Crime News

ವ್ಯಕ್ತಿ ಕಾಣೆ

         ಮಡಿಕೇರಿ ನಗರದ ದೇಚೂರುವಿನ ನಿವಾಸಿ 74 ವರ್ಷ ಪ್ರಾಯದ ಸ್ವಾಮಿ ಎಂಬುವವರು ದಿನಾಂಕ 18-02-2019 ರಂದು ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈ ಬಗ್ಗೆ ಪತ್ನಿ ಕಮಲರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

         ದಿನಾಂಕ 20-02-2019 ರಂದು ಬಾವಲಿ ಗ್ರಾಮದ ನಿವಾಸಿಯಾದ ಭುವಿತ್ ಎಂಬುವವರಿಗೆ ಅದೇ ಗ್ರಾಮದ ಮೀರನ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

          ಶನಿವಾರಸಂತೆ ನಗರದ ನಿವಾಸಿ ವಸಂತ್ ಕುಮಾರ್ ಎಂಬುವವರು ದಿನಾಂಕ 09-02-2019 ರಂದು ಸ್ವಂತ ಊರಾದ ಬಾಳೆಲೆಯ ಕೊಟ್ಟಗೇರಿ ಗ್ರಾಮಕ್ಕೆ ಹೋಗಿದ್ದವರು ವಾಪಸ್ಸು ದಿನಾಂಕ 19-02-2019 ರಂದು ಬಂದು ನೋಡುವಾಗ ಮನೆಯ ಬೀಗವನ್ನು ಯಾರೋ ಕಳ್ಳರು ಒಡೆದು ಒಳನುಗ್ಗಿ 8 ಗ್ರಾಂ ಚಿನ್ನದ ಸರ ಮತ್ತು 3000 ರೂ ನಗದು ಹಣ ಕಳವು ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ದಿನಾಂಕ 19-02-2019 ರಂದು ಪಿರಿಯಾಪಟ್ಟಣ ತಾಲೋಕಿನ ನಿವಾಸಿಯಾದ ನಾಗೇಶ್ ಎಂಬುವವರು ತನ್ನ ಮೋಟಾರು ಸೈಕಲಿನಲ್ಲಿ ಹೆಬ್ಬಾಲೆ ಮಾರ್ಗವಾಗಿ ಸೂಳೆಕೋಟೆಗೆ ಹೋಗುತ್ತಿರುವಾಗ ಹೆಬ್ಬಾಲೆ ಗ್ರಾಮದ ಕಾವೇರಿ ಹೊಳೆಗೆ ಕಟ್ಟಲಾಗಿರುವ ಸೇತುವೆಯ ಹತ್ತಿರ ತಲುಪುವಾಗ ಎದುರಿನಿಂದ ಬಂದ ಮೋಟಾರು ಸೈಕಲನ್ನು ಅದರ ಸವಾರ ಶಿವರಾಜು ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ನಾಗೇಶ್ ರವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ನಾಗೇಶ್ ರವರಿಗೆ ಗಾಯವಾಗಿದ್ದು, ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕಿಗೆ ಕಾರು ಡಿಕ್ಕಿ

           ದಿನಾಂಕ 19-02-2019 ರಂದು ಗೋಣಿಕೊಪ್ಪ ನಗರದ ನಿವಾಸಿ ಅಫ್ರಿದ್ ಎಂಬುವವರು ಅರ್ಷದ್ ಎಂಬುವವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಚೆನ್ನಂಗೊಲ್ಲಿಯಿಂದ ಗೋಣಿಕೊಪ್ಪಲುವಿಗೆ ಹೋಗುತ್ತಿರುವಾಗ ಗೋಣಿಕೊಪ್ಪ ನಗರದಲ್ಲಿ ಮುಂದಿನಿಂದ ಬಂದ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೂ ಗಾಯವಾಗಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.