Crime News

ಹಲ್ಲೆ ಪ್ರಕರಣ

ದಿನಾಂಕ 27/02/2019ರಂದು ಮಡಿಕೇರಿ ಬಳಿಯ ಆವಂದೂರು ನಿವಾಸಿ ಪಿ.ಎಂ.ಉಲ್ಲಾಸ ಎಂಬವರು ಅವರ ಸೊಸೆ ಸವಿತಾರೊಂದಿಗೆ ಅವರ ಕೆರೆಯ ಬಳಿ ಹೋಗಿದ್ದಾಗ ಅಲ್ಲಿ ಹೊಸೂರು ಕೇಶವ @ ಗಿರಿ ಎಂಬವರು ಫೋಟೋ ತೆಗೆಯುತ್ತಿದ್ದು ಅದನ್ನು ಉಲ್ಲಾಸರವರು ವಿಚಾರಿಸಿದ ಕಾರಣಕ್ಕೆ ಹೊಸೂರು ಕೇಶವರವರು ಉಲ್ಲಾಸರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ

ದಿನಾಂಕ 26/02/2019ರಂದು ನಾಪೋಕ್ಲು ಬಳಿಯ ಪಾಲೂರು ನಿವಾಸಿ ಸೂದನ ಗಣಪತಿ ಎಂಬವರು ರಾತ್ರಿ ಮನೆಯಲ್ಲಿ ಮಲಗಿದ್ದು ಬೆಳಿಗ್ಗೆ ಎದ್ದು ನೋಡಿದಾಗ ಎಲ್ಲೂ ಕಾಣದೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಪೊನ್ನಂಪೇಟೆ ಬಳಿಯ ನಿಟ್ಟೂರು ಬಾಳೆಲೆ ನಿವಾಸಿ ಮಲ್ಲೇಂಗಡ ಜಿ.ವಿನೇಶ್ ಎಂಬವರಿಗೆ ಸೇರಿದ ಆಸ್ತಿಯನ್ನು ಕೆ.ಜಿ.ಕುಟ್ಟಪ್ಪ ಮತ್ತು ಪಿ.ಕೆ.ಪೊನ್ನಪ್ಪ  ಎಂಬವರು ವಿನೇಶ್‌ರವರ ಗಮನಕ್ಕೆ ಬಾರದಂತೆ ಮಲ್ಲೇಂಗಡ ಸುಬ್ರಮಣಿ ಎಂಬವರ ಮೂಲಕ ಮಾಪಂಗಡ ಶೀಲಾ ಎಂಬವರಿಗೆ ಮಾರಾಟ ಮಾಡಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 27/02/2019ರಂದು ಕಾನೂರು ನಿವಾಸಿ ಪ್ರವೀಣ ಎಂಬವರು ಅವರ ಮಾವನ ಮಗ ವೇದ ಎಂಬವರೊಡನೆ ಬೈಕಿನಲ್ಲಿ ಕಾನೂರಿನಿಂದ ಕೋತೂರಿಗೆ ಹೋಗುತ್ತಿರುವಾಗ ಕೋತೂರು ಗ್ರಾಮದ ಮನ್ನಕಮನೆ ಕಿರಣ ಎಂಬವರ ಮನೆಯ ಮುಂದೆ ಮನ್ನಕಮನೆ ನಂದ ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವೇದರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ವೇದ ಹಾಗೂ ಪ್ರವೀಣರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 28/02/2019ರಂದು ಸೋಮವರಪೇಟೆ ಬಳಿಯ ಚಿಕ್ಕತೋಳೂರು ನಿವಾಸಿ ಸುಬ್ಬಯ್ಯ ಸಿ.ಇ. ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಅದೇ ಗ್ರಾಮದ ಮುತ್ತಣ್ಣ, ರಾಶಿಕ್ ಮತ್ತು ಈರಪ್ಪ ಎಂಬವರು ದಾರಿ ತಡೆದು ರಸ್ತೆ ವಿಚಾರಕ್ಕೆ ಜಗಳವಾಡಿ ಸುಬ್ಬಯ್ಯನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದುರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 27/02/2019ರಂದು ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿ ನಿವಾಸಿ ಮಹೇಂದ್ರ ಎಂಬವರು ಅವರ ಪತ್ನಿ ಪುನೀತಾ ಎಂಬವರೊಂದಿಗೆ ಸುಂಟಿಕೊಪ್ಪದಿಂದ ಕೊಡಗರಹಳ್ಳಿಯ ಮನೆಗೆ ಹೋಗುತ್ತಿರುವಾಗ ಕೊಡಗರಹಳ್ಳಿಯ ನೆಹರು ಸರ್ಕಲ್ ಬಳಿ ಕುಶಾಲನಗರ ಕಡೆಯಿಂದ ಮಡಿಕೇರಿಯ ಕಡಗದಾಳು ನಿವಾಸಿ ಚೇತನ್ ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಹೇಂದ್ರರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಮಹೇಂದ್ರವರ ಪತ್ನಿ ಪುನೀತಾರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಹಲ್ಲೆ ಪ್ರಕರಣ ದಿನಾಂಕ 28/02/2019ರಂದು ವಿರಾಜಪೇಟೆ ಬಳಿಯ ಕೊಡವ ಸಮಾಜ ನಿವಾಸಿ ಎಸ್‌.ಎಂ.ಮಂಜುನಾಥ ಎಂಬವರು ವಿರಾಝಪೇಟೆ ನಗರದ ಮೂರ್ನಾಡು ರಸ್ತೆಯಿಂದ ದೊಡ್ಡಟ್ಟಿ ಚೌಕಿ ಕಡೆಗೆ ಹೋಗುವ ರಸ್ತೆಯಲ್ಲಿ ನಿಂತಿರುವಾಗ ಅಲ್ಲಿಗೆ ಬಂದ ಹರೀಶ್ ಎಂಬಾತನು ವಿನಾ ಕಾರಣ ಮಂಜುನಾಥರವರೊಂದಿಗೆ ಜಗಳವಾಡಿ ಬಾಡಲಿಯಿಂದ ಹೊಡೆದು ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ಕೊಲೆ ಪ್ರಕರಣ ಆರೋಪಿಗಳ ಬಂಧನ

