Crime News

ಅಪಘಾತ ಪ್ರಕರಣ

           ದಿನಾಂಕ 09-02-2019 ರಂದು ಹೊದ್ದೂರು ಗ್ರಾಮದ ನಿವಾಸಿಯಾದ ವರುಣ್ ಎಂಬುವವರು ಮೋಟಾರು ಸೈಕಲಿನಲ್ಲಿ ಹಿಂಬದಿ ಅತುಲ್ ಮೊಹನ್ದಾಸ್ ಎಂಬುವವರನ್ನು ಕೂರಿಸಿಕೊಂಡು ಗೋಣಿಕೊಪ್ಪ ನಗರದಲ್ಲಿ ಹೋಗುತ್ತಿರುವಾಗ ಮೋರ್ ಹೊಟೆಲ್ ಮುಂಭಾಗ ಮುಂದಿನಿಂದ ಬಂದ ಕಾರು ಮೋಟಾರು ಸೈಕಲಿಗೆ ಡಿಕ್ಕಿಯಾಗಿ ವರುಣ್ ಹಾಗೂ ಮೊಹನ್ದಾಸ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆತ್ಮಹತ್ಯೆ ಪ್ರಕರಣ

            ದಿನಾಂಕ 09-02-2019 ರಂದು ವಿರಾಜಪೇಟೆ ತಾಲೋಕಿನ ಬಿರುನಾಣಿ ಗ್ರಾಮದ ನಿವಾಸಿಯಾದ ಪಣಿಯರವರ ಗಂಗೆ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜನರೇಟರ್ ಕಳ್ಳತನ

             ಸೋಮವಾರಪೇಟೆ ತಾಲೋಕಿನ ಚೌಡ್ಲು ಗ್ರಾಮದ ನಿವಾಸಿಯಾದ ಬೆಳ್ಳಿಯಪ್ಪ ಎಂಬುವವರು ಹೊಸಬೀಡು ಗ್ರಾಮದಲ್ಲಿರುವ ತೋಟಕ್ಕೆ ನೀರು ಹಾಯಿಸಲು ಕರೆಂಟ್ ಮೋಟರನ್ನು ಚಾಲನೆ ಮಾಡಲು 10 ಹೆಚ್.ಪಿ ಯ ಡೀಸಲ್ ಜನರೇಟರ್ ನ್ನು ಅಳವಡಿಸಿದ್ದು, ದಿನಾಂಕ 16-01-2019 ರಂದು ಯಾರೋ ಕಳ್ಳರು ಡೀಸೆಲ್ ಜನರೇಟರನ್ನು ಕಳವು ಮಾಡಿದ್ದು, ಈ ಬಗ್ಗೆ ದಿನಾಂಕ 09-02-2019 ರಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಕಾಣೆ

             ಮೈಸೂರಿನ ಶ್ರೀರಂಗಪಟ್ಟಣದ ನಿವಾಸಿ ಅಪ್ಸಲ್ ಹುಸೇನ್ ರವರು ತನ್ನ ಪತ್ನಿ ಜೀನತ್ ರವರೊಂದಿಗೆ ದಿನಾಂಕ 02-02-2019 ರಂದು ಪತ್ನಿಯ ತವರು ಮನೆ ಎಮ್ಮೆಮಾಡುವಿಗೆ ಬಂದು ಪತ್ನಿಯನ್ನು ಬಿಟ್ಟು ಶ್ರೀರಂಗಪಟ್ಟಣಕ್ಕೆ ಹೋಗುವುದಾಗಿ ತಿಳಿಸಿ ಹೋದವರು ಕಾಣೆಯಾಗಿದ್ದು ಈ ಬಗ್ಗೆ ಜೀನತ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

