Crime News

ಮೋಟಾರ್ ಸೈಕಲ್ ಕಳವು:

ಮಡಿಕೇರಿ ನಗರದ ಕೆ.ಎಸ್‍.ಆರ್‍.ಟಿ.ಸಿ. ನಿಲ್ದಾಣದ ಬಳಿ ವಾಸವಾಗಿರುವ ಹೆಚ್. ಸುರೇಶ ಎಂಬವರು ದಿನಾಂಕ 2-3-2019 ರಂದು ತಮ್ಮ ಬಾಪ್ತು ಮೋಟಾರ್‍ ಸೈಕಲ್ ನೋಂದಣಿ ಸಂಖ್ಯೆಕೆಎ-14-ಇಎನ್ 1295 ನ್ನು ಕೆ.ಎಸ್.ಆರ್‍.ಟಿ.ಸಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ:

ಮಡಿಕೇರಿ ನಗರದ ಕೆ.ಎಸ್.ಆರ್‍.ಟಿ.ಸಿ. ಘಟಕದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿರುವ ನೇನಾವತ್ ಲೋಕೇಶ್ ಎಂಬವರು ಸುಮಾರು 12 ದಿನಗಳಿಂದ ಕೆಲಸಕ್ಕೆ ಹಾಜರಾಗದೆ ಕಾಣೆಯಾಗಿದ್ದು, ಸದರಿ ಲೋಕೇಶ್ ರವರ ಮಾವನವರಾದ ಆನಂದ ನಾಯ್ಕ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಸಿದ್ದಾಪುರ ಠಾಣಾ ಸರಹದ್ದಿನ ಗುಹ್ಯ ಗ್ರಾಮದ ನಿವಾಸಿ  ಶ್ರೀಮತಿ ಕೇವಕಿ ಎಂಬವರ ಪತಿ ಶ್ರೀನಿವಾಸ್ ಎಂಬವರು ದಿನಾಂಕ 3-3-2019 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು, ಸದರಿಯವರನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಸಾವನಪ್ಪಿದ್ದು ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅಪಘಾತ ವ್ಯಕ್ತಿ ಸಾವು:

ಕೇರಳ ರಾಜ್ಯದ ಕೋಯಿಕೋಡ್ ಜಿಲ್ಲೆಯ ಹರಿಕೇಳ ಗ್ರಾಮದ ನಿವಾಸಿ ಕೆ.ಸಿ. ನೌಫಲ್ ಎಂಬವರು ದಿನಾಂಕ 3-3-2019 ರಂದು ಕುಟ್ಟದ ಕಡೆಗೆ ಮೋಟಾರ್ ಸೈಕಲಿನಲ್ಲಿ ಬರುತ್ತಿದ್ದಾಗ ಕುಟ್ಟ ಸಮೀಪದ ಸಿಂಕೋನ ಕಾಲೋನಿ ಹತ್ತಿರ ಮೋಟಾರ್ ಸೈಕಲ್ ಅಪಘಾತಕ್ಕೀಡಾಗಿ ಕೆ.ಸಿ. ನೌಫಲ್ ರವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಸದರಿಯವರನ್ನು ಹೆಚ್ಚಿನ ಚಿಕಿತ್ಸೆಗೆ ಮಾನಂದವಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 5-3-2019 ರಂದು ಸದರಿಯವರು ಸಾವನಪ್ಪಿದ್ದು ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಬೈಕಿಗೆ ಪಿಕ್‍ಅಪ್ ವಾಹನ ಡಿಕ್ಕಿ:

ದಿನಾಂಕ 06.03.2019 ರಂದು  ಸಮಯ 09:00 ಗಂಟೆಗೆ  ಸೋಮವಾರಪೇಟೆ ತಾಲೋಕು ಗೋಣಿಮರೂರು ಗ್ರಾಮದ ಡಿ.ಸುಜಿತ್ ಎಂಬವರು  ಹಾನಗಲ್ಲಿನಿಂದ  ಸ್ವಂತ ಕೆಲಸದ ನಿಮ್ಮಿತ್ತ   ಸೋಮವಾರಪೇಟೆ ನಗರಕ್ಕೆ ಕೆಎ-12 ಆರ್ 6102 ರ  ಬುಲ್ಲೆಟ್ ಬೈಕಿನಲ್ಲಿ  ಹೋಗುತ್ತಿರುವಾಗ್ಗೆ  ಗಣಪತಿ ದೇವಸ್ಥಾನದ ಹತ್ತಿರ ತಲುಪುವಾಗ್ಗೆ  ಹಿಂಬದಿಯಿಂದ  ಬಂದ ಕೆಎ-12 ಎ 6761ರ ಪಿಕ್ ಅಪ್ ವಾಹನವನ್ನು ಅದರ ಚಾಲಕನು  ಅತಿ ವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು  ಡಿ.ಸುಜಿತ್ ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ  ಡಿ.ಸುಜಿತ್ ರವರುಬೈಕ್ ಸಮೇತ  ರಸ್ತೆಗೆ  ಬಿದ್ದು, ಎಡಕೈಗೆ ಮತ್ತು ತಲೆಗೆ ಪಟ್ಟಾಗಿರುವುದಲ್ಲದೆ  ಬುಲ್ಲೆಟ್ ಬೈಕ್ ಮತ್ತು  ಪಿಕ್ ಅಪ್ ಜೀಪ್ ಸಹ ಜಖಂಗೊಂಡಿದ್ದು. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ತಂಬಾಕು ಉತ್ಪನ್ನಗಳ ಮಾರಾಟ:

ಕುಶಾಲನಗರ ಗ್ರಾಮಾಂತರ  ಠಾಣಾಧಿಕಾರಿ ನಂದೀಶ್ ಕುಮಾರ್‍ರವರಿಗೆ ದೊರೆತ ಮಾಹಿತಿ ಮೇರೆಗೆ ಸದರಿಯವರು ಸಿಬ್ಬಂದಿಯೊಂದಿಗೆ ದಿನಾಂಕ 6-3-2019 ರಂದು ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೂಡಿಗೆ, ಕೂಡ್ಲೂರು ಮತ್ತು ಸೀಗೆಹೊಸೂರು ಗ್ರಾಮಗಳಲ್ಲಿ 3 ಅಂಗಡಿಗಳಲ್ಲಿ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಅಂಗಡಿ ಮಾಲಿಕರುಗಳ ಮೇಲೆ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಆಟೋ ರಿಕ್ಷಾ ಡಿಕ್ಕಿ:

ಕುಶಾಲನಗರ ಸಮೀಪದ ಕೂಡುಮಂಗಳೂರು ಗ್ರಾಮದ ನಿವಾಸಿ ಹೆಚ್.ಕೆ. ವೆಂಕಟೇಶ್ ಎಂಬವರು ದಿನಾಂಕ 5-3-2019 ರಂದು ರಾತ್ರಿ ಶಿವರಾತ್ರಿ ಹಬ್ಬದ ಕಾರ್ಯಕ್ರಮಕ್ಕೆ ಹೋಗಿ ಮರಳಿ ಮನೆಯ ಕಡೆಗೆ ದೊಡ್ಡಮ್ಮ ದೇವಾಲಯದ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು ಸದರಿಯವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಈ ಸಂಬಂದ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.