Crime News

ಅನಾರೋಗ್ಯದಿಂದ ವ್ಯಕ್ತಿಯ ಸಾವು

           ದಿನಾಂಕ 26-01-2019 ರಂದು ಮಡಿಕೇರಿ ನಗರದಲ್ಲಿರುವ ಕಾವೇರಿ ಭವನ ಹೊಟೆಲ್ ಮುಂಭಾಗದಲ್ಲಿ 61 ವರ್ಷ ಪ್ರಾಯದ ರಾಮಕೃಷ್ಣ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಹೊಟೆಲ್ ನಲ್ಲಿ ಕೆಲಸ ಮಾಡುತ್ತಿರುವ ನಾಗರಾಜು ಎಂಬುವವರು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ರಾಮಕೃಷ್ಣರವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 01-02-2019 ರಂದು ಮೃತಪಟ್ಟಿದ್ದು, ಸದರಿಯವರ ವಿಳಾಸ ತಿಳಿಯದೇ ಇದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆ ಆತ್ಮಹತ್ಯೆ

            ವಿರಾಜಪೇಟೆ ತಾಲೋಕಿನ ನಾಲ್ಕೇರಿ ಗ್ರಾಮದ ನಿವಾಸಿಯಾದ ಗೀತಾ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 01-02-2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.