Crime News

ರಸ್ತೆ ಅಪಘಾತ

ದಿನಾಂಕ 23/03/2019ರಂದು ಪುತ್ತೂರಿನ ಕೆಯ್ಯೂರು ನಿವಾಸಿ ಜಯರಾಮ ಎಂಬವರು ಅವರ ಮಿನಿ ಲಾರಿಯಲ್ಲಿ ಮಡಿಕೇರಿಯಿಂದ ಪುತ್ತೂರಿಗೆ ಹೋಗುತ್ತಿರುವಾಗ ಮದೆನಾಡಿನ ಬಳಿ ಒಂದು ಕಾರನ್ನು ಅದರ ಚಾಲಕ ಸಾದಿಕ್ ಎಂಬವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜಯರಾಮರವರು ಚಾಲಿಸುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಜಯರಾಮರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ

ದಿನಾಂಕ 19/03/2019ರಂದು ಹಾಕತ್ತೂರಿನ ತೊಂಬತ್ತು ಮನೆ ಪೈಸಾರಿಯ ತ್ರಿನೇತ್ರ ಯುವಕ ಸಂಘದ ಕಟ್ಟಡವೊಂದರಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾಜಪಾ ಪಕ್ಷದ ಕಾರ್ಯಕರ್ತರು ಉಮೇಶ್ ಎಂಬವರ ನೇತೃತ್ವದಲ್ಲಿ ತ್ರಿನೇತ್ರ ಯುವಕ ಸಂಘದ ಕಟ್ಟಡದಲ್ಲಿ ಚುನಾವಣಾ ಪ್ರಚಾರ ನಡೆಸಿ ಮತದಾರರಿಗೆ   ಆಹಾರ ಮತ್ತು ಪಾನೀಯ ನೀಡಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿ ಲೋಕಸಭಾ ಚುನಾವಣೆ ಸಂಬಂಧ ನೇಮಿಸಿಲಾದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಆದ ಪ್ರಸನ್ನ.ವಿ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ 23/03/2019ರಂದು ವಿರಾಜಪೇಟೆ ಬಳಿಯ ಬಿಳುಗುಂದ ಗ್ರಾಮದಲ್ಲಿ ಮೆಹಬೂಬ್ ಎಂಬವರು ಅವರ ಅಂಗಡಿಯ ಮುಂದೆ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದುದನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಸುರೇಶ್‌ ಬೋಪಣ್ಣರವರು ಪತ್ತೆ ಹಚ್ಚಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ, ಸಾವು

ದಿನಾಂಕ 17/03/2019ರಂದು ಹುದಿಕೇರಿ ಬಳಿಯ ಕೋಣಗೇರಿ ನಿವಾಸಿ ನಂದನ್ ಎಂಬವರ ಮಗ ಶಿವಾಜಿ ಎಂಬಾತನು ಅಭಿಷೇಕ್‌ ಎಂಬವರ ಜೊತೆ ಬೈಕಿನಲ್ಲಿ ಗೋಣಿಕೊಪ್ಪದಿಂದ ಪೊನ್ನಂಪೇಟೆ ಕಡೆಗೆ ಬರುತ್ತಿರುವಾಗ ಅಭಿಷೇಕ್‌ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮವಾಗಿ ಬೈಕು ಅಪಘಾತಕ್ಕೀಡಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶಿವಾಜಿ ದಿನಾಂಕ 23/03/2019ರಂದು ಚಿಕಿತ್ಸೆ ಫಲಕಾರಿಯಾಗದೆ  ಮೃತನಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

ದಿನಾಂಕ 22/03/2019ರಂದು ಪೊನ್ನಂಪೇಟೆ ಬಳಿಯ ಕೊಟ್ಟಗೇರಿ ನಿವಾಸಿ ಪಣಿ ಎರವರ ಅಪ್ಪಣ್ಣ ಎಂಬವರು ಸುಜ ಪೂಣಚ್ಚ ಎಂಬವರ ಕೆರೆಯಲ್ಲಿ ಈಜಲು ಹೋಗಿದ್ದು ಅಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.