Crime News

ಹಲ್ಲೆ ಪ್ರಕರಣ

ದಿನಾಂಕ 17/02/2019ರಂದು ರಾತ್ರಿ ವೇಳೆ ತಿತಿಮತಿ ಗ್ರಾಮದ ಬಾಳುಮನಿ ನಿವಾಸಿ ಹೆಚ್‌.ಆರ್.ನವೀನ ಎಂಬವರು ತೋಟದಲ್ಲಿ ಕಾವಲು ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಬಾಳುಮನಿ ನಿವಾಸಿ ಅರುಣ ಎಂಬಾತನು ಹಳೆ ದ್ವೇಷದಿಂದ ನವೀನರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ಮಹಿಳೆ ಸಾವು

ದಿನಾಂಕ 17/02/2019ರಂದು ಗೋಣಿಕೊಪ್ಪ ಬಳಿಯ ಬಾಳಾಜಿ ಗ್ರಾಮದ ಚೆನ್ನಂಗೊಲ್ಲಿ ನಿವಾಸಿ ಜೇನುಕುರುಬರ ಸಿದ್ದ ಎಂಬವರ ಪತ್ನಿ ಗಂಗು ಎಂಬವರು ಮದ್ಯಪಾನ ಮಾಡಿದ ಅಮಲಿನಲ್ಲಿ ಮುಕ್ಕಾಟಿರ ಜಯಂತಿ ಎಂಬವರ ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 18/02/2019ರಂದು ಗೋಣಿಕೊಪ್ಪ ಬಳಿಯ ಅರುವತೊಕ್ಲು ನಿವಾಸಿ ಕೃಷಿಕ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಅವರ ಪತಿ ಕೆ.ಬಿ.ರಷಿಕ್ ಎಂಬಾತನು ಕೃಷಿಕಾರವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ಮಾಡಿದ್ದು ತಡೆಯಲು ಬಂದು ಕೃಷಿಕಾರವರ ತಂದೆ ಚೆಂಗಪ್ಪ ಹಾಗೂ ತಾಯಿ ರಾಣಿರವರ ಮೇಲೂ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು, ಆದೇ ರೀತಿ ರಷಿಕ್‌ರವರ ಮೇಲೆ ಕೃಷಿಕಾ ಹಾಗೂ ಅವರ ತಂದೆ ಹಲ್ಲೆ ಮಾಡಿರುವುದಾಗಿ ರಷಿಕ್‌ರವರು ಪ್ರತಿ ದೂರು ನೀಡಿದ  ಮೇರೆಗೆ ಗೋಣಿಕೊಪ್ಪ ಪೊಲೀಸರು ಎರಡೂ ದೂರುಗಳನ್ನು  ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಪರಸ್ಪರ ಹಲ್ಲೆ ಪ್ರಕರಣ

ದಿನಾಂಕ 17/02/2019ರಂದು ಗೋಣಿಕೊಪ್ಪದ ಬೈಪಾಸ್ ರಸ್ತೆಯಲ್ಲಿ ಹಾತೂರು ನಿವಾಸಿ ವಿ.ಎಸ್.ರವಿ ಕುಮಾರ್ ಎಂಬವರು ಅವರ ಕಾರಿನಲ್ಲಿ ಬರುತ್ತಿದ್ದಾಗ ಇನ್ನೊಂದು ಇನ್ನೋವಾ ಕಾರಿನಲ್ಲಿ ಬಂದ ಗೋಣಿಕೊಪ್ಪದ ನಿವಾಸಿಗಳಾದ ಚರಣ್, ಗಣೇಶ್ ಮತ್ತು ವಿನೋದ್ ಎಂಬವರು ಯಾವುದೋ ಕಾರಣಕ್ಕೆ ರವಿಕುಮಾರ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು, ಅದೇ ರೀತಿ ಮಹೇಶ್‌, ಮನು, ಸಂಜು, ಮಂಜು ಮತ್ತು ರವಿ ಕುಮಾರ್‌ರವರುಗಳು ಸೇರಿಕೊಂಡು ಚರಣ್‌ ಕುಮಾರ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ಚರಣ್‌ ಕುಮಾರ್‌ರವರು ಪ್ರತಿ ದೂರು ನೀಡಿದ್ದು ಗೋಣಿಕೊಪ್ಪ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.