Crime News

ರಸ್ತೆ ಅಪಘಾತ

ದಿನಾಂಕ 21/02/2019ರಂದು ಕತ್ತಲೆಕಾಡು ನಿವಾಸಿ ಬಿ.ಜಿ.ಅಶೋಕ್ ಕುಮಾರ್ ಎಂಬವರು ಅವರ ಮೋಟಾರು ಬೈಕಿನಲ್ಲಿ ಮಡಿಕೇರಿ ನಗರದ ಕಾಮಧೇನು ಪೆಟ್ರೋಲ್ ಬಂಕ್ ಬಳಿ ಬೈಕನ್ನು ಬಲಕ್ಕೆ ತಿರುಗಿಸುತ್ತಿರುವಾಗ ಹಿಂದಿನಿಂದ ಒಂದು ಬಿಳಿ ಬಣ್ಣದ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಶೋಕ್‌ ಕುಮಾರ್‌ರವರ ಬೈಕಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ಅಶೋಕ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ; ಬೈಕ್ ಸವಾರ ಮೃತ

ದಿನಾಂಕ 21/02/2019ರಂದು ಚೇರಳ ಶ್ರೀಮಂಗಲದ ಕಂಡಕೆರೆ ನಿವಾಸಿ ಪಿ.ಎನ್.ಪ್ರಭಾಕರ ಎಂಬವರು ಅವರ ಬೈಕಿನಲ್ಲಿ ಮಡಿಕೇರಿನಗರದಿಂದ ಅವರ ಮನೆಗೆ ಹೋಗುತ್ತಿರುವಾಗ ನಗರದ ಅಶೋಕಪುರದ ಬಳಿ ಎದುರಿನಿಂದ ಒಂದು ಬೈಕನ್ನು ಅದರ ಚಾಲಕ ಕಡಗದಾಳು ಬಳಿಯ ಶಶಿಕುಮಾರ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರಭಾಕರರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಪ್ರಭಾಕರರವರಿಗೆ ಗಾಯಗಳಾಗಿದ್ದು ತೀವ್ರವಾಗಿ ಗಾಯಗೊಂಡ ಶಶಿಕುಮಾರ್‌ರವರು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಸಾವು

ಚೆನ್ನಂಗಿ ಬಳಿಯ ಚೊಟ್ಟೆಪಾರೆ ನಿವಾಸಿ ಸುಮತಿ ಎಂಬವರ ಪತಿ ಲಿಂಗ ಎಂಬವರು ಕುಂಜಿಲ ಗ್ರಾಮದ ಕಲಿಯಾಟಂಡ ಗಿರೀಶ್‌ರವರಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 20/02/2019ರಂದು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು ಸಂಜೆ ನಾಲ್ಕು ಗಂಟೆಗೆ ಕಾಫಿ ಕಣದಲ್ಲಿ ಮಲಗಿದ್ದು ನೋಡಿದಾಗ ಮೃತಪಟ್ಟಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 20/02/2019ರಂದು ಪೊನ್ನಂಪೇಟೆ ಬಳಿಯ ಬಲ್ಯಮಂಡೂರು ನಿವಾಸಿ ಚೆರಿಯಂಡ ತಮ್ಮಯ್ಯ ಎಂಬವರು ಅದೇ ಗ್ರಾಮದ ನಿವಾಸಿ ನಿಖಿಲ್‌ ಎಂಬವರು ತಮ್ಮಯ್ಯನವರಿಗೆ ನೀಡಬೇಕಾದ ಹಣವನ್ನು ಕೇಳಿದ ಕಾರಣಕ್ಕೆ ಚೆರಿಯಂಡ ನರೇಂದ್ರ ಮತ್ತು ಚೆರಿಯಂಡ ನಿಖಿಲ್ ಇಬ್ಬರೂ ಸೇರಿಕೊಂಡು ತಮ್ಮಯ್ಯನವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 21/02/2019ರಂದು ಸೋಮವಾರಪೇಟೆ ಬಳಿಯ ತಣ್ಣೀರು ಹಳ್ಳ ನಿವಾಸಿ ಆರ್‌.ರಾಜೇಂದ್ರ ಎಂಬವರಿಗೆ ಹಣದ ವಿಚಾರವಾಗಿ ಮಾವ ಮೋಹನ ಅತ್ತೆ ಪೂರ್ಣಿಮಾ ಮತ್ತು ಮೀನಾಕ್ಷಿ ಎಂಬವರುಗಳು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜಾನುವಾರು ಕಳವು

ದಿನಾಂಕ 20/02/2019ರಂದು ಕುಶಾಲನಗರ ಮುಳ್ಳುಸೋಗೆ ನಿವಾಸಿ ಪ್ರಸನ್ನ ಎಂ.ಎಸ್.ಎಂಬವರ ಸುಮಾರು ರೂ.35,000/- ಬೆಲೆ ಬಾಳುವ ಒಂದು ಹಸು ಮತ್ತು ಕರುವನ್ನು ರಾತ್ರಿ ವೇಳೆ ಯಾರೋ ಕಳ್ಳರು ಸ್ಕಾರ್ಪಿಯೋ ವಾಹನದಲ್ಲಿ ಬಂದು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 20/02/2019ರಂದು ಅರಕಲಗೂಡಿನ ಸಂತೆಮರೂರು ನಿವಾಸಿ ಎಂ.ಎಸ್.ರವಿ ಎಂಬವರು ರವೀಂದ್ರ ಎಂಬವರ ಪಿಕ್‌ಅಪ್ ವಾಹನದಲ್ಲಿ ಶನಿವಾರಸಂತೆಗೆ ಕೆಲಸಕ್ಕೆಂದು ಬಂದು ಸಂಜೆ ಕೆಲಸಮುಗಿಸಿ ವಾಪಾಸು ಹೋಗುವಾಗ ಹಿಪ್ಲಿಗೇಟ್ ಬಳಿ ವಾಹನವನ್ನು ಅದರ ಚಾಲಕ ರವೀಂದ್ರರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಪಿಕ್‌ಅಪ್ ವಾಹನವು ರಸ್ತೆಯಲ್ಲಿ ಮಗುಚಿಕೊಂಡಿದ್ದು ಅದರಲ್ಲಿದ್ದ ರವಿ ಹಾಗೂ ಇತರೆ 8 ಜನರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.