Crime News

ಕಳವು ಪ್ರಕರಣ

               ಸೋಮವಾರಪೇಟೆ ನಗರದ ಚೌಡ್ಲುವಿನ ನಿವಾಸಿಯಾದ ಅರುಣ್ ಕುಮಾರ್ ಎಂಬುವವರ ಜೂನಿಯರ್ ಕಾಲೇಜು ಬಳಿ ಇರುವ ಕಿರಾಣಿ ಅಂಗಡಿಗೆ ದಿನಾಂಕ 25-02-2019 ರ ರಾತ್ರಿ ಯಾರೋ ಕಳ್ಳರು ನುಗ್ಗಿ 7 ಸಾವಿರ ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರದಿಂದ ಬಿದ್ದು ವ್ಯಕ್ತಿಯ ಸಾವು

            ಮಡಿಕೇರಿ ತಾಲೋಕಿನ ಗಾಳಿಬೀಡು ಗ್ರಾಮದ ವಣಚಲುವಿನ ನಿವಾಸಿಯಾದ ನಂಜಪ್ಪ ಎಂಬುವವರು ದಿನಾಂಕ 25-02-2019 ರಂದು ಮನೆಯ ಪಕ್ಕ ಮರಕ್ಕೆ ಹತ್ತಿ ಕೊಂಬೆ ಕಡಿಯುತ್ತಿರುವಾಗ ಮರದಿಂದ ಬಿದ್ದು ಗಾಯಗೊಂಡವರು ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.