Crime News

ಮಹಿಳೆ ಆತ್ಮಹತ್ಯೆ

ದಿನಾಂಕ 02/02/2019ರಂದು ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದ ನಿವಾಸಿ ಅಜ್ಜಮಾಡ ಕವಿತಾ ಎಂಬ ಮಹಿಳೆಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತೆ ಕವಿತಾ ಸುಮಾರು ದಿನಗಳಿಂದ ಮಾನಸಿಕ ಅಸ್ವಸ್ಥೆಯಾಗಿದ್ದು ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 02/02/2019ರಂದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ನಿವಾಸಿ ಹನುಮಂತ ಎಂಬವರು ಮಾದಾಪುರದಲ್ಲಿ ಬಸ್ಸಿಗೆಂದು ನಿಂತಿರುವಾಗ ಕೆಎ-09-ಸಿ-484ರ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲಿಸಿ ಹನುಮಂತರವರಿಗೆ ಡಿಕ್ಕಿಪಡಿಸಿದ ಪರಿಣಾಮ ಹನುಮಂತರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 01/02/2019ರಂದು ಕುಶಾಲನಗರ ಬಳಿಯ ಸೀಗೆಹೊಸೂರು ಗ್ರಾಮದ ಬಳಿ ಬ್ಯಾಡಗೊಟ್ಟ ನಿವಾಸಿ ಪಣಿ ಎರವರ ಬೇಬಿ ಎಂಬವರ ಮಗ ಚೇತನ್ ಹಾಗೂ ಜ್ಯೋತಿ ಎಂಬವರ ಮಗಳು ಸಂಜೀತಾ ಎಂಬವರು ಶಾಲೆಯಿಂದ ಮನೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಹಿಂದಿನಿಂದ ಒಂದು ಮೋಟಾರು ಬೈಕನ್ನು ಅದರ ಚಾಲಕ ತಮ್ಮಯ್ಯ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಮಕ್ಕಳಿಬ್ಬರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.