Crime News

ಕಾರು ಅಪಘಾತ ವ್ಯಕ್ತಿ ಸಾವು:

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ತಣ್ಣಿಮಾನಿ ಗ್ರಾಮದ ನಿವಾಸಿ ಪಿ.ಟಿ. ಭಾನುಪ್ರಕಾಶ್ ಎಂಬವರ ತಂದೆ ಪಿ.ಎಂ. ತಿಮ್ಮಯ್ಯ ಎಂಬವರು ದಿನಾಂಕ 16-3-2019 ರಂದು ಕಾರನ್ನು ಚಾಲನೆ ಮಾಡಿಕೊಂಡು ಭಾಗಮಂಡಲಕ್ಕೆ ಹೋಗಿ ಮತ್ತೆ ಮನೆಯ ಕಡೆಗೆ ಬರುತ್ತಿದ್ದಾಗ ತಣ್ಣೀಮಾನಿ ಗ್ರಾಮದಲ್ಲಿ ಅವರ ಮನೆಯ ಬಳಿ ಬರೆಯೊಂದಕ್ಕೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಅವರನ್ನು ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಸದರಿ ಪಿ.ಎಂ. ತಿಮ್ಮಯ್ಯನವರು ಮೃತಪಟ್ಟಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಸ್ಪೋಟಕ ವಸ್ಯಗಳ ದಾಸ್ತಾನು:

ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕೊಳಕೇರಿ ಗ್ರಾಮದ ನಿವಾಸಿ ಕೆ.ಎ. ಹಂಸ ಎಂಬವರು ನಾಪೋಕ್ಲು ಹಳೆತಾಲೋಕು ನಿವಾಸಿ ಕೇಟೋಳಿರ ಅಶೋಕ ಎಂಬವರ ಕಲ್ಲುಕೋರೆಯಲ್ಲಿ ಸ್ಪೋಟಕ ವಸ್ತುಗಳನ್ನು ಬಳಸುತ್ತಿದ್ದು, ಸದರಿ ವಸ್ತುಗಳನ್ನು ಸದರಿ ಕೆ.ಎ. ಹಂಸರವರ ಮನೆಯಲ್ಲಿ ಅಕ್ರಮವಾಗಿ  ಸಂಗ್ರಹಿಸಿಟ್ಟಿದ್ದನ್ನು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಹೆಚ್.ಎನ್. ಸಿದ್ದಯ್ಯ ರವರು ಸಿಬ್ಬಂದಿಯೊಂದಿಗೆ ಪತ್ತೆ ಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.   

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಲು ಅನುವು:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ತೋರ ಗ್ರಾಮದಲ್ಲಿ ವಿಜಯೇಂದ್ರ @ ವಿಜು ರವರು ನಡೆಸುತ್ತಿರುವ ಅಂಗಡಿ ಮುಂದುಗಡೆ ದಿನಾಂಕ 17-3-2019 ರಂದು ಬೆಳಗ್ಗೆ 11-30 ಗಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳಿಗೆ  ಮದ್ಯಸೇವಿಸಲು ನೀರನ್ನು ಹಾಗು ಲೋಟಗಳನ್ನು ನೀಡಿ ಅನುವುಮಾಡಿಕೊಟ್ಟಿದ್ದು ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗು ಸಿಬ್ಬಂದಿಗಳು ಸದರಿ ಸ್ಥಳಕ್ಕೆ ದಾಳಿ ನಡೆಸಿ ಮೂರು 90 ಎಂ.ಎಲ್‍ ನ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ:

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ಕಾಯಪಂಡ ಚಿನ್ನಪ್ಪನವರ ಮನೆಯ ಹತ್ತಿರ ಸದರಿಯವರು ನಡೆಸುತ್ತಿರುವ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದು ಸದರಿ ಸ್ಥಳಕ್ಕೆ  ಪೊನ್ನಂಪೇಟೆ ಠಾಣೆಯ ಎಎಸ್‍ಐ ಕೆ.ಕೆ. ಗಣಪತಿ ರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಅಕ್ರಮವಾಗಿ ಮಾರಾಟ ಮಾಡಲು ಇಟ್ಟುಕೊಂಡಿರುವ ಸುಮಾರು 4,700/- ರೂ. ಬೆಲೆಬಾಳುವ 96 ಕ್ವಾಟರ್ ಬಾಟಲ್‍ ಗಳನ್ನು ವಶಕ್ಕೆ ಪಡೆದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕಯಗೊಂಡಿದ್ದಾರೆ.

ಸ್ಕೂಟರಿಗೆ ಕಾರು ಡಿಕ್ಕಿ:

ಸೋಮವಾರಪೇಟೆ ಠಾಣಾ ಸರಹದ್ದಿನ ಕರ್ಕಳ್ಳಿ  ಬಳಗುಂದ ಗ್ರಾಮದ ನಿವಾಸಿ ಮಂಜುನಾಥ ಎಂಬವರು ದಿನಾಂಕ 14-2-2019 ರಂದು ರಾತ್ರಿ 9-30 ಗಂಟೆಗೆ ತಮ್ಮ ಬಾಪ್ತು ಸ್ಕೂಟರಿನಲ್ಲಿ  ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಬಸವೇಶ್ವರ ದೇವಸ್ಥಾನದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಮಾರುತಿ ಕಾರೊಂದು ಡಿಕ್ಕಿಯಾಗಿ ಪರಿಣಾಮ ಮಂಜುನಾಥರವರು ರಸ್ತೆಯ ಮೇಲೆ ಬಿದ್ದು ಗಾಯಗೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.