Crime News

ಕಾರು ಡಿಕ್ಕಿ ಪಾದಚಾರಿ ಸಾವು:

ಶನಿವಾರಸಂತೆ ಠಾಣಾ ಸರಹದ್ದಿನ ಹಿಪ್ಪುಗಳಲೆ ಗ್ರಾಮದ ನಿವಾಸಿ ಹೆಚ್.ಆರ್. ಧರ್ಮಪ್ಪ ಎಂಬವರ ತಂದೆ ಹೆಚ್.ಬಿ. ರಾಜಶೇಖರ ಎಂಬವರು ದಿನಾಂಕ 6-2-2019 ರಂದು ಸಂಜೆ 6-30 ಗಂಟೆಗೆ ಚಿಕ್ಕಕು0ದಾ ಗ್ರಾಮದಲ್ಲಿರುವ ಅವರ ಮಗಳ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರೊಂದು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿದ್ದು ಚಿಕಿತ್ಸೆ ಫಲಕಾರಿಯಾಗದೇ ಸದರಿ ಹೆಚ್.ಬಿ. ರಾಜಶೇಖರರವರು ಮೃತಪಟ್ಟಿದ್ದು ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡು ಹಾರಸಿಕೊಂಡು ವ್ಯಕ್ತಿ ಆತ್ಮಹತ್ಯೆ:

ಕುಟ್ಟ ಠಾಣಾ ಸರಹದ್ದಿನ ತೈಲಾ ಗ್ರಾಮದ ನಿವಾಸಿ ಅಜ್ಜಿಕುಟೀರ ವಿನೋದ್ ಎಂಬವರು ದಿನಾಂಕ 6-2-2019 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಮೃತರ ಪತ್ನಿ ಶ್ರೀಮತಿ ಅಜ್ಜಿಕುಟೀರ ಸ್ವಾತಿ ರವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋರಿಗೆ ಬಿದ್ದು ವ್ಯಕ್ತಿ ಸಾವು:

ಸೋಮವಾರಪೇಟೆ ಠಾಣಾ ಸರಹದ್ದಿನ ಲೋಡರ್ಸ್ ಕಾಲೋನಿಯಲ್ಲಿ ವಾಸವಾಗಿರುವ ಶ್ರೀಮತಿ ಸರೋಜ ಎಂಬವರ ಪತಿ ಕೃಷ್ಣ ಎಂಬವರಿಗೆ ಮದ್ಯಪಾನ ಮಾಡುವ ಚಟವಿದ್ದು ದಿನಾಂಕ 5-2-2019 ರಂದು  ಸಂಜೆ 4-00 ಗಂಟೆಗೆ ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಇದ್ದು ಅವರನ್ನು ಮಾರನೆ ದಿನ ಹುಡುಕಿದಾಗಿ ಸೋಮವಾರಪೇಟೆ ನಗರದ ಅಲೋಕ ಬಾರ್‍ನ ಪಕ್ಕದಲ್ಲಿರುವ ಮೋರಿಯೊಂದರಲ್ಲಿ ಬಿದ್ದು ಸದರಿಯವರು ಮೃತಪಟ್ಟಿರುವುದು ಕಂಡು ಬಂದಿದ್ದು ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನಾ ಕಾರಣ ಹಲ್ಲೆ:

ಶ್ರೀಮಂಗಲ ಠಾಣಾ ಸರಹದ್ದಿನ ಬಿರುನಾಣಿ ಗ್ರಾಮದಲ್ಲಿ ವಾಸವಾಗಿರುವ ಪಣಿಎರವರ ಚುಬ್ಬ ಎಂಬವರು ತನ್ನ ಮಗಳು ಹಾಗು ಅವರ ಸಂಬಂಧಿ ಮಗಳು ದಿನಾಂಕ 5-2-2019 ರಂದು ರಾತ್ರಿ 10-30 ಗಂಟೆಗೆ ತಮ್ಮ ಮನೆಯಲ್ಲಿ ಟಿ.ವಿ. ವೀಕ್ಷಿಸುತ್ತಿದ್ದ ವೇಳೆಯಲ್ಲಿ ಆರೋಪಿ ಪಣಿಎರವರ ಚುಬ್ರ ಎಂಬ ವ್ಯಕ್ತಿ ಮನೆಯೊಳಗೆ ಬಂದು ವಿನಾಕಾರಣ ಜಗಳ ಮಾಡಿ ಹಲ್ಲೆ ನಡೆಸಿದ್ದಾರೆಂದು ನೀಡಿದ ದೂರಿನ  ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಬೈಕ್ ಡಿಕ್ಕಿ ಗಾಯ:

