Crime News

ಅಪಘಾತ ಪ್ರಕರಣ

             ದಿನಾಂಕ 27-01-2019 ರಂದು ಮಡಿಕೇರಿ ತಾಲೋಕಿನ ಐಕೊಳ ಗ್ರಾಮದ ನಿವಾಸಿಯಾದ ದೀಪಕ್ ರವರು ಸ್ಕೂಟರಿನಲ್ಲಿ ಹೋಗುತ್ತಿರುವಾಗ ಮೂರ್ನಾಡು ನಗರದ ದೀರ್ಘಕೇಶಿ ಪೊಟ್ರೋಲ್ ಪಂಪ್ ಹತ್ತಿರ ತಲುಪುವಾಗ ಎದುರಿನಿಂದ ಬಂದ ಮೋಟಾರು ಸೈಕಲನ್ನು ಅದರ ಸವಾರ ಯಾವುದೇ ಸೂಚನೆ ನೀಡದೇ ಪೆಟ್ರೋಲ್ ಬಂಕ್ ಕಡೆಗೆ ತಿರುಗಿಸಿದಾಗ ಸ್ಕೂಟರಿಗೆ ಡಿಕ್ಕಿಯಾಗಿ ಇಬ್ಬರಿಗೂ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ 28-01-2019 ರಂದು ಮಡಿಕೇರಿ ತಾಲೋಕಿನ ಕೆ ನಿಡುಗಣೆ ಗ್ರಾಮದ ಸಿದ್ದಿಕಾಡು ಪೈಸಾರಿಯ ನಿವಾಸಿಗಳಾದ ಅಭಿಲಾಷ, ರಾಜೇಶ್, ಸುಬ್ಬರವರು ಮತ್ತು ಮಮತ, ಪ್ರಮೋದ್ ರವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿಕೊಂಡಿದ್ದು ಈ ಬಗ್ಗೆ ಉಭಯಕಡೆಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಪ್ರಕರಣ

            ದಿನಾಂಕ 28-01-2019 ರಂದು ಸೋಮವಾರಪೇಟೆ ತಾಲೋಕಿನ ಗಣಗೂರು ಗ್ರಾಮದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿರುವುದಾಗಿ ಸೋಮವಾರಪೇಟೆ ಠಾಣೆಯ ಪಿ.ಎಸ್.ಐ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ದಾಳಿ ಮಾಡಿ ಆಟವಾಡುತ್ತಿದ್ದ ಗಣಗೂರು ಗ್ರಾಮದವರಾದ ಕೇಶವ, ಕುಳ್ಳಯ್ಯ, ಮಲ್ಲೇಶ, ಗಣೇಶರವರನ್ನು ವಶಕ್ಕೆ ತೆಗೆದುಕೊಂಡಿದ್ದು, ಮಂಜುನಾಥ ಮತ್ತು ಸತೀಶರವರು ಓಡಿಹೋಗಿದ್ದು, ಅವರಿಂದ ನಗದು ಹಣ 1800 ರೂವನ್ನು ವಶಪಡಿಸಿಕೊಂಡು, ಸೋಮವಾರಪೇಟೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತ ವ್ಯಕ್ತಿಯ ದುರ್ಮರಣ

           ದಿನಾಂಕ 27-01-2019 ರಂದು ಪಿರಿಯಾಪಟ್ಟಣ ತಾಲೋಕಿನ ಪಂಚವಳ್ಳಿಯ ನಿವಾಸಿ ಸುಬ್ರಮಣಿ ಎಂಬುವವರು ಮೋಟಾರು ಸೈಕಲಿನಲ್ಲಿ ಗೋಣಿಕೊಪ್ಪಲುವಿನಿಂದ ಪೊನ್ನಂಪೇಟೆಗೆ ಹೋಗುತ್ತಿರುವಾಗ ಅರ್ವತ್ತೋಕ್ಲು ಗ್ರಾಮದ ಕಾಫಿ ಬೋರ್ಡ್ ಹತ್ತಿರ ತಲುಪುವಾಗ ಎದುರಿನಿಂದ ಬಂದ ಹೋಂಡಾ ಆಕ್ಟಿವಾ ಸ್ಕೂಟರನ್ನು ಬೆಕ್ಕೆಸೊಡ್ಲೂರು ಗ್ರಾಮದ ಸಂಪತ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಸುಬ್ರಮಣಿಯವರಿಗೆ ತೀವ್ರ ತರಹದ ಗಾಯವಾಗಿದ್ದು, ಸ್ಕೂಟರಿನ ಹಿಂಬದಿ ಸವಾರ ಗುಲ್ಸನ್ ಗಣಪತಿಯವರಿಗೂ ಗಾಯವಾಗಿದ್ದು, ಗಾಯಗೊಂಡ ಸುಬ್ರಮಣಿಯವರನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸುಬ್ರಮಣಿಯವರು ದಿನಾಂಕ 28-01-2019 ರಂದು ಮೃತಪಟ್ಟಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.