Crime News

ಅಕ್ರಮ ಮದ್ಯ ಮಾರಾಟ

ವಿರಾಜಪೇಟೆ ತಾಲೂಕಿನ ಬೆಸಗೂರು ಗ್ರಾಮದ ರಿನ್ನ @ ಅಯ್ಯಪ್ಪ ಎಂಬುವವರು ತನ್ನ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಇದ್ದ ಮಾಹಿತಿ ಮೇರೆಗೆ ದಿನಾಂಕ 24-3-2018 ರಂದು ಪೊನ್ನಂಪೇಟೆ ಠಾಣೆಯ ಉಪ ನಿರೀಕ್ಷಕರಾದ ಮಹೇಶ್ ರವರು ಸಿಬ್ಬಂದಿಯವರೊಂದಿಗೆ ಮನೆಗೆ ದಾಳಿ ಮಾಡಿ ಮನೆಯಲ್ಲಿ ಮಾರಾಟ ಮಾಡಲು ಇಟ್ಟಿದ್ದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಮೊಬೈಲ್ ಕಳುವಿಗೆ ಯತ್ನ

ದಿನಾಂಕ 24-3-2018 ರಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಥಮ ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಮೇಘನಾ ಎಂಬುವವರು ಬಿ.ಸಿ.ಎಂ ಹಾಸ್ಟೇಲ್ ನಿಂದ ತರಭೇತಿಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ನೇಹಿತೆ ಅಪೇಕ್ಷರವರೊಂದಿಗೆ ಮಡಿಕೇರಿ ನಗರದ ಖಾಸಗಿ ಬಸ್ಸು ನಿಲ್ದಾಣದ ಹತ್ತಿರ ಇರುವ ಹಾಲಿನ ಡೈರಿಯ ಪಕ್ಕ ಕೈಯಲ್ಲಿ ಮೊಬೈಲನ್ನು ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವಾಗ ಕುಶಾಲನಗರದ ನಿವಾಸಿ ರಂಜಿತ್ ಎಂಬುವವರು ಹಿಂದಿನಿಂದ ಹೋಗಿ ಕೈಯಿಂದ ಮೊಬೈಲನ್ನು ಕಿತ್ತುಕೊಂಡು ಓಡಲು ಪ್ರಯತ್ನಿಸಿದವನನ್ನು ಸಾರ್ವಜನಿಕರು ಹಿಡಿದಿದ್ದು, ಈ ಬಗ್ಗೆ ಮೇಘನಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

ದಿನಾಂಕ 24-3-2018ರಂದು ಶನಿವಾರಸಂತೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಆನಂದರವರು ಗಸ್ತುವಿನಲ್ಲಿರುವಾಗ ಕೊಡ್ಲಿಪೇಟೆಯ ಜನಾರ್ಧನ ಹಳ್ಳಿ ಎಂಬಲ್ಲಿ ಸಾರ್ವಜನಿಕ ರಸ್ತೆಯ ಪಕ್ಕ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ  ಸಿಬ್ಬಂದಿಯವರೊಂದಿಗೆ ಅಲ್ಲಿಗೆ ಹೋಗಿ ದಾಳಿ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ತಿಮ್ಮೇಗೌಡ ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Leave a Reply

Your email address will not be published.