ಪೊನ್ನಂಪೇಟೆ ಠಾಣಾ ಸರಹದ್ದಿನ ಮರೂರು ಗ್ರಾಮದ ನಿವಾಸಿ ಪಣಿಎರವರ ಚೇತನ್ ಎಂಬವರು ದಿನಾಂಕ 5-2-2019 ರಂದು ತನ್ನ ತಂದೆಯ ತಂಗಿ ಮಗ  ಮಂಜುನಾಥ ಎಂಬವನೊಂದಿಗೆ ಮರೂರು ಜಂಕ್ಷನ್ ಬಳಿಇರುವ  ಮದೀನ ಹೋಟೇಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್ ಸೈಕಲ್ ವೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು ಹಾಲಿ ಸದರಿಯವರು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಬೈಕ್- ಮಜ್ದಾ ಲಾರಿ ನಡುವೆ ಡಿಕ್ಕಿ:

ಮಡಿಕೇರಿ ತಾಲೋಕು ಮೇಕೇರಿ ಗ್ರಾಮದ ನಿವಾಸಿ ಕೆ.ಎಂ. ನವೀನ್ ಎಂಬವರು ದಿನಾಂಕ 6-2-2019 ರಂದು ಮೋಟಾರ್ ಸೈಕಲಿನಲ್ಲಿ ಹರೀಶ್ ಎಂಬವರೊಂದಿಗೆ  ಅಪ್ಪಂಗಳ ಮಾರ್ಗವಾಗಿ ಚೇರಂಬಾಣೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮಜ್ದಾ ಲಾರಿಯೊಂದು ಡಿಕ್ಕಿಯಾಗಿ ಬೈಕಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಷಗೊಂಡು ವ್ಯಕ್ತಿ ಸಾವು:

ಚಾಮರಾಜನಗರ ಜಿಲ್ಲೆಯ  ಮುಕ್ತಿ ಕಾಲೋನಿ ಹಳ್ಳಿಯವರಾದ ಹಾಲಿ ಬಿಳಿಗೇರಿ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಪುಷ್ಪ  ಎಂಬವರ ಗಂಡ ಚಿಕ್ಕಸಿದ್ದ @ ರಾಜು ಎಂಬವರು ದಿನಾಂಕ 6-2-2019 ರಂದು ಬಿಳಿಗೇರಿ ಗ್ರಾಮದ ಎಂ.ಎಸ್. ನಾಗೇಶ ಎಂಬವರ ಕಾಫಿ ತೋಟದಲ್ಲಿ ಕರಿಮೆಣಸು ಕುಯ್ಯುವ ಕೆಲಸಕ್ಕೆ ಅಲ್ಯುಮಿನಿಯಂ ಏಣೆಯನ್ನು ಹೊತ್ತುಕೊಂಡು ತೋಟದೊಳಗೆ ಹೋಗುತ್ತಿದ್ದಾಗ ಆಕಸ್ಮಿಕ ಏಣಿಯು ತೋಟದಲ್ಲಿ  ಹಾದು ಹೋಗಿದ್ದ ಕರೆಂಟ್ ವೈಯರ್ ಗೆ ತಗಲು ವಿದ್ಯುತ್ ಸ್ಪರ್ಷಗೊಂಡು ಸಾವನಪ್ಪಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.