Crime News

ಬಾಲಕ ಕಾಣೆ ಪ್ರಕರಣ

ಮಡಿಕೇರಿ ಬಳಿಯ ಚೇರಳ ಶ್ರೀಮಂಗಲ ಗ್ರಾಮದ ಕೋಗಿಲೆ ಹಳ್ಳ ಎಸ್ಟೇಟಿನ ನಿವಾಸಿ ಮೂಲತಃ ಒಡಿಶಾ ರಾಜ್ಯದ ಅಶ್ವಿನ್ ಗೊಮಾಂಗೋ ಎಂಬಾತನ ಮಗ ಸುಮಾರು 12 ವರ್ಷ ಪ್ರಾಯದ ವಿನೋದ್‌ ಗೊಮಾಂಗೋ ಎಂಬಾತನು ದಿನಾಂಕ 07/02/2019ರಂದು ಶಾಲೆಗೆ ಹೋಗುವುದಾಗಿ ಹೇಳಿ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾನೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಅಸ್ವಾಭಾವಿಕ ಸಾವು

ಮಡಿಕೇರಿ ಬಳಿಯ ಮಕ್ಕಂದೂರಿನ ಹೆಮ್ಮತ್ತಾಳು ನಿವಾಸಿ ಅಣ್ಣಪ್ಪ ನಾಯ್ಕ ಎಂಬವರು ದಿನಾಂಕ 07/02/2019ರಂದು ಮಡಿಕೇರಿ ನಗರದ ಮೈಸೂರು ರಸ್ತೆಯ ಕಮಾನು ಗೇಟಿನ ಬಳಿ ರಸ್ತೆ ಬದಿಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಶ್ರೀಮಂಗಲ ಬಳಿಯ ಬಿರುನಾಣಿ ನಿವಾಸಿ ಕುಪ್ಪಣಮಾಡ ಮೌನ ಎಂಬವರ ತಂದೆಗೆ  ವಂಶಪಾರಂಪರ್ಯವಾಗಿ ಪಾಳಿನ ಮೂಲಕ ಬಂದಿದ್ದ 5.59 ಏಕರೆ ಜಾಗವನ್ನು ಮೌನರವರ ಚಿಕ್ಕಪ್ಪ ಕುಪ್ಪಣಮಾಡ ಮುದ್ದಪ್ಪ ಎಂಬವರು ಹುದಿಕೇರಿ ಕಂದಾಯ ಅಧಿಕಾರಿ ನಿಶಾನ್ ಎಂಬವರ ಜೊತೆಗೂಡಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಮುದ್ದಪ್ಪನವರ ಹೆಸರಿಗೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.