Crime News

ಕೊಲೆ ಪ್ರಕರಣ

          ಮಡಿಕೇರಿ ತಾಲೋಕಿನ ಕುಂಬಳದಾಳು ಗ್ರಾಮದ ನಿವಾಸಿ 74 ವರ್ಷ ಪ್ರಾಯದ ರಾಧರವರು ಮನೆಯಲ್ಲಿ ಒಬ್ಬರೇ ಇರುವಾಗ ಯಾರೋ ದುಷ್ಕರ್ಮಿಗಳ ದಿನಾಂಕ 21-02-2019 ರ ರಾತ್ರಿ ಸಮಯದಲ್ಲಿ ಮನೆಗೆ ನುಗ್ಗಿ ರಾಧರವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

        ಮಡಿಕೇರಿ ನಗರದ ವಿನಾಯಕ ಬಡಾವಣೆಯ ನಿವಾಸಿ ಸುನಿಲ್ ರವರು ಚರ್ಚ್ ಕಾಂಪ್ಲೆಕ್ಸ್ ನಲ್ಲಿರುವ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯಪಾನ ಮಾಡುವ ಅಬ್ಯಾಸವಿದ್ದು, ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 23-02-2019 ರಂದು ಬೆಳಿಗ್ಗೆ ಅಂಗಡಿಯ ಒಳಗೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಾರು ಡಿಕ್ಕಿ ವ್ಯಕ್ತಿಯ ದುರ್ಮರಣ

           ದಿನಾಂಕ 23-02-2019 ರಂದು ವಿರಾಜಪೇಟೆ ತಾಲೋಕಿನ ಮೈತಾಡಿ ಗ್ರಾಮದ ನಿವಾಸಿಯಾದ ರವಿ @ ರಷ್ಮಾರವರು ಬೆಳಿಗ್ಗೆ ವಾಯು ವಿಹಾರಕ್ಕೆಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಲ್ಲಮಟ್ಟಿ ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಹಿಂದಿನಿಂದ ಬಂದ ಕಾರನ್ನು ಅದರ ಚಾಲಕ ರಮೇಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ರವಿ @ ರಷ್ಮಾರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣ

           ಮಡಿಕೇರಿ ತಾಲೋಕಿನ ಕುಂಜಿಲ ಗ್ರಾಮದಲ್ಲಿ ವಾಸವಿರುವ ಜೇನುಕುರುಬರ ಸುಮತಿ ಮತ್ತು ತಮ್ಮಯ್ಯನವರು ಸೇರಿ ದಿನಾಂಕ 20-02-2019 ರಂದು ಸುಮತಿಯ ಗಂಡ ಲಿಂಗನೊಂದಿಗೆ ಜಗಳ ಮಾಡಿ ಕೊಲೆ ಮಾಡಿರುವುದಾಗಿ ರಾಜಮಣಿಯವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.