Crime News

ವ್ಯಕ್ತಿ ಆತ್ಮಹತ್ಯೆ

ದಿನಾಂಕ 13/03/2019ರಂದು ಹೊದ್ದೂರು ಬಳಿಯ ಪಾಲೆಮಾಡು ನಿವಾಸಿ ಎಂ.ರಮೇಶ ಎಂಬವರು ವಿರಾಜಪೇಟೆ ನಗರದ ಪಂಜರುಪೇಟೆಯ ಬಸ್‌ ತಂಗುದಾಣದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ರಮೇಶನು ವಿಪರೀತ ಮದ್ಯ ಪಾನ ಮಾಡಿ ದಿನವೂ ಮನೆಯಲ್ಲಿ ಜಗಳ ಮಾಡುತ್ತಿದ್ದ ಕಾರಣಕ್ಕೆ ಆತನ ಪತ್ನಿ ಮತ್ತು ಮಕ್ಕಳು ಬೇರೆಯಾಗಿ ವಾಸಿಸುತ್ತಿದ್ದು ಈ ಕಾರಣಕ್ಕೆ ರಮೇಶನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ; ಸಾವು

ದಿನಾಂಕ 14/03/2019ರಂದು ಹುಣಸೂರಿನ ಪಂಚವಳ್ಳಿಯ ಗಿರಿಜನ ಪುನರ್ವಸತಿ ಕೇಂದ್ರ ವಾಸಿ ಜೇನುಕುರುಬರ ವಿಶ್ವ ಎಂಬಾತನು ಕುಟ್ಟ ವ್ಯಾಫ್ತಿಯ ಗೋಣಿಗದ್ದೆಯ ಆತನ ಅಜ್ಜಿಯ ಮನೆಯಿಂದ ಟೀ ಕುಡಿದು ನಾಗರಹೊಳೆಯ ನಾಣಚ್ಚಿಯ ಅಂಚೆ ಕಚೇರಿಯ ಪಕ್ಕದ ಮಣ್ಣು ರಸ್ತೆಯಲ್ಲಿ ಮಲಗಿಕೊಂಡಿರುವಾಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಫಾರಿ ಬಸ್ಸೊಂದನ್ನು ಅದರ ಚಾಲಕ ಆದಿ ನಾರಾಯಣ ಎಂಬವರು ನಿರ್ಲಕ್ಷ್ಯತನದಿಂದ ಹಿಮ್ಮುಖವಾಗಿ ಚಾಲಿಸಿದ ಪರಿಣಾಮ ರಸ್ತೆಯಲ್ಲಿ ಮಲಗಿದ್ದ ವಿಶ್ವನು ಸ್ಥಳದಲ್ಲೇ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸೆಸ್ಕ್ ಉದ್ಯೋಗಿ ಮೇಲೆ ಹಲ್ಲೆ

ದಿನಾಂಕ 14/03/2019ರಂದು ಶ್ರೀಮಂಗಲ ವ್ಯಾಪ್ತಿಯ ಚೆಸ್ಕಾಂ ಘಟಕದ ಕಿರಿಯ ಮಾರ್ಗದಾಳು ನಂದ ಗೌಡಪ್ಪ ದಾಸರ ಎಂಬವರು ಕಚೇರಿಯಲ್ಲಿರುವಾಗ ಅಲ್ಲಿಗೆ ಬಂದ ಕಿಶೋರ್‌ ಎಂಬವರು ವಿದ್ಯುತ್ ಅಡಚಣೆಯ ವಿಷಯದಲ್ಲಿ ಜಗಳವಾಡಿ ನಂದ ಗೌಡಪ್ಪ ದಾಸರರವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ನಿಂದಿಸಿ  ಅವರ ಸಮವಸ್ತ್ರವನ್ನು ಹರಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.