Crime News

ಹಳೆ ದ್ವೇಷ, ಹಲ್ಲೆ ಪ್ರಕರಣ

ದಿನಾಂಕ 31/01/2019ರಂದು ಮಡಿಕೇರಿ ನಗರದ ಚೈನ್‌ ಗೇಟ್ ನಿವಾಸಿ ಸುಕಿತ್ ಎಂಬವರು ಅವರ ಕಾರಿನಲ್ಲಿ ಅವರ ಸ್ನೇಹಿತ ವಿಶಾಲ್‌ ಎಂಬವರೊಡನೆ ಬೋಯಿಕೇರಿಯ ಅವರ ಸ್ನೇಹಿತನ ಮನೆಗ ಹೋಗಿ ಮರಳಿ ಮಡಿಕೇರಿಗೆ ಬರುತ್ತಿರುವಾಗ ಬೋಯಿಕೇರಿ ಬಳಿ ಕುಮಾರ ಎಂಬಾತನು ಆತನ ಇತರೆ ಆರು ಜನ ಸ್ನೇಹಿತರೊಂದಿಗೆ ಬಂದು ಸುಕಿತ್‌ರವರ ಕಾರನ್ನು ಅಡ್ಡ ಹಾಕಿ ಸುಕಿತ್‌ರವರನ್ನು ಕಾರಿನಿಂದ ಹೊರಗೆಳೆದು ಹಳೆ ದ್ವೇಷದಿಂದ ಆತನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.