ಕೊಡಗು ಜಿಲ್ಲೆಯ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಳದಾಳು ಗ್ರಾಮದಲ್ಲಿ ನಡೆದ ಒಂಟಿ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ದಿನಾಂಕ: 21-02-2019 ರಂದು ಕುಂಬಳದಾಳು ಗ್ರಾಮದಲ್ಲಿ ಕರನೇನ ರಾಧ ಎಂಬ 72 ವರ್ಷದ ವೃದ್ಧೆಯನ್ನು ಯಾರೋ ದುಷ್ಕಮರ್ಿಗಳು ಕೊಲೆ ಮಾಡಿ ಆಕೆಯ ಸುಮಾರು 3,00,000 ರೂ ಬೆಲೆಬಾಳುವ ಚಿನ್ನದ ಒಡವೆಗಳನ್ನು ಲೂಟಿ ಮಾಡಿದ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು. ಪ್ರಕರಣವನ್ನು ಪತ್ತೆ ಮಾಡುವ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಮಡಿಕೇರಿ ಉಪಾಧೀಕ್ಷಕರು ರವರ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರು ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರು ರವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಿ ಅವರಿಗೆ ಸೂಕ್ತ ಮಾರ್ಗದರ್ಶವನ್ನು ನೀಡಲಾಗಿತ್ತು.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿದ ಅಪರಾಧ ಪತ್ತೆ ದಳದ ತಂಡ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರು ರವರ ತಂಡ ಈ ಪ್ರಕರಣದ ಪ್ರಮುಖ ಆರೋಪಿ ಸುಬ್ರಮಣಿ, ಮಧು ಹಾಗೂ ಕಾವ್ಯಳನ್ನು ವಶಕ್ಕೆ ಪಡೆದಿರುತ್ತಾರೆ. ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಲಾಗಿ ಆರೋಪಿ ಸುಬ್ರಮಣಿಗಿದ್ದ ಹಣದ ಮುಗ್ಗಟ್ಟೇ ಈ ಕೃತ್ಯವೆಸಗಲು ಕಾರಣ ಎಂದು ತಿಳಿದುಬಂದಿರುತ್ತದೆ.

