Crime News

ಗಾಂಜಾ ಸೇವನೆ ಪ್ರಕರಣ ದಾಖಲು

           ದಿನಾಂಕ 03-03-2019 ರಂದು ಮಡಿಕೇರಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಷಣ್ಮುಗಂ ರವರು ನಗರದ ಕೋಟೆ ಹಿಂಭಾಗದ ಹಳೇ ಜೈಲು ಕ್ವಾಟ್ರಸ್ ಹತ್ತಿರ ಗಾಂಜಾ ಸೇವನೆ ಮಾಡಿದ್ದ ಮಡಿಕೇರಿ ನಗರದ ಲಷ್ಕರ್ ಮಸೀದಿ ಹತ್ತಿರ ವಾಸವಿರುವ ತಾಹಿರ್ ಎಂಬುವವರನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ವೈದ್ಯಾಧಿಕಾರಿಯವರು ತಾಹಿರ್ ರವರು  ಗಾಂಜಾ ಸೇವನೆ ಮಾಡಿರುವುದಾಗಿ ವರದಿ ನೀಡಿದ ಮೇರೆಗೆ ದಿನಾಂಕ 05-03-2019 ರಂದು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ವ್ಯಕ್ತಿಯ ಆತ್ಮಹತ್ಯೆ

          ಮಡಿಕೇರಿ ತಾಲೋಕಿನ ಸಂಪಾಜೆ ಗ್ರಾಮದ ಚಡಾವುವಿನ ನಿವಾಸಿಯಾದ ಬಾಲಕೃಷ್ಣ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದವರು ಮನನೊಂದು ದಿನಾಂಕ 05-03-2019 ರಂದು ಮನೆಯ ಹತ್ತಿರವಿರುವ ತೋಟದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಎಟಿಎಂ ಕಾರ್ಡ್ ನಿಂದ ಹಣ ಕಳ್ಳತನ

          ಮಡಿಕೇರಿ ತಾಲೋಕಿನ ಪೆರಾಜೆ ಗ್ರಾಮದ ನಿವಾಸಿಯಾದ ಲೋಕಯ್ಯ ಎಂಬುವವರ ಎಟಿಎಂ ಕಾರ್ಡ್ ನ್ನು ಅವರ ಮಗ ಗೌರೀಶ ಎಂಬುವವರು ದಿನಾಂಕ 02-03-2019 ರಂದು ಮನೆಯಿಂದ ಕಳವು ಮಾಡಿ 47,000 ರೂ ಹಣವನ್ನು ಡ್ರಾ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಅಕ್ರಮ ಲಾಟರಿ ಮಾರಾಟ ಪತ್ತೆ

            ದಿನಾಂಕ 05-03-2019 ರಂದು ವಿರಾಜಪೇಟೆ ತಾಲೋಕಿನ ಅರಪಟ್ಟು ಗ್ರಾಮದ ಕಡಂಗ ನಗರದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಗಳನ್ನು ಕೇರಳ ರಾಜ್ಯದ ಇರಿಟಿಯ ನಿವಾಸಿಯಾದ ಜಿಜೀಶ್ ಎಂಬುವವರು ಮಾರಾಟ ಮಾಡುತ್ತಿರುವಾಗ ವಿರಾಜಪೇಟೆ ಗ್ರಾಮಾಂತರ ಠಾಣೆಯ ಎಎಸ್ಐ ಚಂದ್ರಪ್ಪ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಪ್ರಕರಣ

           ದಿನಾಂಕ 05-03-2019 ರಂದು ವಿರಾಜಪೇಟೆ ತಾಲೋಕಿನ ಅರುವತ್ತೋಕ್ಲು ಗ್ರಾಮದ ಪಿ.ಹೆಚ್.ಎಸ್ ಕಾಲೋನಿಯಲ್ಲಿ ಸಾರ್ವಜನಿಕ ರಸ್ತೆಯ ಪಕ್ಕ ಕಾಲೋನಿಯ ನಿವಾಸಿಗಳಾದ, ಹನ್ ಶಾದ್, ಪ್ರಕಾಶ್, ಅನುಶ್, ದರ್ಶನ್, ಕಿರುಗೂರಿನವರಾದ ಸೋನ, ಜೀವನ್ ಮತ್ತು ರಾಜೇಶ್ ಇಸ್ಪೇಟು ಎಲೆಗಳಿಂದ ಜೂಜಾಟ ಆಡುತ್ತಿದ್ದವರನ್ನು ಗೋಣಿಕೊಪ್ಪ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಗಾಂಜಾ ಸೇವನೆ ಪ್ರಕರಣ ದಾಖಲು

