Crime News

ಬಂದೂಕು ಕಳವು

            ಮಡಿಕೇರಿ ನಗರದ ನಿವಾಸಿ ಉತ್ತಯ್ಯ ಎಂಬುವವರ ಮನೆಗೆ ದಿನಾಂಕ 08-03-2019 ರಂದು ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದು ಒಳ ನುಗ್ಗಿ ಮನೆಯಲ್ಲಿದ್ದ ಒಂದು ಒಂಟಿ ನಳಿಕೆ ಹಾಗೂ ಒಂದು ಜೋಡಿ ನಳಿಕೆಯ ಬಂದೂಕನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

             ದಿನಾಂಕ 08-03-2019 ರಂದು ಕೆ ಆರ್ ನಗರದಿಂದ ಹರೀಶ್, ಅವರ ತಾಯಿ ರೇವಮ್ಮ, ಅತ್ತೆ ಸುಬ್ಬಮ್ಮನವರೊಂದಿಗೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಸಿಂಕೋನ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ಪ್ರಥ್ವಿ ನಿತಿನ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಹರೀಶ್, ರೇವಮ್ಮ, ಸುಬ್ಬಮ್ಮ ಮತ್ತು ವ್ಯಾನಿನ ಚಾಲಕ ಪ್ರವೀಣ್ ಕುಮಾರ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಸೇವನೆ ಪ್ರಕರಣ ದಾಖಲು

           ದಿನಾಂಕ 08-03-2019 ರಂದು ವಿರಾಜಪೇಟೆ ನಗರದ ಸುಣ್ಣದ ಬೀದಿ ಎಂಬಲ್ಲಿ ಈಶನ್ ಎಂಬುವವರು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಹೋಗಿ ಗಾಂಜಾ ಸೇವನೆ ಮಾಡಿರುವ ನಗರದ ಸುಣ್ದದ ಬೀದಿಯ ನಿವಾಸಿ ಈಶನ್ ರವರನ್ನು ವಶಕ್ಕೆ ಪಡೆದುಕೊಂಡು ವೈದ್ಯಾಧಿಕಾರಿಯವರಿಗೆ ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯರು ವರದಿ ನೀಡಿದ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಹಲ್ಲೆ ಪ್ರಕರಣ

           ದಿನಾಂಕ 08-03-2019 ರಂದು ವಿರಾಜಪೇಟೆ ತಾಲೋಕಿನ ಬಿರುನಾಣಿ ಗ್ರಾಮದ ನಿವಾಸಿಯಾದ ಕಿಶೋರ್ ಎಂಬುವವರು ಹುದಿಕೇರಿಯಲ್ಲಿರುವ ಪರಮೇಶ್ವರರವರ ಅಂಗಡಿಯಲ್ಲಿ ಮಾಂಸ ತೆಗೆದುಕೊಳ್ಳುತ್ತಿರುವಾಗ ಅಲ್ಲಿಗೆ ಬಂದ ಕಿಶೋರ್ ಎಂಬುವವರು ಹಳೇ ದ್ವೇಷದಿಂದ ಚಾಕುವಿನಿಂದ ಕುತ್ತಿಗೆಯ ಭಾಗಕ್ಕೆ ತಿವಿದು ಗಾಯಪಡಿಸಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

          ದಿನಾಂಕ 06-03-2019 ರಂದು ಕೊಡ್ಲಿಪೇಟೆ ನಗರದ ನಿವಾಸಿ ಅಲ್ತಾಫ್ ಹುಸೇನ್ ರವರು ತನ್ನ ಮಗ ಆಶ್ರನ್ ರವರನ್ನು ಕರೆದುಕೊಂಡು ಮೋಟಾರು ಸೈಕಲಿನಲ್ಲಿ ಮನೆಗೆ ಹೋಗುತ್ತಿರುವಾಗ ನಾಯಿ ಅಡ್ಡ ಬಂದು ಅಪಘಾತವಾಗಿ ಮಗ ಆಶ್ರನ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಜೂಜಾಟ

            ಕುಶಾಲನಗರದ ಮಾರ್ಕೆಟ್ ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನದ ಹಿಂಭಾಗದ ಖಾಲಿ ಜಾಗದಲ್ಲಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿರುವುದಾಗಿ ಪಿಎಸ್ಐ ರವರಿಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆಟವಾಡುತ್ತಿದ್ದ ನಿಲುವಾಡಿಯ ಮಹದೇವನಾಯಕ್, ಗುಮ್ಮನಕೊಲ್ಲಿಯ ರವಿ ಮತ್ತು ಚೆಲುವ ರವರನ್ನು ವಶಕ್ಕೆ ಪಡೆದುಕೊಂಡು ಆಟವಾಡಲು ಬಳಸಿದ ನಗದು ಹಣ 4,320 ರೂ ವನ್ನು ವಶಪಡಿಸಿಕೊಂಡು ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.