Crime News

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ವಿರಾಜಪೇಟೆ ತಾಲೋಕು ತೋರ ಗ್ರಾಮದ ನಿವಾಸಿ ಪಣಿ ಎರವರ ಬೋಪಣ್ಣ ಎಂಬವರ ತಂದೆ ಮಣಿ ಎಂಬವರು ದಿನಾಂಕ 7-2-2019 ರಂದು ಜಿಲ್ಲಾ ಆಸ್ಪತ್ರೆ ಮಡಿಕೇರಿಯ ಕಟ್ಟಡದ ಕಿಟಕಿಯೊಂದರ ಕಂಬಿಗೆ ವೇಲ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೋಟಕ್ಕೆ ಹೋದ ವಿಚಾರದಲ್ಲಿ ಜಗಳ:

ಮಡಿಕೇರಿ ತಾಲೋಕು ಕಟ್ಟೆಮಾಡು ಗ್ರಾಮದ ಬಿ.ಎನ್. ಅಯ್ಯಪ್ಪ ಎಂಬವರಿಗೆ ಕಟ್ಟೆಮಾಡು ಗ್ರಾಮದಲ್ಲಿ ತೋಟವಿದ್ದು ಸದರಿ ಕಾಫಿ ತೋಟಕ್ಕೆ ಪಕ್ಕದ ತೋಟದ ಕೆಲಸಗಾರರು ದಿನಾಂಕ 8-2-2019 ರಂದು ಪ್ರವೇಶ ಮಾಡಿದ್ದು ಇದರ ವಿಚಾರದಲ್ಲಿ ಕಟ್ಟೆ ಮಾಡು ಗ್ರಾಮದ ರಾಜಾ ಮಾದಪ್ಪ ಮತ್ತು ಅವರ ಪತ್ನಿ ನೀನಾ ರವರು ಜಗಳ ಮಾಡಿ ಬಿ.ಎನ್. ಅಯ್ಯಪ್ಪ ಹಾಗು ನಾಣಯ್ಯ ಎಂಬವರನ್ನು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ ನೋವನ್ನುಂಟುಮಾಡಿದ್ದು  ಅಲ್ಲದೆ ಕೊಲೆ ಮಾಡುತ್ತೇವೆಂದು ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ಹಲ್ಲೆ:

ಸೋಮವಾರಪೇಟೆ ತಾಲೋಕು 7ನೇ ಹೊಸಕೋಟೆ ಗ್ರಾಮದ ನಿವಾಸಿ ಮಹಮ್ಮದ್ ಸಲೀಮ್ ಎಂಬವರು ದಿನಾಂಕ 7-2-2019 ರಂದು ಕುಶಾಲನಗರದಲ್ಲಿರುವ ನಾಡ ಕಛೇರಿಯ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಶಾಲನಗರದ ಮಾರ್ಕೆಟ್ ಬಳಿ ವಾಸವಾಗಿರುವ ಈ.ಕೆ. ಅಬ್ದುಲ್ ಕರೀಂ ಎಂಬವರು ದಾರಿ ತಡೆದು ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಂಗಡಿಗೆ ನುಗ್ಗಿ ಹಣ ಕಳವು:

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಶನಿವಾರಸಂತೆ ನಗರದ ಮಧ್ಯಪೇಟೆಯಲ್ಲಿ ಜಿ.ಎಂ. ಆನಂದಯ್ಯ ಎಂಬವರು ಅರುಲ್ ಟ್ರೇಡರ್ಸ್ ಅಂಗಡಿಯನ್ನು ನಡೆಸುತ್ತಿದ್ದು ದಿನಾಂಕ 8-2-2019 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಊಟಕ್ಕೆಂದು ಹೋಗಿದ್ದು ಅದೇ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಅಂಗಡಿಗೆ ಬಂದು  ಅಂಗಡಿಯಲ್ಲಿದ್ದ ಕೆಲಸಗಾರ ಮಹೇಂದ್ರ ಎಂಬವನನ್ನು ಬೇಕರಿಯಿಂದ ಪಪ್ಸ್ ತರಲು ಕಳುಹಿಸಿ ಅಂಗಡಿಯ  ಟೇಬಲ್ ಡ್ರಾಯರ್ ನ ಲಾಕ್‍ನ್ನು ಪೋಕರ್ ನಿಂದ ತಿವಿದು  ಮುರಿದು ಡ್ರಾಯರ್‍ನಲ್ಲಿಟ್ಟಿದ್ದ 1,58,460/- ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಜಿ.ಎಂ. ಆನಂದಯ್ಯನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.