Crime News

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ತಣ್ಣಿಮಾನಿ ಗ್ರಾಮದ ನಿವಾಸಿ ಶ್ರೀಮತಿ ಕೆ.ಪಿ. ಚಿತ್ರ ಎಂಬವರ ಪತಿ ಪ್ರಕಾಶ ಎಂಬವರು ಜೀವದಲ್ಲಿ ಜುಗುಪ್ಸೆಗೊಂಡು ದಿನಾಂಕ 12-2-2019 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಲಿ ಗಣತಿಗೆ ಅಳವಡಿಸಿದ ಕ್ಯಾಮರಾ ಕಳವು:

ಭಾಗಮಂಡಲ ಠಾಣಾ ಸರಹದ್ದಿನ ತಲಕಾವೇರಿಯಲ್ಲಿ   ತಲಕಾವೇರಿ ವನ್ಯಜೀವಿ ವಲಯದ ಕೆತೋಟಿ ಎಂಬ ಅರಣ್ಯ ಪ್ರದೇಶದಲ್ಲಿ   ಹುಲಿಗಳ ಗಣತಿಗಾಗಿ  ಮರಗಳಲ್ಲಿ ಜಿ.ಪಿ.ಎಸ್‍. ಕಬ್ಬಿಣದ ಕ್ಯಾಮರಾಗಳನ್ನು ಅಳವಡಿಸಿದ್ದು ಸದರಿ ಕ್ಯಾಮರಾ ಗಳನ್ನು ದಿನಾಂಕ 12-2-2019 ರಂದು ಅರಣ್ಯ ಸಿಬ್ಬಂದಿಗಳು ಪರಿಶೀಲಿಸಿದಾಗ ಯಾರೋ ಕಳ್ಳರು ಕಳ್ಳತನ ಮಾಡಿರುವುದು ಕಂಡುಬಂದಿದ್ದು, ಈ ಸಂಬಂಧ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಾಪತ್ತೆಯಾದ ಕಾಲೇಜು ವಿದ್ಯಾರ್ಥಿನಿ ಶವವಾಗಿ ಪತ್ತೆ:

ಸಿದ್ದಾಪುರ ಠಾಣಾ ಸರಹದ್ದಿನ ಎಮ್ಮೆಗುಂಡಿ ಟಾಟಾ ಕಾಫಿ ಎಸ್ಟೇಟಿನ ಲೈನು ಮನೆಯಲ್ಲಿ ವಾಸವಾಗಿರುವ ಹೆಚ್.ಐ. ಚಂದ್ರ ಎಂಬವರ ಮಗಳು ಹೆಚ್.ಸಿ. ಸಂದ್ಯಾ ದಿನಾಂಕ 4-2-2019 ರಂದು ಕಾಲೇಜಿಗೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪ್ರಕರಣದ ತನಿಖೆಯ ಸಮಯ ಕಾಣೆಯಾದ ಸಂದ್ಯಾಳನ್ನು ವೆಸ್ಟ್ ಬೆಂಗಾಲದ ಮೂಲದವರಾದ ಹಾಲಿ ಸಿದ್ದಾಪುರದ ಕರಡಿಕಾಡ್ ಎಸ್ಟೇಟಿನ ಲೈನು ಮನೆಯಲ್ಲಿ ವಾವಾಗಿರುವ ಸಂದೀಪ್ ಮತ್ತು ರಂಜಿತ್ ಎಂಬವರು ದಿನಾಂಕ 4-2-2019 ರಂದು ಅಪಹರಿಸಿಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ವೆಸಗಿ ಕುತ್ತಿಗೆಗೆ ಹಗ್ಗವನ್ನು ಬಿಗಿದು ಕೊಲೆಗೈದುಮೃತ ಶರೀರವನ್ನು ಕಲ್ಲಿನ ಸಂದಿಯಲ್ಲಿ ಯಾರಿಗೂ ಕಾಣದಂತೆ ಊತಿಟ್ಟಿರುವುದನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಕೊಲೆ ಮೊಕದ್ದಮೆಯನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ, ಪ್ರಕರಣ ದಾಖಲು:

ವಿರಾಜಪೇಟೆ ತಾಲೋಕು ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿಯಾದ ಸಿ.ಕೆ.ರವಿ ಎಂಬವರ ಅಣ್ಣ ಕೆ.ಜಿ. ಮಹೇಶ್ ಎಂಬವರು ದಿನಾಂಕ 10-2-2019 ರಂದು ಅಮ್ಮತ್ತಿಗೆ ಹೋದವರು ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಈ ಸಂಬಂಧ ಸಿ.ಕೆ. ರವಿರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ವಾಹನ ಡಿಕ್ಕಿ:

ಗೋಣಿಕೊಪ್ಪ ಠಾಣಾ ಸರಹದ್ದಿನ ಅರುವತ್ತೊಕ್ಲು ಗ್ರಾಮದ ನಿವಾಸಿ ಹೊನ್ನಪ್ಪ ಪೂಜಾರಿ ಎಂಬವರು ದಿನಾಂಕ 12-2-2019 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಗೋಣಿಕೊಪ್ಪದಿಂದ ಅರುವತ್ತೋಕ್ಲು ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು:

ಪೊನ್ನಂಪೇಟೆ ಠಾಣಾ ಸರಹದ್ದಿನ ತಿತಿಮತಿ ನಗರದಲ್ಲಿ ವಾಸವಿರುವ ಪ್ರವೀಣ್ ಕುಮಾರ್ ಎಂಬವರು ತಮ್ಮ ಮೋಟಾರ್ ಸೈಕಲನ್ನು ದಿನಾಂಕ 12-2-2019 ರಂದು ರಾತ್ರಿ ತಮ್ಮ ಮನೆಯ ಮುಂದುಗಡೆ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಸೋಮವಾರಪೇಟೆ ತಾಲೋಕು ಮೂವತ್ತೊಕ್ಲು ಗ್ರಾಮದ ನಿವಾಸಿ ಟಿ.ಎಂ. ಮುತ್ತಣ್ಣ ಎಂಬವರ ಸಹೋದರ ಬೋಪಣ್ಣ ಎಂಬವರು ಸೋಮವಾರಪೇಟೆ ಸಫಾಲಿ ಬಾರ್‍ನಲ್ಲಿ ಕೆಲಸ ಮಾಡಿಕೊಂಡಿದ್ದು, ಅದೇ ಬಾರಿನಲ್ಲಿ ವಾಸವಿದ್ದು,  ದಿನಾಂಕ 12-2-2019 ರಂದು ಬಾತ್‍ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.