Crime News

ಅಪಘಾತ ಪ್ರಕರಣ

           ದಿನಾಂಕ 18-03-2019 ರಂದು ಮಡಿಕೇರಿ ತಾಲೋಕಿನ ಸಂಪಾಜೆ ಗ್ರಾಮದ ನಿವಾಸಿಯಾದ ಬಾಲಚಂದ್ರ ಎಂಬುವವರು ಮಡಿಕೇರಿಗೆ ಮಾರುತಿ ವ್ಯಾನಿನಲ್ಲಿ ಹೋಗುತ್ತಿರುವಾಗ ಮೇಕೇರಿ ಗ್ರಾಮದ ಗೌರಿ ಶಂಕರ ನರ್ಸರಿ ಬಳಿ ತಲುಪುವಾಗ ಎದುರಿನಿಂದ ಬಂದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನು ಜಖಂಗೊಂಡು ಬಾಲಚಂದ್ರರವರಿಗೆ ತೀವ್ರ ತರಹದ ಗಾಯವಾಗಿ ಮೃತಪಟ್ಟಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

              ದಿನಾಂಕ 18-03-2019 ರಂದು ಮಡಿಕೇರಿ ತಾಲೋಕಿನ ಚೇರಂಗಾಲ ಗ್ರಾಮದ ನಿವಾಸಿಯಾದ ಕಮಲ ಎಂಬುವವರೊಂದಿಗೆ ಲಕ್ಷ್ಮಣ ಎಂಬುವವರು ಹಣ ಸಾಲ ತೆಗೆದುಕೊಂಡ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಕಮಲರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹೊಳೆಯಲ್ಲಿ ಮುಳುಗಿ ವ್ಯಕ್ತಿಯ ಸಾವು

             ದಿನಾಂಕ 19-03-2019 ರಂದು ಜಾರ್ಜ್ @ ರಾಜ ಎಂಬುವವರು ಬಲಮುರಿ ಗ್ರಾಮದ ಕಾವೇರಿ ಹೊಳೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಪತ್ನಿ ಮಂಜುಳಾರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 19-03-2019 ರಂದು ಸೋಮವಾರಪೇಟೆ ತಾಲೋಕಿನ ಶಿರಂಗಾಲ ಗ್ರಾಮದ ನಿವಾಸಿ ಮಂಜುನಾಥ ಎಂಬುವವರು ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ಮಂಜುನಾಥರವರನ್ನು ವಶಕ್ಕೆ ಪಡೆದುಕೊಂಡು 90 ಎಂ ಎಲ್ ನ 30 ಟೆಟ್ರಾ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಜೂಜಾಟ ಪ್ರಕರಣ

            ದಿನಾಂಕ 19-03-2019 ರಂದು ಕೂಡಿಗೆ ಗ್ರಾಮದ ಸೈನಿಕ ಶಾಲೆಯ ಹಿಂಭಾಗದ ಕಾಂಪೌಂಡಿನ ಹೊರಗಡೆ ಜಾಗದಲ್ಲಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿರುವುದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರಿಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆಟವಾಡುತ್ತಿದ್ದ ಕಿರಣ್, ರಘು, ಜೆ. ಕಿರಣ್ ಮತ್ತು ಪ್ರಶಾಂತ್ ರವರನ್ನು ದಸ್ತಗಿರಿ ಮಾಡಿದ್ದು, ಬೋಪಯ್ಯ, ಮುರುಳಿ, ಲೋಕೇಶ್, ಅರಸ್ ಮತ್ತು ಗೆಳೆಯ ಎಂಬುವವರು ಓಡಿ ಹೋಗಿದ್ದು, ಸ್ಥಳದಿಂದ 710 ರೂ ನಗದು ಹಣ, ಎರಡು ಆಟೋ ರಿಕ್ಷಾ, ಒಂದು ಮೋಟಾರು ಸೈಕಲ್ ಹಾಗೂ ಮೂರು ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.