            ಸೋಮವಾರಪೇಟೆ ತಾಲೋಕಿನ ಗುಡುಗಳಲೆ ಗ್ರಾಮದ ನಿವಾಸಿಯಾದ ಆನಂದಯ್ಯ ಎಂಬುವವರು ಶನಿವಾರಸಂತೆ ನಗರದಲ್ಲಿ ಅರುಲ್ ಟ್ರೇಡರ್ಸ್ ಎಂಬ ಅಂಗಡಿ ಇಟ್ಟುಕೊಂಡು ಕಾಫಿ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 08-02-2019 ರಂದು ಆನಂದಯ್ಯನವರು ಊಟಕ್ಕೆ ಹೋದ ಸಮಯದಲ್ಲಿ ಕಾವಲುಗಾರರಾದ ಮಹೇಂದ್ರವರು ಅಂಗಡಿಯಲ್ಲಿರುವಾಗ ಯಾರೋ ಇಬ್ಬರು ವ್ಯಕ್ತಿಗಳು ಹೋಗಿ ಸಾಹುಕಾರರನ್ನು ವಿಚಾರಿಸಿ ಮಹೇಂದ್ರರವರಿಗೆ ಬೇಕರಿಯಿಂದ ಪಪ್ಸ್ ತರುವಂತೆ ಹೇಳಿ ಕಳುಹಿಸಿ ಅಂಗಡಿಯ ಡ್ರಾಯರ್ ನ ಲಾಕನ್ನು ಮುರಿದು ಅದರಲ್ಲಿದ್ದ ನಗದು ಹಣ 1,58,460=00 ರೂಗಳನ್ನು ಕಳವು ಮಾಡಿಕೊಂಡು ಹೋರುತ್ತಾರೆ. ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

          ದಿನಾಂಕ 08-02-2019 ರಂದು ಕಾಜೂರು ಗ್ರಾಮದ ನಿವಾಸಿಯಾದ ಚೇತನ್ ಎಂಬುವವರು ಸ್ಕೂಟರಿನಲ್ಲಿ ಭೂಮಿಕಾ ಎಂಬುವವರನ್ನು ಕೂರಿಸಿಕೊಂಡು ರಾತ್ರಿ ಗುಡುಗಳಲೆ ಜಾತ್ರೆ ನೋಡಲು ಹೋಗುತ್ತಿರುವಾಗ ದುಂಡಳ್ಳಿ ಗ್ರಾಮದ ಅರಣ್ಯ ಇಲಾಖೆಯ ಕಚೇರಿ ಹತ್ತಿರ ಎದುರಿನಿಂದ ಬಂದ ಟ್ರ್ಯಾಕ್ಟರನ್ನು ಅದರ ಚಾಲಕ ಹರೀಶರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಚೇತನ್ ರವರು ಸ್ಥಳದಲ್ಲೇ ಮೃತಪಟ್ಟಿದ್ದು, ಬೂಮಿಕಾರವರಿಗೂ ಗಾಯವಾಗಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

            ದಿನಾಂಕ 09-02-2019 ರಂದು ಮೈಸೂರಿನ ನಿವಾಸಿಯಾದ ಬಸವರಾಜು ಮತ್ತು ಸುಬ್ಬಣ್ಣ ಎಂಬುವವರು ಮೋಟಾರು ಸೈಕಲಿನಲ್ಲಿ ಸುಂಟಿಕೊಪ್ಪಲುವಿನಿಂದ ಕುಶಾಲನಗರಕ್ಕೆ ಹೋಗುತ್ತಿರುವಾಗ ಶಾಂತಿಗಿರಿ ಎಸ್ಟೇಟ್ ನ ತಿರುವು ರಸ್ತೆಯಲ್ಲಿ ಕುಶಾಲನಗರ ಕಡೆಯಿಂದ ಬಂದ ಟಿಟಿ ವಾಹನವನ್ನು ಅದರ ಚಾಲಕ ಅಬ್ದುಲ್ ರಜಾಕ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲ್ ಚಾಲನೆ ಮಾಡುತ್ತಿದ್ದ ಬಸವರಾಜ್ ರವರು ಮೃತಪಟ್ಟಿದ್ದು, ಸುಬ್ಬಣ್ಣ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಸ್ಸಿಗೆ ಜೀಪು ಡಿಕ್ಕಿ

             ದಿನಾಂಕ 09-02-2019 ರಂದು ಎಸ್.ಆರ್,ಎಸ್ ಖಾಸಗಿ ಬಸ್ಸು ಕೇರಳದ ಕಣ್ಣನೂರಿನಿಂದ ಮಡಿಕೇರಿಗೆ ಮಾಕುಟ್ಟ ಮಾರ್ಗವಾಗಿ ಬರುತ್ತಿರುವಾಗ ವಾಟೆಕೊಲ್ಲಿ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ರಾಹುಲ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ಈ ಬಗ್ಗೆ ಬಸ್ಸಿನ ಚಾಲಕ ಫಕ್ರುದ್ದೀನ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.