Crime News

ವ್ಯಕ್ತಿ ಆತ್ಮಹತ್ಯೆ

ದಿನಾಂಕ 11/02/2019ರಂದು ಸಿದ್ದಾಪುರ ಬಳಿಯ ಚೆನ್ನಂಗಿ ಗ್ರಾಮದ ಗೂಡ್ಲೂರು ನಿವಾಸಿ ವಿ.ಎನ್.ಹರೀಶ ಎಂಬವರು ಮನೆಯಲ್ಲಿ ಯಾವುದೋ ವಿಷ ಸೇವಿಸಿ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ಮೈಸೂರಿನ ಬಾನವಿ ಆಸ್ಪತ್ರೆಯಲ್ಲಿ ದಾಖಲಿಸಲಾತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 13/02/2019ರಂದು ಮೃತರಾಗಿರುವುದಾಗಿ ವರದಿಯಾಗಿದೆ. ಮೃತ ಹರೀಶ್‌ರವರು ಸುಮಾರು 3 ಲಕ್ಷದಷ್ಟು ಸಾಲ ಮಾಡಿ ಶುಂಠಿ ಕೃಷಿ  ಮಾಡಿದ್ದು ಕಳೆದ ವರ್ಷದ ಮಳೆಯಿಂದಾಗಿ ಶುಂಠಿ ಕೃಷಿ ನಾಶವಾಗಿ ನಷ್ಟ ಹೊಂದಿದ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ಸಿದ್ದಾಪುರ ಬಳಿಯ ಅಮ್ಮತ್ತಿ ಕಾರ್ಮಾಡು ನಿವಾಸಿ ಕೆ.ಜಿ.ಮಹೇಶ್ ಎಂಬವರು ದಿನಾಂಕ 10/02/2019ರಂದು ಮನೆಯಿಂದ ಕಾಣೆಯಾಗಿದ್ದು ಕೆ.ಜಿ.ಮಹೇಶ್‌ರವರ ಶವವು ದಿನಾಂಕ 14/02/2019ರಂದು ಹಾಲುಗುಂದ ಬಳಿಯ ಕೊಂಡಂಗೇರಿಯ ಕಾವೇರಿ ಹೊಳೆಯಲ್ಲಿ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 13/02/2019ರಂದು ವಿರಾಜಪೇಟೆ ಬಳಿಯ ಬಿಟ್ಟಂಗಾಲ ನಿವಾಸಿ ಎ.ಡಿ.ರಂಜಿತ್ ಎಂಬವರು ಅವರ ಬೈಕಿನಲ್ಲಿ ವಿರಾಜಪೇಟೆಯಿಂದ ಅಮ್ಮತ್ತಿ ಒಂಟಿಯಂಗಡಿ ಕಡೆಗೆ ಹೋಗುತ್ತಿರುವಾಗ  ಮುಕ್ಕಾಟಿಕೊಪ್ಪದ ಬಳಿ ಕೆಎ-12-7755ರ ಖಾಸಗಿ ಬಸ್ಸನ್ನು ಅದರ ಚಾಲಕ ಉಮೇಶ್‌ ಎಂಬಾತನು ಎದುರಿನಲ್ಲಿ ಬರುತ್ತಿದ್ದ ಕೆಎ-12-ಆರ್‌-1641ರ ಮೋಟಾರು ಬೈಕಿಗೆ ಡಿಕ್ಕಿಪಡಿಸಿ ಅದರ ಸವಾರ ದಾಮೋದರ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ; ಸಾವು

ದಿನಾಂಕ 14/02/2019ರಂದು ಪೊನ್ನಂಪೇಟೆ ಬಳಿಯ ಬೇಗೂರಿನ ಚೇನಿವಾಡ ನಿವಾಸಿ ಜೇನು ಕುರುಬರ ಜನಾರ್ಧನ ಎಂಬವರು ಅವರ ಬೈಕಿನ್ಲಲಿ ಸ್ನೇಹಿತನ ಮನೆಗೆ ಹೋಗುತ್ತಿರುವಾಗ ಮುಗುಟಗೇರಿ ಗ್ರಾಮದ ಕಲ್ಲು ಕೋರೆ ಬಳಿ ಪೊನ್ನಂಪೇಟೆ ನಿವಾಸಿ ಹೆಚ್‌.ಪಿ.ಮಂದಣ್ಣ ಎಂಬವರು ಅವರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜನಾರ್ಧನರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಜನಾರ್ಧನರವರು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 14/02/2019ರಂದು ಸೋಮವಾರಪೇಟೆ ಬಳಿಯ ದೊಡ್ಡಮೆಳ್ತೆ ಗ್ರಾಮದ ನಿವಾಸಿ ಸಚಿನ್ ಎಂಬವರು ಅವರ ಬೈಕಿನಲ್ಲಿ ಕಾವಡಿಕಟ್ಟೆ ಬಳಿಯಲ್ಲಿ ಹೋಗುತ್ತಿರುವಾಗ ಶನಿವಾರಸಂತೆ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಕುಶಾಲ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಚಿನ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸಚಿನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.