Crime News

ಅಪಘಾತ ಗಾಯಾಳು ಸಾವು

ದಿನಾಂಕ 22/01/2019ರಂದು ಕುಟ್ಟ ಬಳಿಯ ಬಾಡಗ ಗ್ರಾಮದ ಬೊಳ್ಳೆರ ಗೇಟ್ ಬಳಿ ಬೈಕ್ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಡಗ ಗ್ರಾಮದ ಕೊಡಂಗೆ ಹಾಡಿ ನಿವಾಸಿ ವಿಶ್ವ ಎಂಬವರು ದಿನಾಂಕ 03/02/2019ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಕಾಣೆ ಪ್ರಕರಣ

ದಿನಾಂಕ 30/01/2019ರಂದು ತಿತಿಮತಿ ಬಳಿಯ ಬಿಸಿಕೆ ತೊಟದ ನಿವಾಸಿ ಹೆಚ್‌.ಹೆಸ್.ಬಸವರಾಜು ಎಂಬವರ ಪತ್ನಿ ಕುಸುಮಾ ಎಂಬಾಕೆಯು ತಿತಿಮತಿ ನಗರಕ್ಕೆ ಹೋಗಿ ಬರುವುದಾಗಿ ಹೋಗಿದ್ದು ಇದುವರೆಗೂ ಮರಳಿ ಮನೆಗೆ ಬಂದಿರುವುದಿಲ್ಲವೆಂದು ಆಕೆಯ ಪತಿ ಬಸವರಾಜುರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.