Crime News

ಮಹಿಳೆ ಆತ್ಮಹತ್ಯೆ

ದಿನಾಂಕ 11/03/2019ರಂದು ಶ್ರೀಮಂಗಲ ನಿವಾಸಿ ಪಣಿ ಎರವರ ತಂಗಿ ಎಂಬ ಮಹಿಳೆಯು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತೆ ತಂಗಿರವರು ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡು ಮದ್ಯಪಾನದ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ; ಸಾವು

ದಿನಾಂಕ 11/03/2019ರಂದು ಹುದಿಕೇರಿ ನಿವಾಸಿ ಮುತ್ತಯ್ಯ ಎಂಬವರು ನೆರೆಮನೆಯ ಚಂದ್ರಶೇಖರ್ ಎಂಬವರೊಡನೆ ಪೊನ್ನಂಪೇಟೆ ಮಹಿಳಾ ಸಮಾಜದಲ್ಲಿ ಮದುವೆ ಸಮಾರಂಭ ಮುಗಿಸಿ ಬೈಕಿನಲ್ಲಿ ಹೊರಟು ಪೊನ್ನಂಪೇಟೆ ಕೊಡವ ಸಮಾಜ ಬಳಿ ತಲುಪುವಾಗ ಪೊನ್ನಂಪೇಟೆ ಕೊಡವ ಸಮಾಜದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಒಂದು ಕಾರನ್ನು ಅದರ ಚಾಲಕ ಹಿಂದಕ್ಕೆ ಚಾಲಿಸುತ್ತಿರುವಾಗ ಕಾರು ಚಂದ್ರಶೇಖರ್‌ರವರ ಬೈಕಿಗೆ ತಗುಲಿ ಚಂದ್ರಶೇಖರ್ ಹಾಗೂ ಮುತ್ತಯ್ಯನವರು ರಸ್ತೆಯಲ್ಲಿ ಬಿದ್ದಿದ್ದು ಅದೇ ಸಮಯಕ್ಕೆ ಕುಟ್ಟ ಕಡೆಯಿಂದ ಒಂದು ಪಿಕ್‌ಅಪ್ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡುಬಂದು ಮುತ್ತಯ್ಯನವರ ಮೇಲೆ ಹತ್ತಿಸಿಕೊಂಡು ನಿಲ್ಲಿಸದೇ ಹೋಗಿದ್ದು, ತೀವ್ರವಾಗಿ ಗಾಯಗೊಂಡ ಮುತ್ತಯ್ಯನವರು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರ ಸಾಗಾಟ ಪತ್ತೆ

ದಿನಾಂಕ 11/03/2019ರಂದು ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಪಟೇಲ್‌ ನಗರದ ಬಳಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಗೋಣಿಕೊಪ್ಪ ಠಾಣೆಯ ಪಿಎಸ್‌ಐ ಬಿ.ಎಸ್. ಶ್ರೀಧರ್‌ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಗೋಣಿಕೊಪ್ಪ ನಗರದ ನಿವಾಸಿ ಶಿಯಾಬುದ್ದೀನ್ ಎಂಬವರು ಒಂದು ಮಿನಿಲಾರಿಯಲ್ಲಿ ಸುಮಾರು ರೂ. 1.5 ಲಕ್ಷ ಮೌಲ್ಯದ ನಂದಿ ಮರದ 11 ದಿಮ್ಮಿಗಳನ್ನು ಯಾವುದೇ ಸಾಗಾಟದ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 11/03/2019ರಂದು ಹಾಸನ ಜಿಲ್ಲೆಯ ಅರಕಲಗೂಡಿನ ಚಾಸಮಟ್ಟನ ಹೊಸಳ್ಳಿ ನಿವಾಸಿ ಪುನೀತ್ ಕುಮಾರ್ ಎಂಬವರು ಅವರ ಸ್ನೇಹಿತ ಉಮೇಶ್ ಸಿಂಗ್ ಎಂಬವರ ಸ್ಕೂಟಿಯಲ್ಲಿ ಶನಿವಾರಸಂತೆ ನಗರಕ್ಕೆ ಬಂದು ಕೆಲಸ ಮುಗಿಸಿ ಮರಳಿ ಹೋಗುತ್ತಿರುವಾಗ ಕೊಡ್ಲಿಪೇಟೆ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಪುನೀತ್‌ ಕುಮಾರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

ಶನಿವಾರಸಂತೆಯ ತ್ಯಾಗರಾಜ ಕಾಲೋನಿ ನಿವಾಸಿ ವಾಹೀದ್ ಪಾಷಾ ಎಂಬವರು ದಿನಾಂಕ 04/03/2019ರಂದು ಕೊಣನೂರಿನಲ್ಲಿರುವ ಅವರ ಮಗಳ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಮಗಳ ಮನೆಗೂ ಹೋಗದೆ ಮರಳಿ ಮನೆಗೂ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.