Crime News

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:

ಪೊನ್ನಂಪೇಟೆಠಾಣಾ ಸರಹದ್ದಿನ ಮತ್ತೂರು ಗ್ರಾಮದ ಪುತ್ತಮನೆ ಅನಿಲ್ ರವರು ದಿನಾಂಕ 26-1-2019 ರಂದು ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಪೊನ್ನಂಪೇಟೆ ಕೊಡವ ಸಮಾಜಕ್ಕೆ ಹೋಗಿದ್ದು, ಮದುವೆಗೆ ಬಂದ  ಚೇಲಾವರ ಗ್ರಾಮದ ಪಿ.ವಿನೋದ್ ಹಾಗು ಇತರೆ 5 ಜನರು ಸೇರಿ ವಿನಾಕಾರಣ ಪುತ್ತಮನೆ ಅನಿಲ್ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಗಾಪಡಿಸಿದ್ದು ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಶ‍್ರೀಮಂಗಲ ಠಾಣಾ ವ್ಯಾಪ್ತಿಯ ತಾವಳಗೇರಿ ಗ್ರಾಮದ ನಿವಾಸಿ ಜೆ.ಆರ್. ಲಕ್ಷ್ಮಿ ಎಂಬವರ ಪತಿ ವೇಣುಗೋಪಾಲ್ ಎಂಬವರು ಕೆಲವು ಸಮಯದಿಂದ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು ದಿನಾಂಕ 27-1-2019 ರಂದು ಅವರ ಮನೆಯ ಪಕ್ಕದ ತೋಟದಲ್ಲಿ ಕುತ್ತಿಗೆಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಕಾರು ಅಪಘಾತ ಚಾಲಕನಿಗೆ ಗಾಯ:

ಸಿದ್ದಾಪುರ ಠಾಣಾ ಸರಹದ್ದಿನ ಕರಡಿಗೋಡು ಗ್ರಾಮದ ಮೂಲೆ ತೋಡಿ ಎಂಬಲ್ಲಿ ಪಿ.ಎ. ಜಾನ್ ಅಬ್ರಾಹಂ ಎಂಬವರು ಜೋಸೆಫ್ ಶ್ಯಾಮ್ ಎಂಬವರ ಇನೋವಾ ಕಾರಿನಲ್ಲಿ ಪ್ರವಾಸಿಗರನ್ನು ಕೂರಿಸಿಕೊಂಡು ಸಿದ್ದಾಪುರ ಮಾರ್ಗವಾಗಿ ಆರೆಂಜ್ ಕೌಂಟಿಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ದನ ಅಡ್ಡ ಬಂದು ಕಾರು ಅಪಘಾತಕ್ಕೀಡಾಗಿ ಚಾಲಕ ಜಾನ್ ಅಬ್ರಾಹಂ ರವರು ಗಾಯಗೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.