Crime News

ಪ್ರಕರಣ ರಾಜಿ ವಿಚಾರದಲ್ಲಿ ಹಲ್ಲೆ:

ಮಡಿಕೇರಿ ನಗರದ ನಿವಾಸಿ ಅಶ್ರಫ್  ನವರು ನೌಫಲ್ ಎಂಬವರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿದ್ದು,  ಸದರಿ ಮೊಕದ್ದಮೆಯನ್ನು ವಾಪಾಸು ತೆಗೆಯುವ ವಿಚಾರದಲ್ಲಿ ದಿನಾಂಕ 22-2-2019 ರಂದು  ಮಡಿಕೇರಿ ನ್ಯಾಯಾಲಯದ ಬಳಿ ನೌಫಲ್ ರವರು ಜಗಳ ಮಾಡಿದ್ದು ಪ್ರಕರಣವನ್ನು ನ್ಯಾಯಾಲಯದಿಂದ ಹಿಂದೆಕ್ಕೆ  ಪಡೆಯಲು ಒಪ್ಪದೇ ಇದ್ದುರದಿಂದ  ಕಲೀಲ್ ಹಾಗು ಇತರರೊಂದಿಗೆ ಸೇರಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ಆತ್ಮಹತ್ಯೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೆ.ನಿಡುಗಣೆ ಗ್ರಾಮದ ನಿವಾಸಿ ಶ್ರೀಮತಿ ರೀಟಾ ಎಂಬವರ ತಮ್ಮ ಪೀಟರ್ ಎಂಬವರು ದಿನಾಂಕ 4-3-2019 ರಂದು ತಮ್ಮ ಮನೆಯಲ್ಲಿಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿ ವಿಚಾರದಲ್ಲಿ ಜಗಳ, ಹಲ್ಲೆ:

ನಾಪೋಕ್ಲು ಠಾಣಾ ಸರಹದ್ದಿನ  ಚೇಲವಾರ ಗ್ರಾಮದಲ್ಲಿ ಶ್ರೀಮತಿ ರೇಖಾ ಪೆಮ್ಮಯ್ಯ ಎಂಬವರು ತನ್ನ ಗಂಡ, ಮೈದುನ ಎಂ.ಎನ್. ಸುಬ್ಬಯ್ಯ,  ಸುಬ್ಬಯ್ಯನವರ ಪತ್ನಿ ಮೋನಿಕಾರವರುಗಳು ಒಂದೇ ಮನೆಯಲ್ಲಿ ವಾಸವಾಗಿದ್ದು ಕುಟುಂಬದ ಆಸ್ತಿ ವಿಚಾರದಲ್ಲಿ ಅವರುಗಳ ನಡುವೆ ಅಸಮದಾನವಿದ್ದು, ದಿನಾಂಕ 17-2-2019 ರಂದು ಶ್ರೀಮತಿ ರೇಖಾರವರ ಅಕ್ಕ ರೀಟಾ ಮತ್ತು ಆಕೆಯ ಗಂಡ ಸೈಯದ್ ಅಕ್ರಂ ರವರುಗಳು ಬಂದು ಶ್ರೀಮತಿ ರೇಖಾರವರನ್ನು ಅವಾಚ್ಯವಾಗಿ ನಿಂದಿಸಿ ಜಗಳ ಮಾಡಿದ್ದು ಇದೇ ಸಂದರ್ಭದಲ್ಲಿ ಮೈದುನ ಸುಬ್ಬಯ್ಯ ಕೋವಿಯನ್ನು ಗುರಿಯಾಗಿಟ್ಟು ಕೊಲೆಗೆ ಯತ್ನಿಸಿರುತ್ತಾರೆಂದು ಅಲ್ಲದೆ ಶ್ರೀಮತಿ ರೇಖಾ ಮತ್ತು ಆಕೆಯ ಗಂಡನ ಖಾಸಗಿ ಜೀವನದ ಬಗ್ಗೆ ರೇಕಾರ್ಡ್ ಮಾಡಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಯ ಮೇಲಿಂದ ಬಿದ್ದ ವ್ಯಕ್ತಿ ದುರ್ಮರಣ:

ಸೋಮವಾರಪೇಟೆ ತಾಲೋಕು, ಸುಂಟಿಕೊಪ್ಪದ ಮಧುರಮ್ಮ ಬಡಾವಣೆಯಲ್ಲಿ  ವಾಸವಾಗಿರುವ ಶ್ರೀಮತಿ ವಳ್ಳಿಯಮ್ಮ ಎಂಬವರ ಮಗ ಹರೀಶ ಎಂಬವರು ದಿನಾಂಕ 19-2-2019 ರಂದು ಕುಶಾಲನಗರದ ಸುಂದರನಗರದಲ್ಲಿರುವ ವಳ್ಳಿಯಮ್ಮನವರ ಅಕ್ಕನ ಮನೆಯ ಮೇಲೆ ಹತ್ತಿ ಹೆಂಚುಗಳನ್ನು ಸರಿಪಡಿಸುತ್ತಿದ್ದಾಗ ಆಕಸ್ಮಿಕವಾಗಿ ಕೆಳಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 3-3-2019ರಂದು ಸದರಿ ಹರೀಶ ಮೃತಪಟ್ಟಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಸ್ಪರ ಹಲ್ಲೆ ಪ್ರತ್ಯೇಕ ಪ್ರಕರಣಗಳು ದಾಖಲು:

ಸೋಮವಾರಪೇಟೆ ತಾಲೋಕು ಕುಶಾಲನಗರದ ಮುಳ್ಳಸೋಗೆ ನಿವಾಸಿ ಚರಣ್ ರಾಜ್ ಹಾಗು ನಂದೀಶ್ ಬೇಳೂರು ಬಸವನಳ್ಳಿ ಗ್ರಾಮ ರವರುಗಳು ಕಾರೆಕೊಪ್ಪ ಗ್ರಾಮಕ್ಕೆ ಕಾಫಿತೋಟಕ್ಕೆ ನೀರು ಹಾರಿಸುವ ಸಂಬಂಧ ಹೋಗಿದ್ದು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಜಗಳವಾಡಿ ಹಲ್ಲೆ ನಡೆಸಿಕೊಂಡಿದ್ದು ಈ ಸಂಬಂಧ ಸದರಿಯವರುಗಳು ನೀಡಿದ ಪ್ರತ್ಯೇಕ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ 2 ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.