Crime News

ಮರದ ಕೊಂಬೆ ಬಿದ್ದು ವ್ಯಕ್ತಿಯ ಸಾವು

            ಸೋಮವಾರಪೇಟೆ ತಾಲೋಕಿನ ಪೊನ್ನತ್ ಮೊಟ್ಟೆಯ ನಿವಾಸಿ ಅಬ್ದುಲ್ಲಾ ಎಂಬುವವರು ದಿನಾಂಕ 22-02-2019 ರಂದು ಬೋಯಿಕೇರಿಯಲ್ಲಿರುವ ಸ್ಯಾಂಡಲ್ ಕಾಡ್ ಎಸ್ಟೇಟ್ ನಲ್ಲಿ ಮರ ಕಪಾತು ಮಾಡುತ್ತಿರುವಾಗ ಮರದ ಕೊಂಬೆ ಬಿದ್ದು ಗಾಯಗೊಂಡು ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೀಪು ಅಪಘಾತ ಮಹಿಳೆಯ ದುರ್ಮರಣ

            ದಿನಾಂಕ 22-02-2019 ರಂದು ಮಡಿಕೇರಿ ತಾಲೋಕಿನ ಚೇರಂಗಾಲ ಗ್ರಾಮದ ನಿವಾಸಿಯಾದ ಯದುಕುಮಾರ್ ಎಂಬುವವರು ಭಾಗಮಂಡಲದಿಂದ ಮನೆಗೆ ಜೀಪಿನಲ್ಲಿ ಪತ್ನಿ ಗೀತರವರೊಂದಿಗೆ ಹೋಗುತ್ತಿರುವಾಗ ಚೇರಂಗಾಲ ಗ್ರಾಮದ ಕಿರಣರರವರ ಮನೆಯ ಹತ್ತಿರ ತಲುಪುವಾಗ ಜೀಪು ನಿಯಂತ್ರಣ ತಪ್ಪಿ ಬರೆಗೆ ಡಿಕ್ಕಿಯಾದ ಪರಿಣಾಮ ಮುಂದೆ ಕುಳಿತ್ತಿದ್ದ ಗೀತರವರ ತಲೆಗೆ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

            ಮಡಿಕೇರಿ ತಾಲೋಕಿನ ನಾಲಡಿ ಗ್ರಾಮದ ನಿವಾಸಿಯಾದ ಅಪ್ಪಚ್ಚು ಎಂಬುವವರು ಸಂಸಾರದೊಂದಿಗೆ ಮೈಸೂರಿನಲ್ಲಿ ವಾಸವಿದ್ದು, ದಿನಾಂಕ 21-02-2019 ರಂದು ಯಾರೋ ಕಳ್ಳರು ನಾಲಡಿ ಗ್ರಾಮದಲ್ಲಿರುವ ಅವರ ಮನೆಯ ಹೆಂಚನ್ನು ತೆಗೆದು ಒಳನುಗ್ಗಿ ಎಸ್.ಬಿ,ಬಿ,ಎಲ್ ಬಂದೂಕು, ಇಂಪೋರ್ಟ್ ಟೆಡ್ ಟಾರ್ಚ್, 2 ಬಾಟಲಿ ಸ್ಕಾಚ್ ವಿಸ್ಕಿ ಬಾಟಲಿಗಳನ್ನು ಕಳವು ಮಾಡಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ

             ದಿನಾಂಕ 20-02-2019 ರಂದು ವಿರಾಜಪೇಟೆ ತಾಲೋಕಿನ ಕಾವಾಡಿ ಗ್ರಾಮದ ನಿವಾಸಿ ಕೆಂಚ ಎಂಬುವವರು ಅಮ್ಮತ್ತಿಯಿಂದ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಕಾವಾಡಿ ಸೇತುವೆಯ ಹತ್ತಿರ ತಲುಪುವಾಗ ಎದುರಿನಿಂದ ಬಂದ ಮೋಟಾರು ಸೈಕಲನ್ನು ವಿಶ್ವನಾಥ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಕೆಂಚರವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯವಾಗಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಿದ್ಯುತ್ ತಂತಿಗೆ ಏಣಿ ತಾಗಿ ವ್ಯಕ್ತಿಯ ಸಾವು

            ದಿನಾಂಕ 22-02-2019 ರಂದು ವಿರಾಜಪೇಟೆ ತಾಲೋಕಿನ ಅರ್ವತ್ತೋಕ್ಲು ಗ್ರಾಮದ ನಿವಾಸಿಯಾದ ಪೆಮ್ಮಯ್ಯನವರ ತೋಟದಲ್ಲಿ ಹನ್ನು ಎಂಬುವವರು ಕಬ್ಬಿಣದ ಏಣಿಯನ್ನು ಉಪಯೋಗಿಸಿ ಮೆಣಸನ್ನು ಕುಯ್ಯುತ್ತಿರುವಾಗ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ಏಣಿ ತಾಗಿ ವಿದ್ಯುತ್ ಸ್ಪರ್ಷಗೊಂಡು ಮೃತಪಟ್ಟಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

              ಸೋಮವಾರಪೇಟೆ ತಾಲೋಕಿನ ದೊಡ್ಡಳ್ಳಿ ಗ್ರಾಮದ ನಿವಾಸಿಯಾದ ಸೋಮ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 22-02-2019 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

           ದಿನಾಂಕ 21-02-2019 ರಂದು ಗುಡ್ಡೆಹೊಸೂರು ಗ್ರಾಮದ ನಿವಾಸಿಯಾದ ಲೋಕೇಶ ಎಂಬುವವರು ಸಂಜು ಎಂಬುವವರೊಂದಿಗೆ ಕೊಡ್ಲಿಪೇಟೆಗೆ ಹೋಗಿದ್ದವರು ವಾಪಾಸ್ಸು ಬರುತ್ತಿರುವಾಗ ಆಲೂರು ಸಿದ್ದಾಪುರದಲ್ಲಿರುವ ಯತೀಶರವರ ಬಾರ್ ನಲ್ಲಿ ನೀರು ಕುಡಿಯಲು ಹೋದಾಗ ಅಲ್ಲೇ ಇದ್ದ ದೀಪು, ಯಶವಂ,ತ ದಿಲೀಪ್ ಮತ್ತು ಕೃಷ್ಣರವರು ಕ್ಲುಲ್ಲಕ ಕಾರಣಕ್ಕೆ ಲೋಕೇಶರವರ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.