Crime News

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ

ವಿರಾಜಪೇಟೆ ನಗರ ಠಾಣೆ ಎಎಸ್‌ಐ ಸಿ.ಕೆ.ಭೀಮಯ್ಯರವರು ದಿನಾಂಕ 17/02/2019ರಂದು ದೂರರ್ಜಿಯೊಂದರ ಎದುರು ಅರ್ಜಿದಾರರಾದ ಸಂದೀಪ ಎಂಬವರನ್ನು ವೈದ್ಯಕೀಯ ಪರೀಕ್ಷೆಗಾಗಿ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಸಂದೀಪನು ಜೊತೆಯಲ್ಲಿದ್ದ ಪೊಲೀಸ್‌ ಸಿಬ್ಬಂದಿಗಳಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ಎಎಸ್‌ಐ ಸಿ.ಕೆ.ಭೀಮಯ್ಯನವರ ಅಂಗಿಯನ್ನು ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಲ್ಲದೆ ಆಸ್ಪತ್ರೆಯ ಚಿಕಿತ್ಸಾ ಕೊಠಡಿಯ ಬಾಗಿಲಿನ ಗಾಜುಗಳನ್ನು ಕಾಲಿನಿಂದ ಒದ್ದು ಒಡೆದು ಹಾಕಿ ನಷ್ಟವುಂಟು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ 16/02/2019ರಂದು ಅಮ್ಮತ್ತಿ ನಿವಾಸಿ ಕೆ.ಎಸ್.ಶಿವರಾಂ ಎಂಬವರು ಅವರ ಪತ್ನಿಯೊಂದಿಗೆ ಕಡಂಗದ ದೊಡ್ಡಮಕ್ಕಿಯಲ್ಲಿರುವ ಅವರ ಭಾವನ ಮನೆಗೆ ಹೋಗಿ ಸಂಜೆ ಮರಳಿ ಬರುವಾಗ ಯಾರೋ ಕಳ್ಳರು ಅವರ ಮನೆಯ ಹೆಂಚನ್ನು ತೆಗೆದು ಒಳ ನುಗ್ಗಿ ಮನೆಯೊಳಗಿದ್ದ ಬ್ಯಾಗೊಂದರಲ್ಲಿದ್ದ ಸುಮಾರು ರೂ. 7000-8000 ದಷ್ಟು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ವ್ಯಕ್ತಿ ಸಾವು

ದಿನಾಂಕ 17/02/2019ರಂದು ಪೊನ್ನಂಪೇಟೆ ಬಳಿಯ ಸುಳುಗೋಡು ನಿವಾಸಿ ರಾಜೇಂದ್ರ ಎಂಬವರು ಕಡೇಮಾಡ ಗಣಪತಿ ಎಂಬವರ ಕೆರೆಯಲ್ಲಿ ಬಟ್ಟೆ ಒಗೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್ ಕಳವು

ಗೋಣಿಕೊಪ್ಪ ನಗರದ ವೆಂಕಟಪ್ಪ ಬಡಾವಣೆಯ ನಿವಾಸಿ ಡಬ್ಲು ಕುಮಾರ್ ಎಂಬವರು ಅವರ ಡಬ್ಲ್ಯುಬಿ-74-ಎಜೆ-1020 ಸಂಖ್ಯೆಯ ಮೋಟಾರು ಬೈಕನ್ನು ದಿನಾಂಕ 12/02/2019ರಂದು ಮನೆಯ ಮುಂದೆ ನಿಲ್ಲಿಸಿದ್ದು ಮಾರನೇ ದಿನ ನೋಡುವಾಗ ಬೈಕ್ ಅಲ್ಲಿ ಕಾಣೆದೇ ಇದ್ದ ಕಾರಣ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೆ ತನ್ನ ಬೈಕನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 17/02/2019ರಂದು ಪೊನ್ನಂಪೇಟೆ ಬಳಿಯ ತಿತಿಮತಿ ನೊಕ್ಯ ಗ್ರಾಮದ ದೇವರಕಾಡು ಪೈಸಾರಿ ನಿವಾಸಿ ಎಸ್.ಆರ್.ಲೋಕೇಶ ಎಂಬವರು ಮನೆಯ ಮುಂಧಿನ ಬೀದಿ ದೀಪ ಉರಿಯದ ಕಾರಣ ಮೊಬೈಲಿನಲ್ಲಿ ಅದರ ಚಿತ್ರೆ ತೆಗೆದು ಪಂಚಾಯಿತಿಯ ಅಧಿಕಾರಿಗಳಿಗೆ ತೋರಿಸಲೆಂದು ಚಿತ್ರ ತೆಗೆಯಲು ನಿಂತಿದ್ದಾಗ ಅಲ್ಲಿಗೆ ಬಂದ ಅದೇ ಪೈಸಾರಿ ನಿವಾಸಿ. ರಮೇಶ ಎಂಬವರು ಲೋಕೇಶರವರಿಗೆ ಅಶ್ಲೀಲ ಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 17/02/2019ರಂದು ಬಲ್ಯಮಂಡೂರು ನಿವಾಸಿ ಕೃಷ್ಣ ಎಂಬವರು ಪೊನ್ನಂಪೇಟೆ ನಗರದ ಪೆಟ್ರೋಲ್ ಬಂಕಿನ ಮುಂದೆ ನಿಂತುಕೊಂಡಿರುವಾಗ ಗೋಣಿಕೊಪ್ಪ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೃಷ್ಣರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ 16/02/2019ರ ರಾತ್ರಿ ವೇಳೆ ಶನಿವಾರಸಂತೆ ನಗರದ ಬೈಪಾಸ್ ರಸ್ತೆಯ ನಿವಾಸಿ ಕಮಲಮ್ಮ ಎಂಬವರ ಹಳೆಯ ಮನೆಗೆ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ಸುಮಾರು ರೂ.9,000/- ನಗದು ಹಾಗೂ ರೂ. 15,000/- ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.