Crime News

ಅಕ್ರಮ ಲಾಟರಿ ಮಾರಾಟ ಪತ್ತೆ

ದಿನಾಂಕ 07/03/2019ರಂದು ವಿರಾಜಪೇಟೆ ಬಳಿಯ ಕದನೂರು ಗ್ರಾಮದಲ್ಲಿ ಹುಣಸೂರಿನ ಸೋಮರಾವ್ ಎಂಬಾತನು ಕೇರಳ ರಾಜ್ಯದ ಲಾಟರಿ ಟಿಕೆಟುಗಳನ್ನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದುದನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಯ ಎಎಸ್‌ಐ ಹೆಚ್‌.ಜೆ.ಚಂದ್ರಪ್ಪನವರು ಪತ್ತೆ ಹಚ್ಚಿ ಸುಮಾರು ರೂ. 9,240/- ಬೆಲೆಯ 231 ಲಾಟರಿ ಟಿಕೆಟುಗಳನ್ನು ಹಾಗೂ ರೂ. 520 ನಗದನ್ನು ವಶಪಡಿಸಿಕೊಂಡು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 07/03/2019ರಂದು ಗೋಣಿಕೊಪ್ಪ ಬಳಿಯ ಚೆನ್ನಂಗೊಲ್ಲಿ ಪೈಸಾರಿ ಬಳಿ ಜಯಲಕ್ಷ್ಮಿ ಎಂಬ ಹೆಸರಿನ ಖಾಸಗಿ ಬಸ್ಸಿನ ನಿರ್ವಾಹಕ ವಿಜಯ ಎಂಬವರು ಬಸ್ಸಿನ ಪ್ರಯಾಣಿಕರನ್ನು ಇಳಿಸುತ್ತಿರುವಾಗ ಗೋಣಿಕೊಪ್ಪ ಕಡೆಯಿಂದ ಒಂದು ಮೋಟಾರು ಬೈಕನ್ನು ಅದರ ಚಾಲಕ ಗೋಣಿಕೊಪ್ಪ ನಗರದ ಮೈಸೂರಮ್ಮ ಕಾಲೊನಿ ನಿವಾಸಿ ಸುನಿ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಸ್ಸಿನ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಸುನಿ ಹಾಗೂ ಹಿಂಬದಿ ಸವಾರ ಆದರ್ಶ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೆಂಕಿ ತಗುಲಿ ಮಹಿಳೆ ಸಾವು

ದಿನಾಂಕ 01/03/2019ರಂದು ಗೋಣಿಕೊಪ್ಪ ಬಳಿಯ ಅರ್ವತೊಕ್ಲು ಗ್ರಾಮದ ಗರಿಕೆರೆ ಪೈಸಾರಿ ನಿವಾಸಿ ರಾಧಾರವರು ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಗಾಯಾಳುವಾಗಿದ್ದು ಮೈಸುರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06/03/2019ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 05/03/3019ರಂದು ಕುಶಾಲನಗರ ಬಳಿಯ ರಸಲ್‌ಪುರ ನಿವಾಸಿ ಗಣೇಶ ಎಂಬವರು ವಿಪರೀತ ಮದ್ಯಪಾನ ಮಾಡಿ ಬಂದು  ಯಾವುದೋ ವಿಷಯಕ್ಕೆ ಬೇಸರಿಸಿಕೊಂಡು ವಿಷ ಸೇವಿಸಿದ್ದು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06/03/2019ರಂದು ಮೃತರಾಗಿರುವುದಾಗಿ ನೀಡಿದ ದುರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರದಿಂದ ಬಿದ್ದು ವ್ಯಕ್ತಿ ಸಾವು

ದಿನಾಂಕ 07/03/2019 ರಂದು ಸೋಮವಾರಪೇಟೆ ಬಳಿಯ ಹಾನಗಲ್ಲು ಬಾಣೆ ನಿವಾಸಿ ಎಂ.ಶಿವಣ್ಣ ಎಂಬವರು ನಗರಳ್ಳಿ ಗ್ರಾಮದ ತನುಷಿ ಎಂಬವರ ತೋಟದಲ್ಲಿ ಮರಗಸಿ ಮಾಡುತ್ತಿರುವಾಗ ಆಯತಪ್ಪಿ ಕೆಳಗೆ ಬಿದ್ದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.