Crime News

ವಿದ್ಯುತ್ ತಂತಿಗೆ ಏಣಿ ತಾಗಿ ವ್ಯಕ್ತಿಯ ಸಾವು

            ದಿನಾಂಕ 01-03-2019 ರಂದು ಸುರೇಶ್ ಎಂಬುವವರು ಹೊಸೂರು ಗ್ರಾಮದ ತಮ್ಮಯ್ಯನವರ ಕಾಫಿ ತೋಟದಲ್ಲಿ ಅಲ್ಯುಮಿನಿಯಂ ಏಣಿಯನ್ನು ಉಪಯೋಗಿಸಿ ಮೆಣಸನ್ನು ಕುಯ್ಯುತ್ತಿರುವಾಗ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ಏಣಿ ತಾಗಿ ವಿದ್ಯುತ್ ಸ್ಪರ್ಷಗೊಂಡು ಸುರೇಶ  ಎಂಬ ಕಾರ್ಮಿಕ ಮೃತಪಟ್ಟಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಗಿಡ ಪತ್ತೆ

           ದಿನಾಂಕ 01-03-2019 ರಂದು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿದ್ದಯ್ಯನವರಿಗೆ ಬೆಟ್ಟತ್ತೂರು ಗ್ರಾಮದ ಧರ್ಮಪ್ಪ ಎಂಬುವವರು ಗಾಂಜಾ ಗಿಡಗಳನ್ನು ಬೆಳೆಸಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಲಾಗಿ ಧರ್ಮಪ್ಪನವರು ಗದ್ದೆಯಲ್ಲಿ ತರಕಾರಿ ಗಿಡಗಳ ನಡುವೆ ಅಕ್ರಮವಾಗಿ ಮೂರು ಗಾಂಜಾಗಿಡಗಳನ್ನು ಬೆಳೆಸಿರುವುದು ಕಂಡು ಬಂದಿದ್ದು, ಧರ್ಮಪ್ಪನವರನ್ನು ವಶಕ್ಕೆ ಪಡೆದುಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬೈಕುಗಳ ಡಿಕ್ಕಿ

             ದಿನಾಂಕ 10-03-2019 ರಂದು ಕುಶಾಲನಗರದ ಆನೆ ಕ್ಯಾಂಪಿನಲ್ಲಿ ಮಾವುತನಾಗಿ ಕೆಲಸ ಮಾಡುತ್ತಿರುವ ಹೊಸಪಟ್ಟಣದ ನಿವಾಸಿ ಪುಟ್ಟ ಎಂಬುವವರು ಮೋಟಾರು ಸೈಕಲಿನಲ್ಲಿ ಬಸವನಹಳ್ಳಿಯಿಂದ ಆನೆ ಕ್ಯಾಂಪ್ ಗೆ ಕೆಲಸಕ್ಕೆ ಹೋಗುತ್ತಿರುವಾಗ ಕುಶಾಲನಗರದಿಂದ ಬಂದ ಮೋಟಾರು ಸೈಕಲನ್ನು ಅದರ ಸವಾರ ಶಹನ್ ವಾಜ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಪುಟ್ಟ ಹಾಗೂ ಶಹನ್ ವಾಜ್ ರವರಿಗೆ ಗಾಯವಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

            ಕೇರಳ ರಾಜ್ಯದ ಕೊಟ್ಟಾಯಂ ನ ನಿವಾಸಿಯಾದ ಚಾಕೋ ಎಂಬುವವರು ಇತರರೊಂದಿಗೆ ಗರ್ವಾಲೆಯ ಮೋಂಟ್ರೋಸ್ ಎಸ್ಟೇಟ್ ನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದು, ತಾಯಿ ಹಾಗೂ ತಮ್ಮನಿಗೆ ಆರೋಗ್ಯ ಸರಿ ಇಲ್ಲದೇ ಇದ್ದ ವಿಚಾರದಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗುಂಡು ಹೊಡೆದುಕೊಂಡು ವ್ಯಕ್ತಿಯ ಆತ್ಮಹತ್ಯೆ

            ಕುಶಾಲನಗರದ ಬಸವೇಶ್ವರ ಬಡಾವಣೆಯ ನಿವಾಸಿ ಯೋಗೇಶ್ ಎಂಬುವವರು ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಮನನೊಂದು ಮನೆಯಲ್ಲಿ ಬಂದೂಕಿನಿಂದ ಗುಂಡುಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.