Crime News

ಅಕ್ರಮ ಮರಳು ಸಾಗಾಟ:

ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹೆಚ್ಚಿದ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಹರಿಹರ ಗ್ರಾಮದಲ್ಲಿ ಸಂಪತ್ ಹಾಗು ರಜನಿ ಎಂಬುವರು ದಿನಾಂಕ 16-3-2019 ರಂದು ಬೆಳಗಿನ ಜಾವದಲ್ಲಿ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ಮರಳು ತುಂಬಿದ ಲಾರಿ ಸಮೇತವಾಗಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಸ್ಟೇರ್‍ಕೇಸ್‍ ನಿಂದ ಬಿದ್ದು ವ್ಯಕ್ತಿ ಸಾವು:

ಮೂಲತ: ಕೇರಳ ರಾಜ್ಯದ ವ್ಯಕ್ತಿ ರಾಜೇಶ್ ಎಂಬವರು ಶ್ರೀಮಂಗಲ ಠಾಣಾ ಸರಹದ್ದಿನ ಬೆಳ್ಳೂರು ಗ್ರಾಮದಲ್ಲಿ ಮನೆ ಕಟ್ಟುವ ಕೆಲಸ ಮಾಡುತ್ತಿದ್ದು ದಿನಾಂಕ 15-3-2019 ರಂದು ಮದ್ಯಪಾನ ಮಾಡಿ ಕಟ್ಟಡ ಕೆಲಸ  ಮಾಡುತ್ತಿದ್ದಾಗ ಸ್ಟೇರ್ ಕೇಸ್ ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಅವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಸದರಿ ರಾಜೇಶ್ ನವರು ಮೃತಪಟ್ಟಿದ್ದು, ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಮನೆಯಿಂದ ಚಿನ್ನಾಭರಣ ಕಳವು:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೆ. ಬಾಡಗ ಗ್ರಾಮದ ವಿದ್ಯಾನಗರದಲ್ಲಿ ಹೆಚ್.ಡಿ. ಮುಖೇಶ್ ಎಂಬವರು ವಾಸವಾಗಿದ್ದು, ದಿನಾಂಕ 15-3-2019 ರಂದು ಅವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಭಾಗದ ಕಿಟಕಿಯ ಮೂಲಕ ಮನೆಯೊಳಗೆ ಪ್ರವೇಶ ಮಾಡಿ ಚಿನ್ನಾಭರಣ, ತಾಮ್ರದ ಹಂಡೆ, ತಾಮ್ರದ ಪಾತ್ರೆ ಹಾಗು ಬಿಂದಿಗೆ ಇತ್ಯಾದಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿಚಾದಲ್ಲಿ ವೈಷಮ್ಯ, ಬಿಂಕಿ ಹಾಕಿ ನಷ್ಪ:

ಸೋಮವಾರಪೇಟೆ ಠಾಣಾ ಸರಹದ್ದಿನ ನಗರಳ್ಳಿ ಗ್ರಾಮದ ನಿವಾಸಿ  ಎನ್.ಡಿ. ಪೂವಯ್ಯ ನವರ ತೋಟಕ್ಕೆ ದಿನಾಂಕ 14-3-2019 ರಂದು ಅದೇ ಗ್ರಾಮದ ಚೆಂಗಪ್ಪ ಎಂಬವರು ಹಳೆ ದ್ವೇಷದಿಂದ ತೋಟದ ಬದಿಯಲ್ಲಿರುವ ಕೆಲವು ಗೇರು ಮತ್ತು ಕಿತ್ತಳೆ ಮರಗಳನ್ನು ಕಡಿದು ಹಾಕಿದ್ದು ಅಲ್ಲದೆ ಕಾಡಿಗೆ ಬಿಂಕಿಕೊಟ್ಟು ನಷ್ಷಪಡಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.