Crime News

ವಾಹನ ಅಪಘಾತ

ದಿನಾಂಕ 28-04-2018 ರಂದು ಮೈಸೂರಿನ ನಿವಾಸಿ ಚಂದನ್ ಎಂಬುವವರು ತನ್ನ ಸಂಸಾರದೊಂದಿಗೆ ಧರ್ಮಸ್ಥಳಕ್ಕೆ ಹೋಗಿದ್ದವರು ವಾಪಾಸ್ಸು ಮೈಸೂರಿಗೆ ಮಡಿಕೇರಿ ಮಾರ್ಗವಾಗಿ ಹೋಗುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಶಾಲೆಯ ಹತ್ತಿರ ತಲುಪುವಾಗ ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಬದಿಯ ಬರೆಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರದಿಂದ ಬಿದ್ದು ವ್ಯಕ್ತಿಯ ಸಾವು

ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಪೆರಾಜೆ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 28-04-2018 ರಂದು ಪೆರಾಜೆ ಗ್ರಾಮದ ನಿವಾಸಿಯಾದ ಪುಂಡರೀಕರವರು ಪೂಜೆಗಾಗಿ ಅಡಿಕೆ ಮರದ ಹೂವನ್ನು ಕೀಳಲು ಅಡಿಕೆ ಮರಕ್ಕೆ ಹತ್ತಿದವರು ಕಾಲು ಜಾರಿ ಮರದಿಂದ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೀಪು ಡಿಕ್ಕಿಯಾಗಿ ಪಾದಚಾರಿಯ ಸಾವು

ಜೀಪು ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ದಿನಾಂಕ 28-04-2018 ರಂದು ಪಿರಿಯಾಪಟ್ಟಣದ ನಿವಾಸಿ ದೇವರಾಜಪ್ಪ ಎಂಬುವವರು ಅಣ್ಣ ಚಂದ್ರಪ್ಪನವರೊಂದಿಗೆ ಕುಶಾಲನಗರದ ಬೈಚನಹಳ್ಳಿಯಲ್ಲಿ ರಸ್ತೆ ದಾಟುತ್ತಿರುವಾಗ ಸುಂಟಿಕೊಪ್ಪದ ಕಡೆಯಿಂದ ಜೀಪನ್ನು ಗರಗಂದೂರು ಗ್ರಾಮದ ಮೌಶಿಕ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ದಾಟುತ್ತಿದ್ದ ಚಂದ್ರಪ್ಪನವರಿಗೆ ಡಿಕ್ಕಿಪಡಿಸಿದ್ದು, ಗಾಯಗೊಂಡ ಚಂದ್ರಪ್ಪನವರು ಮೃತಪಟ್ಟಿದ್ದು, ದೇವರಾಜಪ್ಪನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಆಟೋ ರಿಕ್ಷ ಡಿಕ್ಕಿ

ಪಾದಚಾರಿಗೆ ಆಟೋರಿಕ್ಷಾ ಡಿಕ್ಕಿಯಾಗಿ ಗಾಯವಾದ ಘಟನೆ ಸುಂಟಿಕೊಪ್ಪ ನಗರದಲ್ಲಿ ವರದಿಯಾಗಿದೆ. ದಿನಾಂಕ 27-04-2018 ರಂದು ಸುಂಟಿಕೊಪ್ಪ ನಗರದ ನಿವಾಸಿ ಇಂತಿಯಾಜ್ ರವರ 11 ವರ್ಷ ಪ್ರಾಯ ಮಗ ಮಹಮ್ಮದ್ ಆಶಿಕ್ ಎಂಬುವವರು ಅಣ್ನನೊಂದಿಗೆ ಕೆ.ಇ.ಬಿ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಆಟೋವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಮಹಮ್ಮದ್ ಆಶಿಕ್ ರವರಿಗೆ ಡಿಕ್ಕಿಪಡಿಸಿದ್ದು, ಗಾಯಗೊಂಡ ಮಹಮ್ಮದ್ ಆಶಿಕ್ ನನ್ನು ಚಿಕಿತ್ಸೆಯ ಬಗ್ಗೆ ಮೈಸೂರಿನ ಭಾನವಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ನಾಪತ್ತೆ

ಬಿರುನಾಣಿ ಗ್ರಾಮದ ನಿವಾಸಿಯಾದ ಬಿನು ಎಂಬುವವರು ದಿನಾಂಕ 09-04-2018 ರಂದು ಮನೆಯಿಂದ ಗೋಣಿಕೊಪ್ಪಲುವಿಗೆ ಮನೆಗೆ ಸಾಮಗ್ರಿ ತರಲು ಹೋದವರು ಇದುವರೆಗೂ ವಾಪಾಸ್ಸು ಬಾರದೆ ಇದ್ದು ಈ ಸಂಬಂದ ಪತ್ನಿ ಕವಿತಾರವರು ಪತಿಯವರನ್ನು ಪತ್ತೆ ಹಚ್ಚಿಕೊಡಬೇಕೆಂದು ದಿನಾಂಕ 28-04-2018 ರಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published.