           ದಿನಾಂಕ 05-03-2019 ರಂದು ಮಡಿಕೇರಿ ನಗರ ಪೊಲೀಸ್ ಠಾಣೆಯ ಎಎಸ್ಐ ರವರಾದ ರಮೇಶ್ ರವರು ಸಿಬ್ಬಂದಿಯವರೊಂದಿಗೆ ಗಸ್ತು ಮಾಡುತ್ತಿರುವಾಗ ಮಡಿಕೇರಿ ನಗರದಲ್ಲಿರುವ ಅಗ್ನಿ ಶಾಮಕ ಠಾಣೆಯ ಎದುರಿನ ಸ್ಮಶಾನ ಜಾಗದಲ್ಲಿ ಗಾಂಜಾ ಸೇವನೆ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಹೋಗಿ ಗಾಂಜಾ ಸೇವನೆ ಮಾಡಿರುವ ಮಡಿಕೇರಿ ನಗರದ ವಾಸಿಗಳಾದ ಹರ್ಷ, ಪ್ರವೀಣ್, ಜಯತೀರ್ಥ, ಕಿರಣ್ ಮತ್ತು ಹರ್ಷಿತ್ ರವರನ್ನು ವಶಕ್ಕೆ ಪಡೆದುಕೊಂಡು ವೈದ್ಯಾಧಿಕಾರಿಯವರಿಗೆ ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ವೈದ್ಯಾಧಿಕಾರಿಯರು ಎಲ್ಲರೂ ಗಾಂಜಾ ಸೇವನೆ ಮಾಡಿರುವುದಾಗಿ ವರದಿ ನೀಡಿದ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಹಲ್ಲೆ ಪ್ರಕರಣ

          ದಿನಾಂಕ 04-03-2019 ರಂದು ವಿರಾಜಪೇಟೆ ತಾಲೋಕಿನ ಬಾಡಗ ಗ್ರಾಮದ ಹೆರ್ಮಾಡುವಿನ ನಿವಾಸಿಯಾದ ಪಣಿಯರವರ ನಾಗ ಎಂಬುವವರು ಪಾಲನವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಕತ್ತಿಯಿಂದ ಹಣೆಗೆ ಕಡಿದು ಗಾಯಪಡಿಸಿ ಬೆದರಿಕೆ ಹಾಕಿರುವುದಾಗಿ ಪಾಲನವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ತಂಬಾಕು ಉತ್ಪನ್ನ ಮಾರಾಟ ಪ್ರಕರಣ ದಾಖಲು

           ಕುಶಾಲನಗರದ ಕೂಡ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಇರುವ ಎರಡು ಅಂಗಡಿಗಳಲ್ಲಿ ಸುಧಾರಾಣಿ ಮತ್ತು ಮೂರ್ತಿ ಎಂಬುವವರು ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ದಾಳಿ ಮಾಡಿ ತಂಬಾಕು ಉತ್ಪನ್ನಗಳನ್ನು ವಶಕ್ಕ ತೆಗೆದುಕೊಂಡು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತ ಪ್ರಕರಣ

               ದಿನಾಂಕ 25-02-2019 ರಂದು ನಂಜರಾಯಪಟ್ಟಣದ ನಿವಾಸಿ ಸುನಿಲ್ ಎಂಬುವವರು ಸ್ಕೂಟರಿನಲ್ಲಿ ಕುಶಾಲನಗರದ ಐಬಿ ರಸ್ತೆಯಿಂದ ಕರಿಯಪ್ಪ ಬಡಾವಣೆಗೆ ಹೋಗುತ್ತಿರುವಾಗ ಎದುರಿನಿಂದ ಸುಖೇಶ್ ಎಂಬುವವರು ಟಾಟಾ ಏಸ್ ವಾಹನವನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಗಾಯವಾಗಿದ್ದು, ಈ ಬಗ್ಗೆ ಸುನಿಲ್ ರವರು ದಿನಾಂಕ 05-03-2019 ರಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ 04-03-2019 ರಂದು ವಿರಾಜಪೇಟೆ ತಾಲೋಕಿನ ಬಾಡಗ ಗ್ರಾಮದ ಹೆರ್ಮಾಡುವಿನ ನಿವಾಸಿಯಾದ ಪಣಿಯರವರ ನಾಗ ಎಂಬುವವರು ಪಾಲನವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಕತ್ತಿಯಿಂದ ಹಣೆಗೆ ಕಡಿದು ಗಾಯಪಡಿಸಿ ಬೆದರಿಕೆ ಹಾಕಿರುವುದಾಗಿ ಪಾಲನವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.