Crime News

ಕಳವು ಪ್ರಕರಣ

       ಮಡಿಕೇರಿ ತಾಲೋಕಿನ ಕಟ್ಟೆಮಾಡು ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿಗಾಗಿ ಕಾವೇರಿ ಹೊಳೆಗೆ ಮರಗೋಡು ಗ್ರಾಮ ಪಂಚಾಯಿತಿಯವರು ಅಳವಡಿಸಿದ್ದ 10 ಹೆಚ್ ಪಿ. ಮೋಟರನ್ನು, ಕಬ್ಬಿಣದ ಪೈಪು ಮತ್ತು ಕೇಬಲನ್ನು ಯಾರೋ ದಿನಾಂಕ 09-02-2019 ರಂದು ಕಳವು ಮಾಡಿದ್ದು, ಈ ಬಗ್ಗೆ ಮರಗೋಡು ಗ್ರಾಮ ಪಂಚಾಯಿತಿಯ ಪಿಡಿಓ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

             ದಿನಾಂಕ 19-02-2019 ರಂದು ವಿರಾಜಪೇಟೆ ತಾಲೋಕಿನ ಹೆಗ್ಗಳ ಗ್ರಾಮದ ವಿಜಯರವರು ಸಹದೇವ ಎಂಬುವವರೊಂದಿಗೆ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಗುಂಡಿಗೆರೆ ರಾಮನಗರ ಜಂಕ್ಷನ್ ತಲುಪುವಾಗ ನಡೆದುಕೊಂಡು ಹೋಗುತ್ತಿದ್ದ ಆದಿತ್ಯ ಎಂಬ ಮಗುವಿಗೆ ಸಹದೇವನು ಡಿಕ್ಕಿಪಡಿಸಿ ಬೈಕ್ ಸಮೇತ ಬಿದ್ದು, ಸಹದೇವ, ವಿಜಯ ಮತ್ತು ಆದಿತ್ಯ ಎಂಬ ಮಗುವಿಗೆ ಗಾಯವಾಗಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

           ದಿನಾಂಕ 18-02-2019 ರಂದು ಮಡಿಕೇರಿ ತಾಲೋಕಿನ ಕರಿಕೆ ಗ್ರಾಮದ ನಿವಾಸಿಯಾದ ಅಶ್ರಫ್ ಎಂಬುವವರಿಗೆ ಪಕ್ಕದ ನಿವಾಸಿಗಳಾದ ಹನೀಫ್, ಉಮ್ಮರ್ ಮತ್ತು ಹಕೀಮ್ ರವರು ಆಸ್ತಿ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

              ದಿನಾಂಕ 19-02-2019 ರಂದು ಮೈಸೂರಿನಿಂದ ವಿರಾಜಪೇಟೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ ಬಸ್ಸು ಗೋಣಿಕೊಪ್ಪಲುವಿನ ಆರ್.ಎಂ.ಸಿ ಹತ್ತಿರ ತಲುಪುವಾಗ ಎದುರಿನಿಂದ ಬಂದ ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸು ಹಾಗೂ ಕಾರು ಜಖಂಗೊಂಡಿದ್ದು, ವ್ಯಾನಿನ ಚಾಲಕನಿಗೆ ಗಾಯವಾಗಿದ್ದು, ಈ ಬಗ್ಗೆ ಬಸ್ಸಿನ ಚಾಲಕ ಶರಣಪ್ಪ  ಇ ಮಡಿವಾಳರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.