆಗೆ ಚೆಟ್ಟಿಮಾಡ ಶಿವುರವರು ಜೆ. ಸುರೇಂದ್ರ ಮತ್ತು ಕರಿಯನನ್ನು ತಡೆದು ನಿಲ್ಲಿಸಿ ನೀವು ಯಾಕೆ ಇಲ್ಲಿಗೆ ಬಂದಿದ್ದೀರಾ ಎಂದು ಹೇಳಿ ಕೈಯಿಂದ ಶರೀರಕ್ಕೆ ಹೊಡೆದು ನೋವುಂಟುಪಡಿಸಿದ್ದಲ್ಲದೇ, ಮತ್ತೆ ಈ ಕಡೆ ಬಂದರೆ ಕೊಲೆ ಮಾಡದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡ ವ್ಯಕ್ತಿ ಆತ್ಮಹತ್ಯೆ:

ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಯವಕಪಾಡಿ ಗ್ರಾಮದ ಶ್ರೀಮತಿ ಬಿ.ಎನ್. ಗುಲಾಬಿಯವರ ಪತಿ 57 ವರ್ಷ ಪ್ರಾಯದ ನಂದಕುಮಾರ್ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 25-1-2019 ರಂದು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.