Crime News

ಅಕ್ರಮ ಲಾಟರಿ ಮಾರಾಟ ಪತ್ತೆ:

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಸರಕಾರಿ ಆಸ್ಪತ್ರೆಯ ಹಿಂದೆ ವ್ಯಕ್ತಿಯೋರ್ವ ಕೇರಳಾ ರಾಜ್ಯದ ಲಾಟರಿ ಟಿಕೇಟುಗಳನ್ನು ಅಕ್ರಮವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದರ ಬಗ್ಗೆ ಮಾಹಿತಿ ಪಡೆದ ಗೋಣಿಕೊಪ್ಪ ಠಾಣಾ ಎಎಸ್‍ಐ ಎಂ.ಕೆ. ಮೇದಪ್ಪ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಗೋಣಿಕೊಪ್ಪ ನಗರದ ನಿವಾಸಿ ಎಂ.ಜೆ. ಸಂತೋಷ್ ಎಂಬವರನ್ನು ವಶಕ್ಕೆ ಪಡೆದು ಅವರಿಂದ 86 ಲಾಟರಿ ಟಿಕೇಟ್‍ಗಳನ್ನು ಹಾಗು ಲಾಟರಿ ಟಿಕೇಟು ಮಾರಾಟ ಮಾಡಿ ಇಟ್ಟುಕೊಂಡಿದ್ದ ನಗದು ಹಣ ರೂ. 3,200/- ಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಕುಟ್ಟ ಠಾಣಾ ಸರಹದ್ದಿನ ಕೋತೂರು ಗ್ರಾಮದ ನಿವಾಸಿ  ಪಣಿ ಎರವರ ಶ್ರೀಮತಿ ಚಿಮ್ಮಿ ಎಂಬವರ ಪತಿ ರಾಜು ಎಂಬವರು ದಿನಾಂಕ 26-2-2019 ರಂದು ತಾನು ವಾಸವಾಗಿರುವ ಲೈನು ಮನೆಯ ಪಕ್ಕದಲ್ಲಿರುವ ಸೌದೆ ಕೊಟ್ಟಿಗೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿದ ವ್ಯಕ್ತಿ ಸಾವು:

ಸೋಮವಾರಪೇಟೆ ಠಾಣಾ ಸರಹದ್ದಿನ ಮೂವತ್ತೊಕ್ಲು ಗ್ರಾಮದ ನಿವಾಸಿ ಟಿ.ಪಿ. ಪೊನ್ನಪ್ಪ ಎಂಬವರ ತಂದೆ ಪೂವಯ್ಯ ಎಂಬವರು ದಿನಾಂಕ 23-2-2019 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದರಿಯವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಸದರಿಯವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27-2-2019 ರಂದು ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಬೈಕಿಗೆ ಕಾರು ಡಿಕ್ಕಿ”

ಹಾಸನ ಜಿಲ್ಲೆಯ ತಡಕಲ್ಲು ಗ್ರಾಮದ ನಿವಾಸಿ ಶಿವಕುಮಾರ್ ಎಂಬವರು ದಿನಾಂಕ 27-2-2019 ರಂದು ಶನಿವಾರಸಂತೆ ನಗರದಿಂದ ಸಕಲೇಶಪುರದ ಕಡೆಗೆ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ಶನಿವಾರಸಂತೆ ಸಮೀಪದ ಬಾಪುಜಿ ಶಾಲೆಯ ಬಳಿ ಎದುರುಗಡೆಯಿಂದ ಕಾರೊಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿ ಸಂಚಾರ ಮಾಡುತ್ತಿದ್ದ ಶಿವಕುಮಾರ್‍ ರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ:

ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದ ನಿವಾಸಿ ಹೊನ್ನಮ್ಮ ಎಂಬವರು ದಿನಾಂಕ 26-2-2019 ರಂದು 7ನೇ ಹೊಸಕೋಟೆಯಲ್ಲಿರುವ ಲಾಯಲ್ ಕೂರ್ಗ್  ಸ್ಪೈಸೆಸ್ ಅಂಗಡಿಯ ಮುಂದುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಮಡಿಕೇರಿ ಕಡೆಯಿಂದ ಬಂದ ಮೋಟಾರ್ ಸೈಕಲ್ ಕೆಎ-12-ಎಸ್‍-3565 ನ್ನು ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಹೊನ್ನಮ್ಮನವರು ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಅಪಘಾತದ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.