ಮೃತೆ ಕರನೇನ ರಾಧ ರವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸುಬ್ರಮಣಿ, ರಾಧರವರ ಮನೆಯ ಆಗುಹೋಗುಗಳನ್ನು ಗಮನಿಸಿ ತನ್ನ ಸ್ನೇಹಿತ ಮಧುವಿನೊಂದಿಗೆ ಸೇರಿ ದಿನಾಂಕ  21-02-2019 ರಂದು ಸಂಜೆ ರಾಧರವರು ಮನೆಯಲ್ಲಿ ಒಬ್ಬರೇ ಇರುವುದನ್ನು ಖಾತ್ರಿ ಪಡಿಸಿಕೊಂಡು ಮನೆಯನ್ನು ಪ್ರವೇಶಿಸಿ ಅಡುಗೆ ಮನೆಯಲ್ಲಿದ್ದ ರಾಧರವರ ಹಿಂದಿನಿಂದ ಹೋಗಿ ಕತ್ತು ಹಿಸುಕಿ ಕೊಲೆ ಮಾಡಿ ಯಾರಿಗೂ ಅನುಮಾನ ಬಾರದ ರೀತಿಯನ್ನು ಆಕೆಯನ್ನು ಎತ್ತಿ ಹಾಸಿಗೆಯ ಮೇಲೆ ಮಲಗಿಸಿ ಗಾಡ್ರೇಜ್ ಬೀರುವಿನಲ್ಲಿಟ್ಟಿದ್ದ ಚಿನ್ನದ ಒಡವೆಗಳನ್ನು ಕಳವು ಮಾಡಿ ಪರಾರಿಯಾಗಿ ಸುಬ್ರಮಣಿಯ ಅಕ್ಕ ಕಾವ್ಯಳ ಸಹಾಯದಿಂದ ಸದರಿ ಒಡವೆಗಳನ್ನು ಮಾರಾಟ ಮಾಡಿದ್ದರು.

ದಸ್ತಗಿರಿ ಮಾಡಲಾದ ಆರೋಪಿಗಳ ವಿವರ ಈ ಕೆಳಕಂಡಂತಿದೆ.

1.    ಸುಬ್ರಮಣಿ @ ಮಣಿ ತಂದೆ ರಾಜ, 24 ವರ್ಷ, ಕೂಲಿ ಕೆಲಸ, ಗೊಂದಿಬಸವನಹಳ್ಳಿ, ಕುಶಾಲನಗರ.

2.    ಪಾಕಮುಕ್ಕಾಟಿ ಮದನ್ @ ಮಧು ತಂದೆ ಪಾಪಣ್ಣ, 20 ವರ್ಷ, ಕೂಲಿ ಕೆಲಸ, ಮುಳ್ಳುಸೋಗೆ, ಕುಶಾಲನಗರ.

3.    ಕಾವ್ಯ @ ಶ್ವೇತ ಗಂಡ ಹರೀಶ, ಗೊಂದಿಬಸವನಹಳ್ಳಿ, ಕುಶಾಲನಗರ.

ಈ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಸುಮನ್.ಡಿ. ಪೆನ್ನೇಕರ್ ಐಪಿಎಸ್ ಹಾಗೂ ಮಡಿಕೇರಿ ಉಪಾಧೀಕ್ಷರಾದ ಕೆ.ಎಸ್. ಸುಂದರ್ ರಾಜ್ ರವರ ಮಾರ್ಗದರ್ಶನದಲ್ಲಿ, ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಎಂ. ಮಹೇಶ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ. ಸಿದ್ದಯ್ಯ, ಮಡಿಕೇರಿ ನಗರ ಪೊಲೀಸ್ ಠಾಣಾ ಠಾಣಾಧಿಕಾರಿ ಷಣ್ಮುಗಂ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಠಾಣಾಧಿಕಾರಿ ವಿ. ಚೇತನ್, ನಾಪೋಕ್ಲು ಪೊಲೀಸ್ ಠಾಣಾ ಠಾಣಾಧಿಕಾರಿ ಎಂ. ನಂಜುಂಡಸ್ವಾಮಿ ಜಿಲ್ಲಾ ಅಪರಾಧ ಪತ್ತೆದಳದ ಎಎಸ್ಐ ಕೆ.ವೈ. ಹಮೀದ್, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್ ಕುಮಾರ್, ಕೆ.ಆರ್. ವಸಂತ, ವಿ.ಜಿ.ವೆಂಕಟೇಶ್, ಮಡಿಕೇರಿ ನಗರ ಪೊಲೀಸ್ ಠಾಣಾ ಸಿಬ್ಬಂದಿಯವರಾದ ದಿನೇಶ್ ಹಾಗೂ ಮಧು, ಫ್ರಾನ್ಸಿಸ್ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಇಬ್ರಾಹಿಂ, ಶಿವರಾಜು,  ಸಿಡಿಆರ್ ಸೆಲ್‍ನ ರಾಜೇಶ್,  ಗಿರೀಶ್ ಚಾಲಕರಾದ ಕೆ.ಎಸ್. ಶಶಿಕುಮಾರ್ ಅರುಣ್, ಸುನಿಲ್‍ರವರುಗಳು ಭೇದಿಸಿರುತ್ತಾರೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ ಎರಡೂ ತಂಡದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುವುದಾಗಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.