Crime News

ಮನೆಗೆ ನುಗ್ಗಿ ನಗದು ಕಳವು:

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಾಕತ್ತೂರು ಗ್ರಾಮದ ತೊಂಭತ್ತುಮನೆ ಯಲ್ಲಿ ವಾಸವಾಗಿರುವ ಬಿ.ಎ. ಅಣ್ಣಿ ಎಂಬವರು ದಿನಾಂಕ 9-2-2019 ರಂದು ತಮ್ಮ ಪತ್ನಿಯೊಂದಿಗೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ಮನೆಯ ಒಳಗೆ ಪ್ರವೇಶ ಮಾಡಿ 16,000/- ರೂ.ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ಮುರಿದು ಚಿನ್ನಾಭರಣ ಕಳವು:

ಮಡಿಕೇರಿ ತಾಲೋಕು ಹಾಕತ್ತೂರು ಗ್ರಾಮದ ನಿವಾಸಿ ಡಿ.ಎಸ್. ಗೀತಾ ಎಂಬವರು ದಿನಾಂಕ 30-7-2016 ರಂದು ಮನೆಯಲ್ಲಿ ಇಲ್ಲದೆ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಮನೆಯ ಒಳಗಡೆ ಇಟ್ಟಿದ್ದ 25 ಗ್ರಾಂ ತೂಕದ ಕರಿಮಣಿ ಚೈನನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ತನ್ನ ಗಂಡನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ಹಿನ್ನೆಲೆಯಲ್ಲಿ ದಿನಾಂಕ 10-2-2019 ರಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾಂತಿಯಿಂದ ಮಹಿಳೆ ಸಾವು:

ಚಾಮರಾಜ ನಗರದ ಕರಿಕಾಟಿ ಗ್ರಾಮದವರಾದ ಶ್ರೀಮತಿ ರಾಜಮ್ಮ ಎಂಬವರು ದಿನಾಂಕ 9-2-2019 ರಂದು ವಿರಾಜಪೇಟೆ ತಾಲೋಕು ಕಡಂಗಮರೂರು ಗ್ರಾಮಕ್ಕೆ ನಾಗರಾಜು ಎಂಬವರೊಂದಿಗೆ ಕಾಫಿ ಕೆಲಸಕ್ಕೆ ಹೋಗಿದ್ದು ಅಲ್ಲಿ ಶ್ರೀಮತಿ ರಾಜಮ್ಮನವರು ವಾಂತಿ ಮಾಡಿದ ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಸದರಿ ರಾಜಮ್ಮನವರು ಮೃತರಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆಗೆ ಯತ್ನ:

ವಿರಾಜಪೇಟೆ ತಾಲೋಕು ಕೆದಮುಳ್ಳೂರು ಗ್ರಾಮದಲ್ಲಿ ವಾಸವಾಗಿರುವ ಪಣಿ ಎರವರ ಬೋಜುರವರ ಮೇಲೆ ಪಣಿಎರವರ ಮಣಿ ಎಂಬವರು ದಿನಾಂಕ 10-2-2019 ರಂದು ಅವರ ಮನೆಯ ಜಗಳದಲ್ಲಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ:

ಕೊಡಗು ಜಿಲ್ಲೆಯ ಕಿರುಂದಾಡು ಗ್ರಾಮದ ನಿವಾಸಿ ಬಿ.ಆರ್. ರಾಜೇಶ್ ಎಂಬವರು ದಿನಾಂಕ 10-2-2019 ರಂದು ಮೋಟಾರ್‍ಸೈಕಲಿನಲ್ಲಿ ವಿರಾಜಪೇಟೆಯ ಮೂರ್ನಾಡು ಜಂಕ್ಷನ್‍ನಲ್ಲಿ ಹೋಗುತ್ತಿದ್ದಾಗ ಶಿಫ್ಟ್ ಕಾರೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಕುಟ್ಟ ಠಾಣಾ ಸರಹದ್ದಿನ ಬಾಡಗ ಗ್ರಾಮದ ನಿವಾಸಿ ವಿಶ್ವನಾಥ ಎಂಬವರು ದಿನಾಂಕ 10-2-2019 ರಂದು ತಮ್ಮ ವಾಸದ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರುತಿ ಓಮ್ನಿ ಕಳವು:

ಸೋಮವಾರಪೇಟೆ ತಾಲೋಕು ಸಿದ್ದಲಿಂಗಪುರ ಗ್ರಾಮದ ನಿವಾಸಿ ಬಿ.ಎಂ. ವೆಂಕಟೇಶ್ ಎಂಬವರು ದಿನಾಂಕ 9-2-2019 ರಂದು ಸಂಜೆ 7-00 ಗಂಟೆ ಸಮಯದಲ್ಲಿ  ತನ್ನ ಸಂಸಾರದೊಂದಿಗೆ ಶನಿವಾರಸಂತೆಯ ಗುಡುಗಳಲೆ ಜಾತ್ರೆಗೆ ತಮ್ಮ ಬಾಪ್ತು ಮಾರು ಓಮ್ನಿ ವಾಹನದಲ್ಲಿ ಹೋಗಿ ವಾಹನವನ್ನು ಜಾತ್ರೆನಡೆಯುವ ಪಕ್ಕದ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದು, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.