Crime News

ರಸ್ತೆ ಅಪಘಾತ

ದಿನಾಂಕ 25/02/2019 ರಂದು ನಾಪೋಕ್ಲಿನ ಶ್ರೀ ರಾಮ ಟ್ರಸ್ಟ್ ಶಾಲೆಯ ಶಾಲಾ ಬಸ್ಸಿನ ಚಾಲಕ ಬಿ.ಟಿ.ಪೊನ್ನಪ್ಪರವರು ಕುಂಜಿಲ ಗ್ರಾಮದಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ನಾಲಡಿ ಗ್ರಾಮಕ್ಕೆ ಹೋಗುತ್ತಿರುವಾಗ ಗ್ರಾಮದ ರಸ್ತೆಯಲ್ಲಿ ದರ್ಶನ್ ಎಂಬವರು ಅವರ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸಿಗೆ ಹಾನಿಯುಂಟಾಗಿದ್ದು ಬೈಕ್ ಚಾಲಕ ದರ್ಶನ್‌ಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ ದಿನಾಂಕ 23/02/2019ರಂದು ನಾಪೋಕ್ಲು ಬಳಿಯ ಕುಂಜಿಲ ಗ್ರಾಮದ ನಿವಾಸಿ ಎಸ್.ಗಿರೀಶ್‌ ಎಂಬವರು ಪಾಲೇಕಂಡ ಜೀವನ್ ಎಂಬವರ ತೋಟದಲ್ಲಿ ನಿದ್ರೆ ಮಾಡಿಕೊಂಡಿರುವಾಗ ಅಲ್ಲಿಗೆ ಬಂದ ಪಾಲೇಕಂಡ ಜೀವನ್‌ರವರು ಗಿರೀಶ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ವ್ಯಕ್ತಿ ಸಾವು

ದಿನಾಂಕ 24/02/2019ರಂದು ಮಡಿಕೇರಿಯ ರೇಸ್‌ಕೋರ್ಸ್‌ ರಸ್ತೆಯ ನಿವಾಸಿ ಕೆ.ಎಂ.ತಿಮ್ಮಯ್ಯ ಎಂಬವರು ಪಾರಾಣೆ ಬಳಿಯ ಬಾವಲಿ ಗ್ರಾಮದ ಅವರ ತೋಟದ ಕೆರೆಯಲ್ಲಿ ಕಾಲು ಜಾರಿ ಬಿದ್ದು ಆಕಸ್ಮಿಕವಾಗಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 24/02/2019ರಂದು ಪೊನ್ನಂಪೇಟೆ ಬಳಿಯ ಬೆಸಗೂರು ನಿವಾಸಿ ಹೆಚ್‌.ಟಿ.ಸುನಿಲ್ ಎಂಬವರ ಭಾವ ಅನೀಷ್‌ ಎಂಬವರು ರಾತ್ರಿ ಅವರ ಬೈಕಿನಲ್ಲಿ ಪೊನ್ನಂಪೇಟೆ ಕಡೆಗೆ ಹೋಗುತ್ತಿರುವಾಗ ಪೊನ್ನಂಪೇಟೆ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅನೀಷರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅನೀಷ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ಶ್ರೀಮಂಗಲ ಬಳಿಯ ಬಾಡಗರಕೇರಿ ಗ್ರಾಮದ ಪೋರಾಡ್ ನಿವಾಸಿ ಎ.ಎಸ್‌. ಗಣೇಶ್‌ ಎಂಬವರು ದಿನಾಂಕ 19/02/2019ರಂದು ಮೈಸೂರಿನ ಅಪೋಲೋ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಮರಳಿ ಬಂದಿರುವುದಿಲ್ಲವೆಂದು ಗಣೇಶ್‌ರವರ ಮಗ ಸುಬ್ಬಯ್ಯನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 25/02/2019ರಂದು ಶನಿವಾರಸಂತೆ ಬಳಿಯ  ಕ್ಯಾತೆ ನಿವಾಸಿ ಆಕಾಶ್‌ ಎಂಬವರು ಅವರ ಅಜ್ಜ ಮತ್ತು ಅಜ್ಜಿಯವರನ್ನು ನೋಡಿಕೊಂಡು ಬರಲು ಅವರೆದಾಳು ಬಳಿಯ ಹೆಮ್ಮನೆ ಗ್ರಾಮಕ್ಕೆ ಹೋಗಿದ್ದು ರಾತ್ರಿ ಅಜ್ಜ ದೊಡ್ಡಯ್ಯನವರು ಮದ್ಯಪಾನ ಮಾಡಿ ಮತ್ತರಾಗಿ ಅಜ್ಜಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದು ಆಕಾಶ್‌ರವರು ಅದನ್ನು ತಡೆಯಲು ಹೋದಾಗ ಅಜ್ಜ ದೊಡ್ಡಯ್ಯ ಚಾಕುವಿನಿಂದ ಆಕಾಶ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 24/02/2019ರಂದು ಶನಿವಾರಸಂತೆ ಬಳಿಯ ಹೊಸಗುತ್ತಿ ನಿವಾಸಿ ಚಂದ್ರಪ್ಪ ಎಂಬವರು ಮನೆಯ ಮುಂದೆ ನಿಂತುಕೊಂಡಿರುವಾಗ ಅಲ್ಲಿಗೆ ಬಂದ ಅದೇ ಗ್ರಾಮದ ನಿವಾಸಿ ಬಸವರಾಜು ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಚಂದ್ರಪ್ಪನವರಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 24/02/2019ರಂದು ಶನಿವಾರಸಂತೆ ಬಳಿಯ ದುಂಡಳ್ಳಿ ನಿವಾಸಿ ಧರ್ಮಪ್ಪ ಎಂಬವರು ಮನೆಯ ಬಳಿ ಇರುವ ಅಂಗಡಿಯಿಂದ ದಿನಸಿ ಸಾಮಾನುಗಳನ್ನು ತೆಗೆದುಕೊಂಡು ಮನೆಗೆ ಹೋಗುತ್ತಿರುವಾಗ ಹಿಂದಿನಿಂದ ಯಾವುದೋ ಒಂದು ಗೂಡ್ಸ್ ರಿಕ್ಷಾವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಧರ್ಮಪ್ಪನವರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ಧರ್ಮಪ್ಪನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ ಹಲ್ಲೆ ಪ್ರಕರಣ

ದಿನಾಂಕ 24/02/2019ರಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಮಹೇಶ್‌ ಎಂಬವರು ಪ್ರಕರಣವೊಂದರ ಆರೋಪಿಗಳಾದ ಸ್ವಾಮಿ ಮತ್ತು ಸುರೇಶ್‌ ಎಂಬವರನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಠಾಣೆಯ ಮುಂದಿನ ರಸ್ತೆಯಲ್ಲಿ ಸ್ವಾಮಿ ಮತ್ತು ಸುರೇಶ್‌ ಇಬ್ಬರೂ ಸೇರಿಕೊಂಡು ಪೊಲೀಶ್‌ ಸಿಬ್ಬಂದಿ ಮಹೇಶ್‌ರವರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.