Crime News

ಅಕ್ರಮ ಮದ್ಯ ಮಾರಾಟ

ದಿನಾಂಕ 11/02/2019ರಂದು ವಿರಾಜಪೇಟೆ ಬಳೀಯ ನಾಲ್ಕೇರಿ ನಿವಾಸಿ ಎಂ.ಎಸ್.ಕರುಂಬಯ್ಯ ಎಂಬವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪಿಎಸ್‌ಐ ಸುರೇಶ್‌ ಬೋಪಣ್ಣರವರು ಸ್ಥಳಕ್ಕೆ ತೆರಳಿ ಎಂ.ಎಸ್.ಕರುಂಬಯ್ಯನವರು ಅವರ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 09/02/2019ರಂದು ಮೈಸೂರು ನಿವಾಸಿ ಸೌರಭ್ ಎಸ್ ಉಚ್ಚಿಲ್ ಎಂಬವರು ಅವರ ಕಾರಿನಲ್ಲಿ ಗೋಣಿಕೊಪ್ಪ ನಗರದ ಹರಿಶ್ಚಂದ್ರಪುರದ ಹೋಟೆಲ್ ಒಂದರ ಬಳಿ ನಿಲ್ಲಿಸಲು ಹೋಗುತ್ತಿದ್ದಾಗ ಮೈಸೂರು ಕಡೆಯಿಂದ ಒಂದು ಮೋಟಾರು ಬೈಕನ್ನು ಅದರ ಚಾಲಕ ಬುಟ್ಟಂಡ ವರುಣ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿದ್ದು ಬೈಕ್ ಸವಾರ ವರುಣ್‌ರವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 11/02/2019ರಂದು ಕಾನೂರು ಬಳಿಯ ಬ್ರಹ್ಮಗಿರಿ ಪೈಸಾರಿ ನಿವಾಸಿ ಅಭಿಷೇಕ್ ಎಂಬವರು ಅವರ ಸ್ನೇಹಿತ ಲಿಖಿತ್ ಎಂಬವರೊಡನೆ ಸ್ಕೂಟರಿನಲ್ಲಿ ಪಾಲಿಬೆಟ್ಟದ ಕಡೆಗೆ ಹೋಗುತ್ತಿರುವಾಗ ಗೋಣಿಕೊಪ್ಪದ ರಿಲಾಯನ್ಸ್ ಪೆಟ್ರೋಲ್ ಬಂಕ್ ಬಳಿ ಒಂದು ಪಿಕ್‌ಅಪ್ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಿಖಿತ್‌ರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರಿನಲ್ಲಿದ್ದ ಅಭಿಷೇಕ್, ಲಿಖಿತ್ ಮತ್ತು ಸಂಜು ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 11/02/2019ರ ರಾತ್ರಿ ವೇಳೆ ಗೋಣಿಕೊಪ್ಪದ ಹರಿಶ್ಚಂದ್ರಪುರದ ನಿವಾಸಿ ಮುಕ್ತಾರ್ ಎಂಬವರು ಅವರ ಸ್ನೇಹಿತ ಜಮೀರ್ ಎಂಬವರೊಡನೆ ಪಾಲಿಬೆಟ್ಟದಿಂದ ಒಂದು ಬೈಕಿನಲ್ಲಿ ಮನೆಗೆ ಬರುತ್ತಿರುವಾಗ ಗೋಣಿಕೊಪ್ಪ ನಗರದ ಲೋಪಾಮುದ್ರ ಆಸ್ಪತ್ರೆಯ ಬಳಿ ಗಗನ್ ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುಕ್ತಾರ್‌ರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರಿನಲ್ಲಿದ್ದ ಮುಕ್ತಾರ್ ಹಾಗೂ ಜಮೀರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೆಂಕಿ ಆಕಸ್ಮಿಕ ಮಹಿಳೆ ಸಾವು

ದಿನಾಂಕ 04/02/2019ರಂದು ಕುಟ್ಟ ಬಳಿಯ ಪೈತ್ ಎಸ್ಟೇಟ್ ನಿವಾಸಿ ನಾಗಮಣಿ ಎಂಬವರು ಮನೆಯಲ್ಲಿ ಒಲೆಗೆ ಬೆಂಕಿ ಹಚ್ಚಲು ಸೀಮೆಣ್ಣೆ ಸುರಿದು ಬೆಂಕಿ ಕಡ್ಡಿ ಗೀರಿದಾಗ ಇದ್ದಕ್ಕಿದ್ದಂತೆ ಬೆಂಕಿಯು ನಾಗಮಣಿಯವರ ಉಡುಪಿಗೆ ತಗುಲಿ ಹೊತ್ತಿಕೊಂಡಿದ್ದು ಗಾಯಾಳುವಾದ ನಾಗಮಣಿಯನ್ನು ಮಾನಂದವಾಡಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಗಮಣಿಯವರು ದಿನಾಂಕ 10/02/2019ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 10/02/2019ರಂದು ಕುಶಾಲನಗರ ಬಳಿಯ ಹೆಬ್ಬಾಲೆ ನಿವಾಸಿ ವಂಶಿ ಎಂಬವರು ಮುಳ್ಳೂರು ನಿವಾಸಿ ನವೀನ್‌ ಮತ್ತು ಇನ್ನೊಬ್ಬರೊಂದಿಗೆ ಶನಿವಾರಸಂತೆಯ ಗುಡುಗಳಲೆ ಜಾತ್ರೆಗೆ ಹೋಗಿದ್ದು ನಂತರ ನವೀನ್‌ರವರು ವಂಶಿರವರನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಯಾವುದೋ ಕಾರಣಕ್ಕೆ ಜಗಳವಾಡಿ ದೊಣ್ಣೆಯಿಂದ ವಂಶಿರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.