Crime News

ಅಪಘಾತ ವ್ಯಕ್ತಿಯ ದುರ್ಮರಣ

           ದಿನಾಂಕ 15-02-2019 ರಂದು ವಿರಾಜಪೇಟೆ ತಾಲೋಕಿನ ಹಳ್ಳಿಗಟ್ಟು ಗ್ರಾಮದ ನಿವಾಸಿಯಾದ ಅರುಣ ಎಂಬುವವರು ಚೇರಂಬಾಣೆಯಿಂದ ಮಂಜು, ಕವಿತ, ರಮೇಶ್, ಮಮತರವರನ್ನು ಕರೆದುಕೊಂಡು ಕಾರಿನಲ್ಲಿ ಹೋಗುತ್ತಿರುವಾಗ ಕಾರುಗುಂದ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಬಂದ ಲಾರಿಯನ್ನು ಅದರ ಚಾಲಕ ಅಬ್ದುಲ್ ರಜಾಕ್ ಎಂಬುವವರು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡು ಚಾಲನೆ ಮಾಡುತ್ತಿದ್ದ ಅರುಣರವರು ಮೃತಪಟ್ಟಿದ್ದು ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

             ದಿನಾಂಕ 14-02-2019 ರಂದು ಸೋಮವಾರಪೇಟೆ ತಾಲೋಕಿನ ದೊಡ್ಡಮಳ್ತೆ ಗ್ರಾಮದ ನಿವಾಸಿಯಾದ ಕವಿತಾರವರಿಗೆ ಅದೇ ಗ್ರಾಮದ ದಿಲೀಪ್, ಮಂಜುಳ, ವಿನಯ್ ಕುಮಾರ್ ಮತ್ತು ದಿವ್ಯರವರು ಆಸ್ತಿ ವಿಚಾರದಲ್ಲಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಕವಿತಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ದಿನಾಂಕ 03-02-2019 ರಂದು ಸೋಮವಾರಪೇಟೆ ತಾಲೋಕಿನ ಕೊತ್ತನಹಳ್ಳಿಯ ನಿವಾಸಿ ಹೂವಯ್ಯನವರು ಧನುಂಜಯರವರೊಂದಿಗೆ ಕುಶಾಲನಗರದಿಂದ ಸೋಮವಾರಪೇಟೆಗೆ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಕಾರೆಕೊಪ್ಪ ಎಂಬಲ್ಲಿಗೆ ತಲುಪುವಾಗ ಮೋಟಾರು ಸೈಕಲ್ ಅಪಘಾತವಾಗಿ ಹೂವಯ್ಯನವರ ಕಾಲಿಗೆ ಗಾಯವಾಗಿದ್ದು, ಈ ಬಗ್ಗೆ ದಿನಾಂಕ 15-02-2019 ರಂದು ಹೂವಯ್ಯನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.