Crime News

ಓಮ್ನಿ ಸೈಕಲಿಗೆ ಡಿಕ್ಕಿ:

ವಿರಾಜಪೇಟೆ ತಾಲೋಕು, ಕೈಕೇರಿ ಗ್ರಾಮದ ನಿವಾಸಿ ಜೆ. ಅರ್ಜುನ್ ಎಂಬವರ ಮಗ ಜಾನ್ಸನ್ ದಿನಾಂಕ 13-3-2019 ರಂದು ಬೆಳಗ್ಗೆ ತನ್ನ ಸೈಕಲಿನಲ್ಲಿ ಗೋಣಿಕೊಪ್ಪದ ಕಾವೇರಿ ಕಾಲೇಜಿನ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ವ್ಯಕ್ತಿಯೋರ್ವ ಮಾರುತಿ ಓಮ್ನಿ ವ್ಯಾನ್ ನ್ನು ಗೋಣಿಕೊಪ್ಪದಿಂದ ವಿರಾಜಪೇಟೆ ಕಡೆಗೆ ಹೋಗುತ್ತಿದ್ದು ಕಾವೇರಿ ಕಾಲೇಜಿನ ಮುಂದಿನ ರಸ್ತೆಯಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವ್ಯಾನ್‍ನನ್ನು ತಿರುಗಿಸಿ ರಸ್ತೆಯ ಬದಿಯಲ್ಲಿ ಸೈಕಲಿನಲ್ಲಿ ಹೋಗುತ್ತಿದ್ದ ಜಾನ್ಸ್‍ನ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ಜಾನ್ಸನ್ ರಸ್ತೆಯ ಮೇಲೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣ ಹಲ್ಲೆ:

ದಿನಾಂಕ 13.03.2019 ರಂದು  ಬೆಳಿಗ್ಗೆ 08:30 ಗಂಟೆಗೆ ಸೋಮವಾರಪೇಟೆ ತಾಲೋಕು ಬಾಣಾವಾರ ಗ್ರಾಮದ ನಿವಾಸಿಗಳಾದ ಶ್ರೀಮತಿ ರಜನಿ, ಯತೀಶ  ಯವರ ಹಾಗು ಮಂಜುಳ,  ಬಸವಣ್ಣ, ಹಾಗು ಸಿದ್ದೇಶರವರ ನಡುವೆ ನಡೆಯುವ ದಾರಿಯ ಸಂಬಂಧ ಜಗಳ ಏರ್ಪಟ್ಟು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದು ಅಲ್ಲದೆ ಪರಸ್ಪರ ಹಲ್ಲೆ ಮಾಡಿಕೊಂಡಿದ್ದು, ಎರಡು ಕಡೆಯವರು ನೀಡಿದ ದೂರಿನ ಮೇರೆಗೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ ಸೋಮವಾರಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಸೋಮವಾರಪೇಟೆ ನಗರದ ರೇಂಜರ್ ಬ್ಲಾಕ್ ನಿವಾಸಿ ಶ್ರೀಮತಿ ಮಂಜುಳಾ ಎಂಬುವವರ ತಂಗಿಯ ಮಗ ಹೇಮಂತ ಎಂಬವರು ದಿನಾಂಕ               12-3-2019 ರಂದು ರಾತ್ರಿ ಮನೆಯ ಹಿಂದೆ ಮರವೊಂದಕ್ಕೆ ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರದಿಂದ ಬಿದ್ದು ವ್ಯಕ್ತಿಯ ದುರ್ಮರಣ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನ ಬಿಳಿಗೇರಿ ಗ್ರಾಮದ ನಿವಾಸಿ ಪಿ.ಆರ್. ಭತರ್ ಎಂಬವರ ತಮ್ಮ ಶರತ್ ಎಂಬವರು ದಿನಾಂಕ 13-3-2019 ರಂದು ಬಿಳಿಗೇರಿ ಗ್ರಾಮದಲ್ಲಿ ಕಾಫಿತೋಟವೊಂದರಲ್ಲಿ ಮರದ ಕೊಂಬೆಗಳನ್ನು ಕಡಿಯುತ್ತಿದ್ದ ವೇಳೆ ಸುಮಾರು 20 ಅಡಿ ಮೇಲಿನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರಿಮೆಣಸು ಕಳವು:

ಮಡಿಕೇರಿ ತಾಲೋಕು ಈರಳವಳಮುಡಿ ಗ್ರಾಮದ ನಿವಾಸಿ ಬೆಳ್ಳಿಯಪ್ಪನವವರು ತಮ್ಮ ಮನೆಯ ಹತ್ತಿರದ ಕಣದಲ್ಲಿ ಒಣಗಲು ಹಾಕಿದ ಕರಿಮೆಣಸಿನ ಪೈಕಿ 110 ಕೆ.ಜಿ. ಯಷ್ಟು ಒಣಗಿದ ಕರಿಮೆಣಸನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.