Crime News

ಹಳೇ ವೈಷಮ್ಯ ವ್ಯಕ್ತಿಯ ಕೊಲೆಗೆ ಯತ್ನ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗೋಡ್ಲು ಗ್ರಾಮದ ನಿವಾಸಿ ಪಿ.ಸಿ. ದಕ್ಷತ್ ಕುಮಾರ್‍ ಹಾಗು ಅವರ ದೊಡ್ಡಪ್ಪ ವೆಂಕಟೇಶ್ ನಡುವೆ ಆಸ್ತಿ ವಿಚಾರದಲ್ಲಿ ವೈಮನಸ್ಸು ಇದ್ದು ಇದೇ ವಿಚಾರದಲ್ಲಿ ಆಗಿಂದಾಗ್ಗೆ ಜಗಳ ವಾಗುತ್ತಿದ್ದು ದಿನಾಂಕ 23-2-2019 ರಂದು ಪಿ.ಸಿ. ರಕ್ಷತ್ ರವರ ದೊಡ್ಡಪ್ಪನವರ ಮಗಳು ನೀರಿನ ವಿಚಾರದಲ್ಲಿ ಜಗಳ ಮಾಡಿದ್ದು ನಂತರ ಪಿ.ಸಿ. ದಕ್ಷತ್ ರವರು ತನ್ನ ಕಾರಿನಲ್ಲಿ ಮಡಿಕೇರಿಗೆ ಬಂದು ವಾಪಾಸ್ಸು ಮನೆಯ ಕಡೆಗೆ ಹೋಗುತ್ತಿದ್ದಾಗ ಕಗ್ಗೋಡ್ಲು ಗ್ರಾಮದಲ್ಲಿ ಕಾರನ್ನು ತಡೆದು ನಿಲ್ಲಿಸಿದ ಪ್ರದೀಪ ಹಾಗು ವೆಂಕಟೇಶನವರು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದು ಪರಿಣಾಮವಾಗಿ ಪಿ.ಸಿ. ದಕ್ಷತ್ ರವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗದ ವಿಚಾರದಲ್ಲಿ ಜಗಳ ವ್ಯಕ್ತಿ ಮೇಲೆ ಹಲ್ಲೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹಾಕತ್ತೂರು ಗ್ರಾಮದ ನಿವಾಸಿ ಪಿ.ಸಿ. ವೆಂಕಟೇಶ್ ಎಂಬವರ ಮೇಲೆ ಅವರ ಸಹೋದರನ ಮಗ ದೀಪು @ ದಕ್ಷತ್ ಎಂಬವರು ದಿನಾಂಕ 23-2-2019 ರಂದು ಜಾಗದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ:

ಸಿದ್ದಾಪುರ ಠಾಣಾ ಸರಹದ್ದಿನ ಹಾಲುಗುಂದ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಸುನಿತಾ ಎಂಬವರ ಗಂಡ ತೆಲಪಂಡ ಸುಬ್ರಮಣಿ ಎಂಬವರು ದಿನಾಂಕ 18-2-2019 ರಂದು ಮನೆಯಿಂದ ಹೊರಗೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ತವ್ಯಕ್ಕೆ ಅಡ್ಡಿ ಕೊಲೆಗೆ ಯತ್ನ:

ಭಾಗಮಂಡಲ ಪೊಲೀಸ್ ಠಾಣಾ ಸಿಬ್ಬಂದಿಗಳು ದಿನಾಂಕ 24-2-2019 ರಂದು ಸಂಜೆ 7-00ಗಂಟೆ ಸಮಯದಲ್ಲಿ ಭಾಗಮಂಡಲ ನಗರದಲ್ಲಿ ಕರ್ತವ್ಯದಲ್ಲಿದ್ದಾಗ ಸಣ್ಣಪುಲಿಕೋಟು ಗ್ರಾಮದಲ್ಲಿರುವ ಕಡೋಡಿ ಮಾಹಾ ವಿಷ್ಣು ದೇವಾಲಯದ ಸಮೀಪ  ಸಣ್ಣಪುಲಿಕೋಟು ಗ್ರಾಮದ ನಿವಾಸಿಗಳಾದ ಕುಯ್ಯಮುಡಿ ಹರೀಶ್ ಹಾಗು ಕುಯ್ಯಮುಡಿ ಸುರೇಶ್ ಎಂಬವರು ಅಕ್ರಮವಾಗಿ ಪಿಕ್‍ಅಪ್ ವಾಹನದಲ್ಲಿ ಮರಳನ್ನು ತುಂಬಿಸಿ ಸಾಗಾಟ ಮಾಡಲು ಹೋರಟಿದ್ದು ಅದನ್ನು ತಡೆಯಲು ಹೋದ ಸಿಬ್ಬಂದಿಗಳಾದ ರಮೇಶ ಹಾಗು ಯಲ್ಲಾಲಿಂಗ ಶೆಗುಣಸಿ ರವರುಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಅವರ ಮೇಲೆ ಪಿಕ್‍ಅಪ್‍ ವಾಹನವನ್ನು ಹರಿಸಿ ಕೊಲೆಗೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಪಿಕ್‍ ಅಪ್‍ ವಾಹನ ಡಿಕ್ಕಿ:

ಕುಶಾಲನಗರ ಪಟ್ಟಣ ಠಾಣೆ ಸರಹದ್ದಿನ ಮುಳ್ಳುಸೋಗೆ ಗ್ರಾಮದ ನಿವಾಸಿ ಸುರೇಶ್ ಎಂಬವರು ತಮ್ಮ ಬಾಪ್ತು ಮೋಟಾರು ಸೈಕಲಿನಲ್ಲಿ ಕೊಪ್ಪದ ಕಡೆಗೆ  ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಪಿಕ್‍ಅಪ್ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.