Crime News

ಅಕ್ರಮ ಮದ್ಯ ಮಾರಾಟ:

ದಿನಾಂಕ: 10-03-2019 ರಂದು ಬೆಳಿಗ್ಗೆ 8.30 ಗಂಟೆಗೆ ಪೊನ್ನಂಪೇಟೆಯ ಬೇಗೂರು ಗ್ರಾಮದ ಮಸೀದಿಯ ಬಳಿ ರವಿ ಎಂಬುವವರು ಸರ್ಕಾರದ ಯಾವುದೇ ಪರವನಾಗಿ ಇಲ್ಲದೆ ಆಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವುದಾಗಿ ಪೊಲೀಸ್ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪೊನ್ನಂಪೇಟೆ ಠಾಣಾಧಿಕಾರಿ ಬಿ.ಜಿ. ಮಹೇಶ್ ರವರು ಹಾಗೂ ಸಿಬ್ಬಂದಿರವರು ತೆರಳಿ ಬೇಗೂರು ಗ್ರಾಮದ ಮಸೀದಿಯ ಬಳಿ ಆಕ್ರಮವಾಗಿ ಮಾರಾಟ  ಮಾಡುತ್ತಿದ್ದ ರವಿ ಎಂಬವರನ್ನು ವಶಕ್ಕೆ ಪಡೆದು  180 ಎಂ.ಎಲ್ ನ Boss premium xxx Rum 19 ಕ್ವಾಟರ್ ಬಾಟಲಿಗಳನ್ನು ಹಾಗು  90 ಎಂ.ಎಲ್ ನ ಬೆಂಗಳೂರು ಮಾಲ್ಟ್ ವಿಸ್ಕಿ 40 ಟೆಟ್ರಾ ಪ್ಯಾಕೇಟ್ ಗಳನ್ನು  ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಜಾನುವಾರುಗಳ ಸಾಗಾಟ:

ಪೊನ್ನಂಪೇಟೆ ಠಾಣಾಧಿಕಾರಿ ಬಿ.ಜಿ. ಮಹೇಶ‍್ ರವರಿಗೆ ಬಂದ ಖಚಿತ  ವರ್ತಮಾನದ ಮೇರೆಗೆ ಪಿರ್ಯಾದಿಯವರಿಗೆ ಸಿಬ್ಬಂದಿಯವರೊಂದಿಗೆ ಕಾನೂರು ಜಂಕ್ಷನ್ ನ ಬಸ್ ತಂಗುದಾಣದ ಬಳಿ ಹೋಗಿ ಆರೋಪಿಗಳು ಅಶೋಕ್ ಲೈಲ್ಯಾಂಡ ವಾಹನದಲ್ಲಿ  2 ಹೋರಿಗಳನ್ನು ಹಾಗು ಒಂದು ಕರುವನ್ನು ಸಾಗಾಟ ಮಾಡತ್ತಿದ್ದುದನ್ನು ಪತ್ತೆ ಹಚ್ಚಿ  ವಾಹನವನ್ನು ವಾಹನವನ್ನು ಜಾನುವಾರುಗಳ ಸಮೇತ ವಶಕ್ಕೆ ಪಡೆದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಕುಟುಂಬದಲ್ಲಿ ಜಗಳ, ಹಲ್ಲೆ:

ಮಡಿಕೇರಿ ನಗರದ ಮಹದೇವಪೇಟೆಯಲ್ಲಿ ಶ್ರೀಮತಿ ಅನು ಹಾಗು ಅವರ ಗಂಡ,  ಗಂಡನ ಸಹೋದರ ಮತ್ತು ಪತ್ನಿ ರವರುಗಳು  ಮಾರ್ಕೆಟ್ ಬಳಿ ಮಿಂಟೋ ರೆಸ್ಟೋರೆಂಟ್ ನ್ನು ನಡೆಸುತ್ತಿದ್ದು  ಅವರ ಕೌಟುಂಬದಲ್ಲಿ ಒಂದೆರಡು ಬಾರಿ ಜಗಳಗಳಾಗಿದ್ದು, ದಿನಾಂಕ 10-3-2019 ರಂದು ಶ್ರೀಮತಿ ಅನು ರವರು ಮಹಡಿಯ ಮೇಲ್ಭಾಗದದಿಂದ ಕೆಳಗೆ ಮೆಟ್ಟಲುಗಳ ಮೂಲಕ ಬರುತ್ತಿದ್ದಾದ ರಮೇಶರವರ ಪತ್ನಿ ಶೋಭಾರವರು ಜಗಳ ಮಾಡಿ ಹಲ್ಲೆ ಮಾಡಿ ನೋವನ್ನುಂಟು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.