Crime News

ಸುಟ್ಟು ಗಾಯಗೊಂಡ ಮಹಿಳೆಯ ಸಾವು

           ದಿನಾಂಕ 06-03-2019 ರಂದು ಮಡಿಕೇರಿ ತಾಲೋಕಿನ ಕೆ ಬಾಡಗ ಗ್ರಾಮದ ನಿವಾಸಿಯಾದ ಗೋಪಮ್ಮ ಎಂಬುವವರು ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಆಕಸ್ಮಿಕವಾಗಿ  ಬೆಂಕಿ ತಗುಲಿ ಗಾಯಗೊಂಡಿದ್ದ ಗೋಪಮ್ಮರವರು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 12-03-2019 ರಂದು ಮೃತಪಟ್ಟಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಕಾರು ಡಿಕ್ಕಿ

           ದಿನಾಂಕ 12-03-2019 ರಂದು ಕುಶಾಲನಗರದ ಮುಳ್ಳುಸೋಗೆಯ ನಿವಾಸಿ ಬಸವರಾಜುರವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆನಂದ ಎಂಬುವವರು ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಪಡಿಸಿದ ಪರಿಣಾಮ ಗಾಯಗಳಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.