Crime News

ಅಪಘಾತ ಪ್ರಕರಣ

             ದಿನಾಂಕ 23-01-2019 ರಂದು ಮಡಿಕೇರಿ ನಗರದ ಡೈರಿ ಫಾರಂನ ನಿವಾಸಿ ಶಾಂತಿ ಎಂಬುವವರು ಇಂದಿರಾ ಕ್ಯಾಂಟೀನ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಡಿಸೋಜ ಎಂಬುವವರು ಸ್ಕೂಟರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಶಾಂತಿಯವರಿಗೆ ಡಿಕ್ಕಿಪಡಿಸಿ ಗಾಯಪಡಿಸಿದ್ದು, ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ಹೆಂಗಸಿನ ಕೊಲೆ

            ದಿನಾಂಕ 26-01-2019 ರಂದು ವಿರಾಜಪೇಟೆ ತಾಲೋಕಿನ ಅರಮೇರಿ ಗ್ರಾಮದ ನಿವಾಸಿಯಾದ ಪೂಣಚ್ಚನವರು ಕಾಫಿ ಕುಯ್ಯುವ ಕೆಲಸಕ್ಕೆಂದು ಜನರನ್ನು ಕರೆದುಕೊಂಡು ತೋಟಕ್ಕೆ ಹೋದಾಗ ದುರ್ವಾಸನೆ ಬಂದು ಹೋಗಿ ನೋಡಿದಾಗ ಗದ್ದೆಯ ಪಕ್ಕದಲ್ಲಿರುವ ಕುರುಚಲು ಗಿಡದ ಮದ್ಯೆ ಹೆಂಗಸಿನ ಕೊಳೆತ ಸ್ಥಿತಿಯಲ್ಲಿರುವ ಶವ ಕಂಡು ಬಂದಿದ್ದು, ಪಕ್ಕದಲ್ಲಿಯೇ ತಲೆ ಹಾಗೂ ಕೈಗಳು ಸಹಾ ಬೇರೆಯಾಗಿ ಬಿದ್ದಿದ್ದು, ಯಾರೋ ಕೊಲೆ ಮಾಡಿ ಬಿಸಾಡಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಪ್ರಕರಣ

            ದಿನಾಂಕ 26-01-2019 ರಂದು ಶನಿವಾರಸಂತೆಯ ಮಾದ್ರೆ ಗ್ರಾಮದ ಕಾಡಿನ ಸಾರ್ವಜನಿಕ ರಸ್ತೆಯಲ್ಲಿ ಜೂಜಾಟ ಆಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ತೆರಳಿ ದಾಳಿ ಮಾಡಿ ಆಟವಾಡುತ್ತಿದ್ದ ತಿಮ್ಮೇಗೌಡ, ವಿಶ್ವನಾಥ, ಚಂದ್ರಶೇಖರರವರನ್ನು ವಶಕ್ಕೆ ಪಡೆದುಕೊಂಡು, ಮಹೇಶ, ದೇವರಾಜ, ದೇವಪ್ಪ, ಹೂವಯ್ಯರವರು ಓಡಿಹೋಗಿದ್ದು, ಆಟಕ್ಕೆ ಬಳಸಿದ ನಗದು ಹಣ 3,200 ರೂ ವನ್ನು ವಶಪಡಿಸಿಕೊಂಡು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಕ್ರಮ ಮರಳು ಸಾಗಾಟ

            ದಿನಾಂಕ 24-01-2019 ರಂದು ಕೊಡ್ಲಿಪೇಟೆ ಉಪ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಗೋವಿಂರವರಿಗೆ ಮರಳು ಸಾಗಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಕೂಡ್ಲೂರು ಗ್ರಾಮಕ್ಕೆ ಹೋಗಿ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ಜೀಪಿನ್ನು ವಶಪಡಿಸಿಕೊಂಡು ಚಾಲಕ ರವಿರವರ ಮೇಲೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.