Crime News

ತೇಗದ ಮರ ಕಳವು

          ವಿರಾಜಪೇಟೆ ತಾಲೋಕಿನ ಬೈರಂಬಾಡ ಗ್ರಾಮದ ನಿವಾಸಿಯಾದ ಅನಿತಾ ಎಂಬುವವರಿಗೆ ಸೇರಿದ ಕಾಫಿ ತೋಟದಿಂದ ಯಾರೋ ಕಳ್ಳರು ದಿನಾಂಕ 10-03-2019 ಮತ್ತು 11-03-2019 ರ ಮದ್ಯದಲ್ಲಿ ತೇಗದ ಮರವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 15-03-2019 ರಂದು ವಿರಾಜಪೇಟೆ ತಾಲೋಕಿನ ಮಾಯಮುಡಿ ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿರುವ ಮಲ್ಲಿಕಾರ್ಜುನ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಗೋಣಿಕೊಪ್ಪ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ಮಲ್ಲಿಕಾರ್ಜುನನವರನ್ನು ವಶಕ್ಕೆ ಪಡೆದುಕೊಂಡು 90  ಎಂ ಎಲ್ ನ 107 ಟೆಟ್ರಾ ಪ್ಯಾಕೆಟ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತ ಪ್ರಕರಣ

           ದಿನಾಂಕ 15-03-2019 ರಂದು ವಿರಾಜಪೇಟೆ ನಗರದ ಶಿವಕೇರಿಯ ನಿವಾಸಿಯಾದ ಶಾಮ್ ಕುಮಾರ್ ಎಂಬುವವರು ಓಮಿನಿ ವ್ಯಾನಿನಲ್ಲಿ ಚಂದ್ರ ಮತ್ತು ವರುಣ್ ರವರೊಂದಿಗೆ ಕೆ ಆರ್ ನಗರಕ್ಕೆ ಹೋಗುತ್ತಿರುವಾಗ ಗೋಣಿಕೊಪ್ಪಕ್ಕೆ ತಲುಪಿ ಬೈಪಾಸ್ ರಸ್ತೆಗೆ ಹೋಗಲು ರಸ್ತೆ ಬದಿಯಲ್ಲಿ ನಿಲ್ಲಿಸಿರುವಾಗ ಎದುರಿನಿಂದ ಬಂದ ಬುಲೆಟ್ ಬೈಕನ್ನು ಅದರ ಸವಾರ ರಜೀಶ್ ಅಹಮದ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ಶಾಮ್ ಕುಮಾರ್ ಮತ್ತು ರಜೀಶ್ ಅಹಮದ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 15-03-2019 ರಂದು ಸೋಮವಾರಪೇಟೆ ತಾಲೋಕಿನ ನಂಜರಾಯಪಟ್ಟಣ ಗ್ರಾಮದ ನಿವಾಸಿ ಮೊಣ್ಣಪ್ಪ ಎಂಬುವವರು ತನ್ನ  ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ಮೊಣ್ಣಪ್ಪನವರನ್ನು ವಶಕ್ಕೆ ಪಡೆದುಕೊಂಡು ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ತಂಬಾಕು ಉತ್ಪನ್ನ ಮಾರಾಟ, ಪ್ರಕರಣ ದಾಖಲು

           ಸೋಮವಾರಪೇಟೆ ತಾಲೋಕಿನ ನಂಜರಾಯಪಟ್ಟಣ ಗ್ರಾಮದ ಸರ್ಕಾರಿ ಶಾಲೆಯ ಬಳಿ ಇರುವ ಅಂಗಡಿಗಳಲ್ಲಿ ಸುಶೀಲ ಮತ್ತು ಸತೀಶರವರು ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ತಂಬಾಕು ಉತ್ಪನ್ನಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.