Crime News

ಅಪರಿಚಿತ ವ್ಯಕ್ತಿ ಸಾವು

ದಿನಾಂಕ 16/02/2019ರಂದು ಪೊನ್ನಂಪೇಟೆಯ ಜೋಡುಬೆಟ್ಟಿ ಬಳಿ ಓರ್ವ ಅಪರಿಚಿತ ವ್ಯಕ್ತಿಯು ಅಸ್ವಸ್ಥನಾಗಿ ಬಿದ್ದಿದ್ದು ಅವನನ್ನು ಪೊನ್ನಂಪೇಟೆ ಪಂಚಾಯಿತಿಯ ಪೌರ ಕಾರ್ಮಿಕ ಪರಮೇಶ್‌ ಎಂಬವರು ಕಂಡು ಪಂಚಾಯಿತಿಯ ಗುಮಾಸ್ತ ಪಿ.ಪಿ.ಗಣಪತಿರವರಿಗೆ ತಿಳಿಸಿ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ವ್ಯಕ್ತಿಯು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 15/02/2019ರಂದು ಕುಟ್ಟ ಬಳಿಯ ಕೋತೂರು ಗ್ರಾಮದ ಲಕ್ಕುಂದ ಪೈಸಾರಿ ನಿವಾಸಿ ಮನೋಹರ ಎಂಬವರು

ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಅತೀವ ಮದ್ಯವಸ್ಯಸನಿಯಾಗಿದ್ದ ಮನೋಹರವರು ಸಾಂಸಾರಿಕ ಜೀವನದ ಜುಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ಶನಿವಾರಸಂತೆ ನಿವಾಸಿ ಡಾ. ಶಿವಪ್ರಸಾದ್‌ ಎಂಬವರು ಹಾಗೂ ಅವರ ಪತ್ನಿ ದಿನಾಂಕ 14/02/2019ರಂದು ಕರ್ತವ್ಯದ ನಿಮಿತ್ತ ಮನೆಯಿಂದ ಹೊರಗಡೆ ಹೋಗಿದ್ದು ಮನೆಯಲ್ಲಿದ್ದ ಅವರ ಅತ್ತೆಯವರು ಸಹಾ ಶಾಲೆಯಿಂದ ಮಗುವನ್ನು ಕರೆದುಕೊಂಡು ಬರಲು ಹೋಗಿದ್ದ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನಿಂದ ಒಳಗೆ ಪ್ರವೇಶಿಸಿ ಮನೆಯೊಳಗಿನಿಂದ ದಾಖಲೆಗಳನ್ನಿಟ್ಟಿದ್ದ ಒಂದು ಸೂಟ್‌ಕೇಸ್ ಹಾಗೂ ರೂ.20,000/- ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 15/02/2019ರಂದು ಗುಡ್ಡೆಹೊಸೂರಿನ ಬೊಳ್ಳೂರು ನಿವಾಸಿ ಎಡ್ವಿನ್ ಎಂಬವರು ವಿಶ್ವ ಎಂಬವರ ಸ್ಕೂಟರಿನಲ್ಲಿ ಬಸವನಹಳ್ಳಿಯಿಂದ ಗುಡ್ಡೆಹೊಸೂರಿಗೆ ಬರುತ್ತಿರುವಾಗ ಒಂದು ಹಸು ರಸ್ತೆಯಲ್ಲಿ ಅಡ್ಡ ಬಂದಿದ್ದು ವಿಶ್ವರವರು ಹಸುವನ್ನು ತಪ್ಪಿಸಲು ಸ್ಕೂಟರನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಸ್ಕೂಟರ್ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿಯಾಗಿ ಸ್ಕೂಟರಿನ ಹಿಂಬದಿ ಸವಾರ ಎಡ್ವಿನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 16/02/2019ರಂದು ಚಿಕ್ಕ ಅಳುವಾರಿ ನಿವಾಸಿ ಟಿ.ಜಿ.ವೆಂಕಟೇಶ್ ಎಂಬವರ ಅಕ್ಕನ ಮಗ ಮುರಳಿ ಎಂಬಾತ ಬೈಕಿನಲ್ಲಿ ಕೂಡಿಗೆ ಕಡೆಯಿಂದ ಕುಶಾಲನಗರಕ್ಕೆ ಹೋಗುತ್ತಿರುವಾಗ ಕೂಡ್ಲೂರು ಗ್ರಾಮದ ಆರ್‌ಆರ್‌ ವೇ ಬ್ರಿಡ್ಜ್ ಬಳಿ ಕುಶಾಲನಗರ ಕಡೆಯಿಂದ ಒಂದು ಪಿಕ್‌ಅಪ್ ವಾಹನವನ್ನು ಅದರ ಚಾಲಕ ಸೂರ್ಯ ಕುಮಾರ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುರುಳಿಯ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಮುರುಳಿಯವರಿ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ  ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 16/02/2019ರಂದು ಕೂಡಿಗೆ ಗ್ರಾಮದ ನಿವಾಸಿ ಹೆಚ್‌.ಇ.ರಾಮು ಎಂಬವರು ರಸ್ತೆ ಬದಿಯಲ್ಲಿ ಅವರ ಸ್ನೇಹಿತ ಗಂಗಯ್ಯ ಎಂಬವರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಕೂಡಿಗೆ ನಿವಾಸಿ ದೀಪು ಎಂಬಾತನು ಆತನ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಮುರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಮುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.