Crime News

ಜೂಜಾಟ ಪ್ರಕರಣ

         ದಿನಾಂಕ 05-02-2019 ರಂದು ಮಡಿಕೇರಿ ನಗರದ ನಗರ ಸಭೆಯ ಮುಂಭಾಗದ ರಸ್ತೆಯಲ್ಲಿ ಕೆದಂಬಾಡಿ ಆರ್ ಕುಶಾಲಪ್ಪ ಎಂಬುವವರು ಕೇರಳ ರಾಜ್ಯದ ಲಾಟರಿ ಫಲಿತಾಂಶವನ್ನು ಆಧರಿಸಿ ಜೂಜಾಟ ನಡೆಸುತ್ತಿರುವುದಾಗಿ ಮಡಿಕೇರಿ ನಗರ ಠಾಣೆಯ ಪಿ.ಎಸ್.ಐ ಷಣ್ಮುಗಂ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಕುಶಾಲಪ್ಪ ರವರನ್ನು ವಶಕ್ಕೆ ತೆಗೆದುಕೊಂಡು ಮೊಬೈಲ್ ಹಾಗೂ ನಗದು ಹಣ 8430 ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಕ್ರಮ ಜೂಜಾಟ

      ದಿನಾಂಕ 04-02-2019 ರಂದು ರಾತ್ರಿ ಮಡಿಕೇರಿ ನಗರ ಠಾಣೆಯ ಪಿ.ಎಸ್.ಐ ಷಣ್ಮುಗಂ ರವರಿಗೆ ಮಡಿಕೇರಿ ನಗರದ ಫೋರ್ಟ್ ವಿವ್ ಲಾಡ್ಜ್ ನಲ್ಲಿ ಇಸ್ಪೀಟುವಿನಿಂದ ಜೂಜಾಟ ನಡೆಯುತ್ತಿರುವ ಬಗ್ಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆಟವಾಡುತ್ತಿದ್ದ ಮಂಗಳೂರಿನವರಾದ ಅಬ್ದುಲ್ ಮಜೀದ್, ಮೊಹಮ್ಮದ್ ರಿಯಾಜ್, ಕೇರಳ ರಾಜ್ಯದವರಾದ ಶೌಕತ್ ಆಲಿ ಹಾಗೂ ಮಡಿಕೇರಿ ನಗರದ ನಿವಾಸಿಯಾದ ಮೊಹಮ್ಮದ್ ಖಾಸಿಂ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 8050 ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವ್ಯಕ್ತಿಯ ಆತ್ಮಹತ್ಯೆ

          ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೋಕಿನ ಕಿರುಗೂರು ಗ್ರಾಮದಲ್ಲಿ ವರದಿಯಾಗಿದೆ. ಕಿರುಗೂರು ಗ್ರಾಮದ ನಿವಾಸಿಯಾದ ರಾಜುರವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 05-02-2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

            ದಿನಾಂಕ 05-02-2019 ರಂದು ವಿರಾಜಪೇಟೆ ತಾಲೋಕಿನ ತಾವಳಗೇರಿ ಗ್ರಾಮದ ನಿವಾಸಿಯಾದ ಕಾಳರವರು ಭರತ್ ಎಂಬುವವರ ಆಟೋ ರಿಕ್ಷಾದಲ್ಲಿ ಹೋಗುತ್ತಿರುವಾಗ ಹರಿಹರ ಗ್ರಾಮದ ಸುಬ್ರಮಣಿ ದೇವಸ್ಥಾನದ ರಸ್ತೆ ಜಂಕ್ಷನ್  ಹತ್ತಿರ ರಿಕ್ಷ ಮುಗುಚಿ ಬಿದ್ದು ಕಾಳರವರಿಗೆ ಗಾಯವಾಗಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಸುವಿಗೆ ಕಡಿದು ಗಾಯ

         ದಿನಾಂಕ 04-02-2019 ರಂದು ಕೊಡ್ಲಿಪೇಟೆಯ ಕೆರಗನಹಳ್ಳಿಯ ನಿವಾಸಿ ಮಂಜುನಾಥರವರು ಸಂಜೆ ದನಗಳನ್ನು ಮನೆಗೆ ಹೊಡೆದುಕೊಂಡು ಹೋಗುತ್ತಿರುವಾಗ ಜಗದೀಶ ಎಂಬುವವರು ಹಳೇ ದ್ವೇಷದಿಂದ ಒಂದು ಹಸುವಿಗೆ ಕಡಿದು ಗಾಯಪಡಿಸಿ ಮಂಜುನಾಥರವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಕೊಲೆ

           ದಿನಾಂಕ 05-02-2019 ರಂದು ವಿರಾಜಪೇಟೆ ನಗರದ ವ್ಯಾಪಾರಿ ಶಫೀಕ್ ರವರನ್ನು ಅವರ ಮನೆಯಲ್ಲಿಯೇ ಅವರ ಸ್ನೇಹಿತ ಮಾಳೇಟಿರ ದರ್ಶನ್ ಎಂಬುವವರು ಹಣದ ವಿಚಾರದಲ್ಲಿ ಜಗಳ ಮಾಡಿ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತಾರೆ.