Crime News

ಅಪಘಾತ ಪ್ರಕರಣ

ದಿನಾಂಕ 11-02-2019 ರಂದು ಗೋಣಿಕೊಪ್ಪ ನಗರದ ಪಟೇಲನಗರದ ನಿವಾಸಿ ಸಿದ್ದಾರಾಜುರವರು ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಉರೂಸ್ ಜಾತ್ರೆಗೆ ಹೋಗುತ್ತಿರುವಾಗ ಪಾಲಿಬೆಟ್ಟಕ್ಕೆ ತಲುಪುವಾಗ ಎದುರಿನಿಂದ ಬಂದ ಕಾರನ್ನು ಅದರ ಚಾಲಕಿ ಸುನಿತಾ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಸಿದ್ದರಾಜು ಹಾಗೂ ಸುನಿತಾ ರವರಿಗೆ ಗಾಯವಾಗಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

           ದಿನಾಂಕ 11-02-2019 ರಂದು ಸೋಮವಾರಪೇಟೆ ತಾಲೋಕಿನ ಯಡವಾರೆ ಗ್ರಾಮದ ನಿರಂಜನ್ ರವರು ಕುಶಾಲನಗರದಿಂದ ಸೈಕಲಿನಲ್ಲಿ ಮನೆಗೆ ಹೋಗುತ್ತಿರುವಾಗ ಯಡವಾರೆ ಗ್ರಾಮದ ಸಜ್ಜಳ್ಳಿ ಸೇತುವೆಯ ಪಕ್ಕ ತಲುಪುವಾಗ ಅದೇ ಗ್ರಾಮದವರಾದ ಹೇಮಾಕ್ಷ, ಹಾಗೂ ರೋಹಿತ್ ರವರು ಹಳೇ ದ್ವೇಷದಿಂದ ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

          ದಿನಾಂಕ 12-02-2019 ರಂದು ಗರಂಗೂದೂರು ಗ್ರಾಮದ ನಿವಾಸಿಯಾದ ನಾಗೇಶ್ ಎಂಬುವವರು ಆಟೋ ರಿಕ್ಷಾದಲ್ಲಿ ಹೊಸತೋಟದಿಂದ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ಆನಂದ, ದೇವಿ ಮತ್ತು ಯಶೋಧರವರನ್ನು ಕರೆದುಕೊಂಡು ಹೋಗುತ್ತಿರುವಾಗ ಕುಸುಬೂರು ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಎದುರಿನಿಂದ ಬಂದ ಪಿಕ್ ಅಪ್ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು, ಆಟೋ ಮಗುಚಿಕೊಂಡು ಪ್ರಯಾಣಿಕರಿಗೆ ಗಾಯವಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.